‘ನಾರಪ್ಪ’ ಟ್ರೇಲರ್​ನಲ್ಲಿ ಅಬ್ಬರಿಸಿದ ವೆಂಕಟೇಶ್​; ಓಟಿಟಿ ರಿಲೀಸ್​ ದಿನಾಂಕ ಬಹಿರಂಗ

Narappa: ತಮಿಳಿನಲ್ಲಿ ಧನುಷ್​​ ನಟಿಸಿದ್ದ ‘ಅಸುರನ್​’ ಚಿತ್ರ ಸೂಪರ್​ ಹಿಟ್​ ಆಗಿತ್ತು. ಅದನ್ನೇ ತೆಲುಗಿನಲ್ಲಿ ‘ನಾರಪ್ಪ’ ಎಂದು ರಿಮೇಕ್​ ಮಾಡಲಾಗಿದ್ದು, ಧನುಶ್​ ಮಾಡಿದ್ದ ಪಾತ್ರವನ್ನು ಟಾಲಿವುಡ್​ನಲ್ಲಿ ದಗ್ಗುಬಾಟಿ ವೆಂಕಟೇಶ್​ ನಿಭಾಯಿಸಿದ್ದಾರೆ.

‘ನಾರಪ್ಪ’ ಟ್ರೇಲರ್​ನಲ್ಲಿ ಅಬ್ಬರಿಸಿದ ವೆಂಕಟೇಶ್​; ಓಟಿಟಿ ರಿಲೀಸ್​ ದಿನಾಂಕ ಬಹಿರಂಗ
ದಗ್ಗುಬಾಟಿ ವೆಂಕಟೇಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 14, 2021 | 3:33 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ನಾರಪ್ಪ’ ಕೂಡ ಇದೆ. ದಗ್ಗುಬಾಟಿ ವೆಂಕಟೇಶ್​ ಮತ್ತು ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕಾಗಿ ಟಾಲಿವುಡ್ ಸಿನಿಪ್ರಿಯರು ಕಾದು ಕುಳಿತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಚಿತ್ರಮಂದಿರದಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಕೊವಿಡ್ ಎರಡನೇ ಅಲೆ ಹಾವಳಿಯ ಕಾರಣದಿಂದ ಚಿತ್ರಮಂದಿರಗಳು ಬಾಗಿಲು ಮುಚ್ಚಿದ ಪರಿಣಾಮ ಓಟಿಟಿಯತ್ತ ನಿರ್ಮಾಪಕರು ಗಮನ ಹರಿಸುವಂತಾಗಿದೆ. ಈಗ ‘ನಾರಪ್ಪ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದ್ದು, ರಿಲೀಸ್​ ದಿನಾಂಕ ಕೂಡ ಬಹಿರಂಗ ಆಗಿದೆ.

ತಮಿಳಿನಲ್ಲಿ ಧನುಷ್​ ನಟಿಸಿದ್ದ ‘ಅಸುರನ್​’ ಚಿತ್ರ ಸೂಪರ್​ ಹಿಟ್​ ಆಗಿತ್ತು. ಅದನ್ನೇ ತೆಲುಗಿನಲ್ಲಿ ‘ನಾರಪ್ಪ’ ಎಂದು ರಿಮೇಕ್​ ಮಾಡಲಾಗಿದ್ದು, ಧನುಷ್​​ ಮಾಡಿದ್ದ ಪಾತ್ರವನ್ನು ಟಾಲಿವುಡ್​ನಲ್ಲಿ ವೆಂಕಟೇಶ್​ ನಿಭಾಯಿಸಿದ್ದಾರೆ. ಎರಡು ಶೇಡ್​ನ ಗೆಟಪ್​ನಲ್ಲಿ ಅವರು ಗಮನ ಸೆಳೆಯುತ್ತಿದ್ದಾರೆ. ಚಿತ್ರದ ಝಲಕ್​ ತೋರಿಸಲು ಇಂದು (ಜು.14) ಟ್ರೇಲರ್​ ಬಿಡುಗಡೆ ಮಾಡಲಾಗಿದೆ.

ಕೊರೊನಾದಿಂದ ಚಿತ್ರಮಂದಿರಗಳು ಬಾಗಿಲು ಮುಚ್ಚಿರುವ ಪರಿಣಾಮ ನೇರವಾಗಿ ಆನ್​ಲೈನ್​ನಲ್ಲೇ ‘ನಾರಪ್ಪ’ ಬಿಡುಗಡೆ ಆಗುತ್ತಿದೆ. ಜು.20ರಂದು ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ನಾರಪ್ಪ ತೆರೆಕಾಣಲಿದೆ. ಓಟಿಟಿಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುವುದನ್ನು ಚಿತ್ರಮಂದಿರಗಳ ಮಾಲೀಕರು ಖಂಡಿಸುತ್ತಿದ್ದಾರೆ. ಅದರ ನಡುವೆಯೂ ‘ನಾರಪ್ಪ’ ನಿರ್ಮಾಪಕರು ಆನ್​ಲೈನ್​ ಮೊರೆ ಹೋಗುತ್ತಿದ್ದಾರೆ.

ಅಮ್ಮು ಅಭಿರಾಮಿ, ಕಾರ್ತಿಕ್​ ರತ್ನಂ, ರಾವ್​ ರಮೇಶ್​ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇರುವ ಜಾತಿ ಸಂಘರ್ಷವನ್ನು ಈ ಸಿನಿಮಾ ಕಟ್ಟಿಕೊಡುತ್ತದೆ. ಮೂಲ ಸಿನಿಮಾದಲ್ಲಿನ ಧನುಷ್​​ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಅಂಥ ಒಂದು ಚಾಲೆಂಜಿಂಗ್​ ಪಾತ್ರವನ್ನು ತೆಲುಗಿನಲ್ಲಿ ವೆಂಕಟೇಶ್​ ಅವರು ಯಾವ ರೀತಿ ನಿಭಾಯಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ತಮಿಳಿನಲ್ಲಿ ನೋಡಿ ಇಷ್ಟಪಟ್ಟಿರುವ ಪ್ರೇಕ್ಷಕರು ತೆಲುಗಿನಲ್ಲಿ ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ.

‘ನಾರಪ್ಪ’ ಚಿತ್ರಕ್ಕೆ ಶ್ರೀಕಾಂತ್​ ಅಡ್ಡಲ ನಿರ್ದೇಶನ ಮಾಡಿದ್ದಾರೆ. ಮನಸೆಳೆಯುವ ನಟನೆಯ ಮತ್ತೆ ಭರ್ಜರಿ ಆ್ಯಕ್ಷನ್​ ದೃಶ್ಯಗಳ ಮೂಲಕ ವೆಂಕಟೇಶ್​ ಅಬ್ಬರಿಸಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಗುತ್ತಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿ ಮೂಲಕ ಯಶಸ್ಸು ಕಂಡಿರುವ ನಟಿ ಪ್ರಿಯಾಮಾಣಿ ಅವರಿಗೆ ‘ನಾರಪ್ಪ’ ಚಿತ್ರದಲ್ಲಿ ಮತ್ತೊಂದು ಗೆಲುವು ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ:

150 ಕೋಟಿ ರೂ. ಬಂಗಲೆ ಕಟ್ಟಿಸುತ್ತಿರುವ ನಟ ಧನುಷ್​​; ಈ ಮನೆಯ ವಿಶೇಷ ಏನು?

Nitish Veera Death: ‘ಅಸುರನ್’​ ಚಿತ್ರದ ನಟ ನಿತೀಶ್​ ವೀರಾ ಕೊರೊನಾ ವೈರಸ್​ಗೆ ಬಲಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ