ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ; ಬಿಗ್​ ಬಾಸ್​ ನೀಡ್ತೀರೋ ಶಿಕ್ಷೆ ಏನು?

Bigg Boss Kannada: ಎರಡು ವಾರಗಳ ಹಿಂದಿನ ಮಾತು. ಬಿಗ್​ ಬಾಸ್​ನಲ್ಲಿ ಚಕ್ರವರ್ತಿ ಚಂದ್ರಚೂಡ್​ ವಿಚಿತ್ರವಾಗಿ ವರ್ತಿಸಿದ್ದರು. ಅವರು ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಬೀಪ್​ ಸೌಂಡ್​ ಹಾಕಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್​ ಅಸಮಾಧಾನ ಹೊರ ಹಾಕಿದ್ದರು.

ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ; ಬಿಗ್​ ಬಾಸ್​ ನೀಡ್ತೀರೋ ಶಿಕ್ಷೆ ಏನು?
TV9kannada Web Team

| Edited By: Apurva Kumar Balegere

Jul 19, 2021 | 11:26 AM

ಬಿಗ್​​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಎಷ್ಟೇ ಹೇಳಿದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಕಾಣುತ್ತಿಲ್ಲ. ಪದೇಪದೇ ಬಿಗ್​ ಬಾಸ್ ಚೌಕಟ್ಟನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್​ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈ ಬಾರಿ ಬಿಗ್​ ಬಾಸ್​ ನಿಯಮವನ್ನು ಮತ್ತೆ ಮೀರಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಎರಡು ವಾರಗಳ ಹಿಂದಿನ ಮಾತು. ಬಿಗ್​ ಬಾಸ್​ನಲ್ಲಿ ಚಕ್ರವರ್ತಿ ಚಂದ್ರಚೂಡ್​ ವಿಚಿತ್ರವಾಗಿ ವರ್ತಿಸಿದ್ದರು. ಅವರು ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಬೀಪ್​ ಸೌಂಡ್​ ಹಾಕಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್​ ಅಸಮಾಧಾನ ಹೊರ ಹಾಕಿದ್ದರು. ಚಕ್ರವರ್ತಿ ಅವರೇ ನಿಮಗೆ ಇರುವ ಜ್ಞಾನಕ್ಕೆ ಇದು ಸಲ್ಲುವುದಿಲ್ಲ ಎಂದಿದ್ದರು. ಅದಾದ ನಂತರದಲ್ಲಿ ನಾನು ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದಿದ್ದರು ಚಕ್ರವರ್ತಿ. ಇದಾದ ಒಂದೇ ವಾರದಲ್ಲಿ ಅವರು ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ.

ಬಿಗ್​ ಬಾಸ್​ ಸೀಸನ್​ 8 ಮೊದಲ ಇನ್ನಿಂಗ್ಸ್​ನಲ್ಲಿ ಬ್ರೇಕ್​ ಪಡೆದ ನಂತರ ಪ್ರಿಯಾಂಕಾ ಹಾಗೂ ಚಕ್ರವರ್ತಿ ನಡುವೆ ಒಂದು ಗೆಳೆತನ ಬೆಳೆದಿತ್ತು. ಆದರೆ, ಬಿಗ್​ ಬಾಸ್​ ಮನೆಯಲ್ಲಿ ಅದು ದಿಕ್ಕು ಬದಲಿಸಿಕೊಂಡಿತ್ತು. ಪ್ರಿಯಾಂಕಾ-ಶಮಂತ್​ ಅನ್ಯೋನ್ಯವಾಗಿದ್ದಾರೆ ಎನ್ನುವುದೇ ಚಕ್ರವರ್ತಿ ಬೇಸರಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ.

ಜುಲೈ 18ರ ಎಪಿಸೋಡ್​ನಲ್ಲಿ ಪ್ರಿಯಾಂಕಾ ಎಲಿಮಿನೇಟ್​ ಆಗಿದ್ದಾರೆ. ನಾಮಿನೇಷನ್​ ಲಿಸ್ಟ್​ನಲ್ಲಿದ್ದ ವೈಷ್ಣವಿ ಗೌಡ, ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್ ಪೈಕಿ ಕೊನೆಯಲ್ಲಿ ಔಟ್​ ಆಗಿದ್ದು ಪ್ರಿಯಾಂಕಾ. ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅವರಿಗೆ ಬಿಗ್​ ಬಾಸ್ ವಿಶೇಷ ಅಧಿಕಾರ ಒಂದನ್ನು ನೀಡಿದ್ದರು. ಅದರನ್ವಯ ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್​ ಮಾಡಬೇಕು. ಆಗ ಪ್ರಿಯಾಂಕಾ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ್​ ಅವರದ್ದು. ಇದು ಚಕ್ರವರ್ತಿ ಚಂದ್ರಚೂಡ್​ಗೆ ಅಸಮಾಧಾನ ತರಿಸಿದೆ. ಹೀಗಾಗಿ, ಪ್ರಿಯಾಂಕಾಗೆ ಅವರು ಅಶ್ಲೀಲ ಸನ್ನೆ ತೋರಿಸಿದ್ದಾರೆ.

ಸುದೀಪ್​ ಅವರು ಪದೇಪದೇ ಹೇಳಿದರೂ ಚಕ್ರವರ್ತಿ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಇದಕ್ಕೆ ಬಿಗ್ ಬಾಸ್​ ಯಾವುದೇ ಶಿಕ್ಷೆ ನೀಡದೇ ಇರಬಹುದು. ಆದರೆ, ಈ ವಾರದ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಕ್ಲಾಸ್​ ತೆಗೆದುಕೊಳ್ಳೋದು ಪಕ್ಕಾ. ಇನ್ನು, ಚಕ್ರವರ್ತಿ ಈ ನಡೆ ಅನೇಕರಿಗೆ ಅಸಮಾಧಾನ ತರಿಸಿದೆ. ನೇರವಾಗಿ ನಾಮಿನೇಟ್​ ಆಗಿರುವ ಚಕ್ರವರ್ತಿ ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಕಳಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಹೀಗಾಗಿ ಈ ಬಾರಿ ಅವರಿಗೆ ಕಡಿಮೆ ವೋಟ್​ ಬಿದ್ದು ಹೊರನಡೆದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಚಕ್ರವರ್ತಿ ಕಡೆಯಿಂದ ಮತ್ತೆ ರಿಪೀಟ್ ಆಯಿತು ತಪ್ಪು; ಕಿಚ್ಚನ ಬುದ್ಧಿವಾದಕ್ಕೆ ಬದಲಾಗಲಿಲ್ಲ ಚಂದ್ರಚೂಡ್

ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada