AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಜನಿಸಿ 2 ತಿಂಗಳಾದ ಬಳಿಕ ಸತ್ಯ ಬಿಚ್ಚಿಟ್ಟ ದಿಯಾ ಮಿರ್ಜಾ; ತಾಯಿ-ಮಗು ಪ್ರಾಣಕ್ಕಿತ್ತು ಅಪಾಯ

Dia Mirza Vaibhav Rekhi: ಪ್ರೆಗ್ನೆನ್ಸಿ ಸಂದರ್ಭದಲ್ಲಿ ದಿಯಾ ಮಿರ್ಜಾಗೆ ಅಪೆಂಡಿಸೈಟಿಸ್ ಆಗಿತ್ತು. ಜೊತೆಗೆ ಆತಂಕಕಾರಿ ರೀತಿಯಲ್ಲಿ ಇನ್ಫೆಕ್ಷನ್​ ಕೂಡ ಆಗಿತ್ತು. ಇದರಿಂದ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯ ಎದುರಾಗಿತ್ತು.

ಮಗು ಜನಿಸಿ 2 ತಿಂಗಳಾದ ಬಳಿಕ ಸತ್ಯ ಬಿಚ್ಚಿಟ್ಟ ದಿಯಾ ಮಿರ್ಜಾ; ತಾಯಿ-ಮಗು ಪ್ರಾಣಕ್ಕಿತ್ತು ಅಪಾಯ
ದಿಯಾ ಮಿರ್ಜಾ
TV9 Web
| Edited By: |

Updated on:Jul 14, 2021 | 2:35 PM

Share

ಸೆಲೆಬ್ರಿಟಿಗಳಿಗೆ ಮಗು ಜನಿಸಿದ ಕೂಡಲೇ ದೊಡ್ಡ ಸುದ್ದಿ ಆಗುವುದು ಸಹಜ. ಆದರೆ ಬಾಲಿವುಡ್​ ನಟಿ ದಿಯಾ ಮಿರ್ಜಾ ಅವರಿಗೆ ಮಗು ಜನಿಸಿ 2 ತಿಂಗಳಾಗುವವರೆಗೂ ಆ ವಿಚಾರವನ್ನು ಮುಚ್ಚಿಡಲಾಗಿತ್ತು. ಈಗ ಸ್ವತಃ ದಿಯಾ ಮಿರ್ಜಾ ಅವರು ಸತ್ಯ ಬಾಯಿ ಬಿಟ್ಟಿದ್ದಾರೆ. ಆತಂಕದ ವಿಷಯ ಏನೆಂದರೆ ಅವಧಿಗೂ ಮುನ್ನವೇ ಅವರಿಗೆ ಮಗು ಜನಿಸಿದ್ದು ತಾಯಿ-ಮಗುವಿನ ಪ್ರಾಣಕ್ಕೆ ಅಪಾಯ ಕೂಡ ಎದುರಾಗಿತ್ತು. ಆದರೆ ವೈದ್ಯರ ಆರೈಕೆಯಿಂದಾಗಿ ಇಬ್ಬರೂ ಸೇಫ್​ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ದಿಯಾ ಮಿರ್ಜಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮೇ 14ರಂದು ದಿಯಾ ಮಿರ್ಜಾಗೆ ಮಗು ಜನಿಸಿತ್ತು. ಮಗುವಿಗೆ ಅವ್ಯಾನ್ ಆಜಾದ್​ ರೇಖಿ ಎಂದು ಹೆಸರು ಇಡಲಾಗಿದೆ. ‘ತುಂಬ ಬೇಗ ಜನಿಸಿರುವ ಈ ಚಿಕ್ಕ ಅದ್ಭುತವನ್ನು ವೈದ್ಯರು ಮತ್ತು ನರ್ಸ್​ಗಳು ಐಸಿಯುನಲ್ಲಿ ಇಟ್ಟು ಕಾಪಾಡಿದ್ದಾರೆ’ ಎಂದು ದಿಯಾ ಮಿರ್ಜಾ ತಿಳಿಸಿದ್ದಾರೆ.

ಪ್ರೆಗ್ನೆನ್ಸಿ ಸಂದರ್ಭದಲ್ಲಿ ದಿಯಾ ಮಿರ್ಜಾಗೆ ಅಪೆಂಡಿಸೈಟಿಸ್ ಆಗಿತ್ತು. ಜೊತೆಗೆ ಆತಂಕಕಾರಿ ರೀತಿಯಲ್ಲಿ ಇನ್ಫೆಕ್ಷನ್​ ಕೂಡ ಆಗಿತ್ತು. ಇದರಿಂದ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯ ಎದುರಾಗಿತ್ತು. ಕೂಡಲೇ ಸಿಸರಿನ್​ ಡೆಲಿವರಿ ಮಾಡಿಸಲಾಯಿತು. ಈ ಕಷ್ಟದ ಸಂದರ್ಭದಲ್ಲಿ ತಮ್ಮ ಸಹಾಯಕ್ಕೆ ನಿಂತ ಎಲ್ಲರಿಗೂ, ಬೆಂಬಲ ನೀಡಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ದಿಯಾ ಮಿರ್ಜಾ ಧನ್ಯವಾದ ತಿಳಿಸಿದ್ದಾರೆ. ಆದಷ್ಟು ಬೇಗ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ದಿಯಾ ಮಿರ್ಯಾ ಅವರು ಉದ್ಯಮಿ ವೈಭವ್​ ರೇಖಿ ಜೊತೆ ಮದುವೆ ಆಗಿದ್ದರು. ಇದು ಅವರಿಗೆ ಎರಡನೇ ವಿವಾಹ. ಅದಕ್ಕೂ ಮುನ್ನ 2014ರಲ್ಲಿ ಅವರು ಸಾಹಿಲ್​ ಸಂಘ ಜೊತೆ ಮದುವೆಯಾಗಿ, 2019ರಲ್ಲಿ ವಿಚ್ಛೇದನ ನೀಡಿದ್ದರು. ರೆಹ್ನಾ ಹೈ ತೇರೆ ದಿಲ್​ ಮೆ, ಲಗೇ ರಹೋ ಮುನ್ನಾ ಭಾಯ್​, ಸಂಜು ಮುಂತಾದ ಸಿನಿಮಾಗಳಿಂದ ದಿಯಾ ಮಿರ್ಜಾ ಹೆಚ್ಚು ಫೇಮಸ್​ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲೂ ಅವರು ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ.

ಇದನ್ನೂ ಓದಿ:

‘ಉರಿ’ ನಿರ್ದೇಶಕನ ಜೊತೆ ಗುಟ್ಟಾಗಿ ಮದುವೆಯಾದ ‘ಉಲ್ಲಾಸ ಉತ್ಸಾಹ’ ಚಿತ್ರದ ನಟಿ ಯಾಮಿ ಗೌತಮ್​

ತಾಯಿಯಾದ ಬಳಿಕ ಸೀರಿಯಲ್​ ನಟಿ ಟಾಪ್​ ಲೆಸ್ ಪೋಸ್​; ಬೇಸರಗೊಂಡ ಫ್ಯಾನ್ಸ್​ ಹೇಳಿದ್ದೇನು?

Published On - 1:31 pm, Wed, 14 July 21

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ