ಚಕ್ರವರ್ತಿ ಕಡೆಯಿಂದ ಮತ್ತೆ ರಿಪೀಟ್ ಆಯಿತು ತಪ್ಪು; ಕಿಚ್ಚನ ಬುದ್ಧಿವಾದಕ್ಕೆ ಬದಲಾಗಲಿಲ್ಲ ಚಂದ್ರಚೂಡ್

ಶಮಂತ್​ ಬ್ರೋ ಗೌಡ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಹೈಲೈಟ್​ ಆಗುತ್ತಿದ್ದಾರೆ. ಈ ಮೊದಲು ಪ್ರಿಯಾಂಕಾ ತಿಮ್ಮೇಶ್​ ಜತೆ ಅವರು ಕ್ಲೋಸ್​ ಆಗಿದ್ದರು. ಈ ವಿಚಾರಕ್ಕೆ ಚಕ್ರವರ್ತಿ ಚಂದ್ರಚೂಡ್​ ಸಾಕಷ್ಟು ಉರಿದುಕೊಂಡಿದ್ದರು.

ಚಕ್ರವರ್ತಿ ಕಡೆಯಿಂದ ಮತ್ತೆ ರಿಪೀಟ್ ಆಯಿತು ತಪ್ಪು; ಕಿಚ್ಚನ ಬುದ್ಧಿವಾದಕ್ಕೆ ಬದಲಾಗಲಿಲ್ಲ ಚಂದ್ರಚೂಡ್
ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್​ ಕ್ಲಾಸ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 14, 2021 | 2:59 PM

ಚಕ್ರವರ್ತಿ ಚಂದ್ರಚೂಡ್​ ಕಳೆದವಾರದ ಎಪಿಸೋಡ್​ನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಕಿಚ್ಚ ಸುದೀಪ್​ ಕಡೆಯಿಂದ ಛೀಮಾರಿ ಹಾಕಿಸಿಕೊಂಡಿದ್ದರು. ನಂತರ ತಪ್ಪಿನ ಅರಿವಾಗಿ ಅವರು ಕ್ಷಮೆ ಕೇಳಿದ್ದರು. ಅಲ್ಲದೆ, ‘ಮುಂದಿನ ವಾರ ಹೊಸ ಚಕ್ರವರ್ತಿಯನ್ನು ನೀವು ನೋಡುತ್ತೀರಿ’ ಎಂದು ಪ್ರಾಮಿಸ್​ ಮಾಡಿದ್ದರು. ಆದರೆ, ಈಗ ಅವರು ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದಾರೆ. ಶಮಂತ್​ ಬ್ರೋ ಗೌಡ ವಿರುದ್ಧ ವೈಯಕ್ತಿಕವಾಗಿ ಹರಿಹಾಯ್ದಿದ್ದಾರೆ.

ಶಮಂತ್​ ಬ್ರೋ ಗೌಡ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಹೈಲೈಟ್​ ಆಗುತ್ತಿದ್ದಾರೆ. ಈ ಮೊದಲು ಪ್ರಿಯಾಂಕಾ ತಿಮ್ಮೇಶ್​ ಜತೆ ಅವರು ಕ್ಲೋಸ್​ ಆಗಿದ್ದರು. ಈ ವಿಚಾರಕ್ಕೆ ಚಕ್ರವರ್ತಿ ಚಂದ್ರಚೂಡ್​ ಸಾಕಷ್ಟು ಉರಿದುಕೊಂಡಿದ್ದರು. ಈಗ ದಿವ್ಯಾ ಸುರೇಶ್​ಗೆ ಶಮಂತ್ ಕ್ಲೋಸ್​ ಆಗುತ್ತಿದ್ದಾರೆ. ಈ ವಿಚಾರದಲ್ಲೂ ಚಕ್ರವರ್ತಿ ಸಿಟ್ಟು ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಶಮಂತ್​ ಅವರನ್ನು ಕಂಡರೆ ದಿವ್ಯಾ ಸುರೇಶ್​ ಮಾರು ದೂರ ಹೋಗಿ ನಿಲ್ಲುತ್ತಿದ್ದರು. ಈಗ ಬಿಗ್​ ಬಾಸ್​ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಶಮಂತ್​ ಜತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ ದಿವ್ಯಾ. ಈ ವಾರ ‘ನಿಂಗ್​ ಐತೆ’ ತಂಡದಲ್ಲಿ ಶಮಂತ್​ ಹಾಗೂ ದಿವ್ಯಾ ಸುರೇಶ್​ ಇಬ್ಬರೂ ಇದ್ದಾರೆ. ಈ ತಂಡಕ್ಕೆ ಬಿಗ್​ ಬಾಸ್​ ಚಾಲೆಂಜ್​ ಒಂದನ್ನು ನೀಡಿದ್ದರು.

ಈ ಟಾಸ್ಕ್​ನ ಅನುಸಾರ ನಿಂಗ್​ ಐತೆ ತಂಡದ ಇಬ್ಬರು 10 ಜತೆ ಬಟ್ಟೆಯಲ್ಲಿ ಮಿಂಚಬೇಕು. ಈ ಟಾಸ್ಕ್​ಗೆ ದಿವ್ಯಾ ಹಾಗೂ ಶಮಂತ್​ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಚಿಂಗ್​ ಡ್ರೆಸ್​, ಸಮ್ಮರ್​ ಕಪಲ್​ ಲುಕ್ ಸೇರಿ ನಾನಾ ವಿಧವಾದ ಲುಕ್​ನಲ್ಲಿ ಇವರು ಮಿಂಚಿದ್ದಾರೆ. ಈ ವಿಚಾರದಲ್ಲಿ ಚಕ್ರವರ್ತಿ ಟಾಂಗ್​ ನೀಡಿದ್ದಾರೆ.

‘ನಾನಾ ರೀತಿಯ ಬಟ್ಟೆ ಹಾಕ್ಕೊಂಡು ಏನ್​ ಏನು ಮಾಡ್ತಾ ಇದೀಯಾ? ಇವನು ಯಾವಾಗಲೂ ಎರಡು ದೋಣಿ ಮೇಲೆ ಕಾಲಿಡೋದು. ಈ ಹುಡುಗ ಯಾವಾಗಲಾದರೂ ಒಂದು ದಾರೀಲಿ ನಡೆಯಲ್ಲ’ ಎಂದು ಹೇಳುವ ಮೂಲಕ ಚಕ್ರವರ್ತಿ ಮೊದಲಿನ ಚಾಳಿ ಮುಂದುವರಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​ ಹಾಗೂ ದಿವ್ಯಾ ಜತೆ ಶಮಂತ್​ ಕ್ಲೋಸ್​ ಆಗಿರುವುದಕ್ಕೆ ಈ ಮಾತು ಬಂದಿದೆ.

ಇದನ್ನೂ ಓದಿ: ಅವಾಚ್ಯ ಶಬ್ದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್​ಗೆ ಸುದೀಪ್​ ಹೇಳಿದ್ದೇನು?

‘72 ದಿನಗಳ ಕಾಲ ನೋಡಿದ ಕೆಪಿ ಹೀಗೆ ಇರಲಿಲ್ಲ’; ಚಕ್ರವರ್ತಿ ಪ್ರಭಾವಕ್ಕೊಳಗಾದ ಅರವಿಂದ್​ಗೆ ಸುದೀಪ್​ ಎಚ್ಚರಿಕೆ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು