150 ಕೋಟಿ ರೂ. ಬಂಗಲೆ ಕಟ್ಟಿಸುತ್ತಿರುವ ನಟ ಧನುಷ್​​; ಈ ಮನೆಯ ವಿಶೇಷ ಏನು?

Dhanush Home: 19 ಸಾವಿರ ಚದರ ಅಡಿಯಲ್ಲಿ ಧನುಷ್​ ಅವರ ಮನೆಯನ್ನು ಕಟ್ಟಲಾಗುತ್ತಿದೆ. ಈ ಐಷಾರಾಮಿ ಬಂಗಲೆ ನಾಲ್ಕು ಮಹಡಿಗಳನ್ನು ಹೊಂದಿರಲಿದೆ. ಧನುಷ್​ ಕನಸಿನಂತೆಯೇ ಮನೆಯ ಪ್ರತಿ ಮೂಲೆ ಕೂಡ ವಿನ್ಯಾಸಗೊಳ್ಳಲಿದೆ.

150 ಕೋಟಿ ರೂ. ಬಂಗಲೆ ಕಟ್ಟಿಸುತ್ತಿರುವ ನಟ ಧನುಷ್​​; ಈ ಮನೆಯ ವಿಶೇಷ ಏನು?
ಧನುಷ್​
Follow us
TV9 Web
| Updated By: ಮದನ್​ ಕುಮಾರ್​

Updated on:Jun 28, 2021 | 4:29 PM

ನಟ ಧನುಷ್​​ ಅವರಿಗೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈ ಕಾಲಿವುಡ್​ ನಟ ತಮಿಳಿನಲ್ಲಿ ಮಾತ್ರವಲ್ಲದೆ ಬಾಲಿವುಡ್ ಹಾಗೂ ಹಾಲಿವುಡ್​ನಲ್ಲೂ ಬ್ಯುಸಿ ಆಗಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧನುಷ್​ಗೆ ಎಲ್ಲ ಸಿನಿಮಾದಲ್ಲೂ ಬಹುಕೋಟಿ ಸಂಭಾವನೆ ಕೂಡ ಸಿಗುತ್ತದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಈಗ ಹೊಸದೊಂದು ಮನೆ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರ ಈ ಕನಸಿನ ಬಂಗಲೆ ಬಗ್ಗೆ ಹಲವು ಸುದ್ದಿಗಳು ಕೇಳಿಬರುತ್ತಿವೆ.

ಮನೆಯ ಬಜೆಟ್​ 150 ಕೋಟಿ ರೂ.!

ಇಂಥದ್ದೊಂದು ಬಂಗಲೆ ಕಟ್ಟಿಸಬೇಕು ಎಂಬುದು ಧನುಷ್​ ಅವರ ಬಹುವರ್ಷಗಳ ಕನಸು. ಇಷ್ಟು ವರ್ಷ ಕಷ್ಟಪಟ್ಟು ದುಡಿದಿರುವ ಅವರು ಬರೋಬ್ಬರಿ 150 ಕೋಟಿ ರೂ.ಗಳನ್ನು ಈ ಮನೆ ನಿರ್ಮಾಣಕ್ಕಾಗಿ ವ್ಯಯಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಹಲವು ಕಡೆಗಳಲ್ಲಿ ವರದಿ ಆಗಿದೆ.

ನಾಲ್ಕು ಅಂತಸ್ಥಿನ ಅರಮನೆ

150 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಆಗುತ್ತಿದೆ ಎಂದರೆ, ಅದರಲ್ಲಿನ ಸವಲತ್ತುಗಳು ಹೇಗಿರಲಿದೆ ಎಂದು ಕಲ್ಪಿಸಿಕೊಳ್ಳಬಹುದು. ಬರೋಬ್ಬರಿ 19 ಸಾವಿರ ಚದರ ಅಡಿಯಲ್ಲಿ ಈ ಮನೆಯನ್ನು ಕಟ್ಟಲಾಗುತ್ತಿದೆ. ಈ ಐಷಾರಾಮಿ ಬಂಗಲೆ ನಾಲ್ಕು ಮಹಡಿಗಳನ್ನು ಹೊಂದಿರಲಿದೆ. ಧನುಷ್​ ಅವರ ಕನಸಿನಂತೆಯೇ ಮನೆಯ ಪ್ರತಿ ಮೂಲೆ ಕೂಡ ವಿನ್ಯಾಸಗೊಳ್ಳಲಿದೆ.

ಎಲ್ಲಿ ನಿರ್ಮಾಣ ಆಗುತ್ತಿದೆ ಈ ಬಂಗಲೆ?

ಚೆನ್ನೈನ ಪೋಯಿಸ್ ಗಾರ್ಡನ್​ನಲ್ಲಿ ಧನುಷ್​ ಅವರ ಈ ಬಂಗಲೆ ನಿರ್ಮಾಣ ಆಗುತ್ತಿದೆ. ರಜನಿಕಾಂತ್​ ಸೇರಿದಂತೆ ಕಾಲಿವುಡ್​ನ ಹಲವು ಜನಪ್ರಿಯ ಸೆಲೆಬ್ರಿಟಿಗಳ ಮನೆ ಈ ಏರಿಯಾದಲ್ಲಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ವಾಸಿಸಿದ್ದ ಬಹುಕೋಟಿ ಬಂಗಲೆ ಇರುವುದು ಕೂಡ ಪೋಯಿಸ್​​ ಗಾರ್ಡನ್​ನಲ್ಲಿ. ಈ ವರ್ಷ ಫೆಬ್ರವರಿಯಲ್ಲಿ ಧನುಷ್​ ಅವರು ಭೂಮಿ ಖರೀದಿಸಿದ್ದರು. ಪತ್ನಿ ಐಶ್ವರ್ಯಾ, ಮಾವ ರಜನಿಕಾಂತ್​ ಮತ್ತು ಅತ್ತೆ ಲತಾ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಧನುಷ್​ ನಟನೆಯ ‘ಜಗಮೇ ತಂದಿರನ್​’ ಚಿತ್ರ ಜೂ.18ರಂದು ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಯಿತು. ಟಾಲಿವುಡ್ ನಿರ್ದೇಶಕ ಶೇಖರ್​ ಕಮ್ಮುಲ ಜೊತೆ ಅವರೊಂದು ಸಿನಿಮಾ ಮಾಡುತ್ತಿದ್ದು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಆ ಚಿತ್ರ ಮೂಡಿಬರಲಿದೆ. ಆ ಚಿತ್ರಕ್ಕೆ ಧನುಷ್ 50 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂಬ ಗುಸುಗುಸು ಕೂಡ ಹರಡಿದೆ. ಇದಲ್ಲದೆ, ಹಾಲಿವುಡ್​ನ ಗ್ರೇ ಮ್ಯಾನ್​, ಬಾಲಿವುಡ್​ನ ಅತರಂಗೀ ರೇ ಚಿತ್ರಗಳಲ್ಲಿ ಧನುಷ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ:

Dhanush: ‘ಕರ್ಣನ್’​ ಗೆದ್ದ ಬಳಿಕ ಧನುಷ್​ ಸಂಭಾವನೆ ಏರಿಕೆ; ಖ್ಯಾತ ನಟನಿಗೆ ಈಗ ಸಿಗುತ್ತಿರುವ ಹಣ ಎಷ್ಟು?

ಕೊವಿಡ್​ ಇಳಿಮುಖ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ರಜನಿಕಾಂತ್​; ಕಾರಣ ಏನು?

Published On - 4:27 pm, Mon, 28 June 21

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ