‘ಮುಂದಿನ ವರ್ಷ ಮದುವೆ, ನನ್ನದು ಅರೇಂಜ್​ ಮ್ಯಾರೇಜ್’​; ವಿವಾಹದ ಬಗ್ಗೆ ಮತ್ತೊಮ್ಮೆ ಮೌನ ಮುರಿದ ವೈಷ್ಣವಿ

ವೈಷ್ಣವಿಗೆ ವಿವಾಹದ ವಿಚಾರ ಮಾತನಾಡದೆ ಇರೋಕೆ ಸಾಧ್ಯವಾಗುತ್ತಿಲ್ಲ. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಅವರು ಅನೇಕ ಬಾರಿ ಮದುವೆ ವಿಚಾರ ಮಾತನಾಡಿದ್ದಾರೆ. ಆದರೆ, ಹಸೆಮಣೆ ಏರೋದು ಯಾವಾಗ ಎಂದು ಹೇಳಿಕೊಂಡಿರಲಿಲ್ಲ.

‘ಮುಂದಿನ ವರ್ಷ ಮದುವೆ, ನನ್ನದು ಅರೇಂಜ್​ ಮ್ಯಾರೇಜ್’​; ವಿವಾಹದ ಬಗ್ಗೆ ಮತ್ತೊಮ್ಮೆ ಮೌನ ಮುರಿದ ವೈಷ್ಣವಿ

ನಟಿ ವೈಷ್ಣವಿ ಗೌಡ ಬಿಗ್​ ಬಾಸ್​ ಮನೆಯಲ್ಲಿ ಮದುವೆ ವಿಚಾರದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಪರಿಣಾಮ ಮೊದಲ ಇನ್ನಿಂಗ್ಸ್​ ಮುಗಿದಾಗ ಅವರಿಗೆ ಸಾಕಷ್ಟು ಮದುವೆ ಆಫರ್​ಗಳು ಬಂದಿದ್ದವು. ಈಗ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮನೆ ಸೇರಿದ ವೈಷ್ಣವಿ ಮತ್ತೆ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಮದುವೆ ವಿಚಾರ ಮಾತನಾಡಿದ್ದಕ್ಕೆ ಅವರ ತಾಯಿ ಬೇಸರಗೊಂಡಿದ್ದರು. ಇನ್ನೂ ಮದುವೆ ಆಗಿಲ್ಲ ಎಂದು ಕೊರಗಿದರೆ ಮನೆಯವರ ಬಗ್ಗೆ ವೀಕ್ಷಕರು ಏನಂದುಕೊಳ್ಳುವುದಿಲ್ಲ ಎಂದು ವೈಷ್ಣವಿ ತಾಯಿ ಪ್ರಶ್ನೆ ಮಾಡಿದ್ದರು. ಇದು ವೈಷ್ಣವಿಗೆ ಮುಜುಗರ ತಂದಿತ್ತು. ಅಲ್ಲದೆ, ಬಿಗ್​ ಬಾಸ್ ಎರಡನೇ ಇನ್ನಿಂಗ್ಸ್​ನಲ್ಲಿ​ ವೇದಿಕೆ ಏರುವಾಗ ವೈಷ್ಣವಿ ಅವರು ಈ ಬಾರಿ ಮದುವೆ ವಿಚಾರ ಮಾತನಾಡುವುದಿಲ್ಲ ಎಂದು ಹೇಳಿದ್ದರು.

ಆದರೆ, ವೈಷ್ಣವಿಗೆ ವಿವಾಹದ ವಿಚಾರ ಮಾತನಾಡದೆ ಇರೋಕೆ ಸಾಧ್ಯವಾಗುತ್ತಿಲ್ಲ. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಅವರು ಅನೇಕ ಬಾರಿ ಮದುವೆ ವಿಚಾರ ಮಾತನಾಡಿದ್ದಾರೆ. ಆದರೆ, ಹಸೆಮಣೆ ಏರೋದು ಯಾವಾಗ ಎಂದು ಹೇಳಿಕೊಂಡಿರಲಿಲ್ಲ. ಈಗ ಈ ವಿಚಾರದ ಬಗ್ಗೆ ವೈಷ್ಣವಿ ಮೌನ ಮುರಿದಿದ್ದಾರೆ.

ಮಂಜು ಹಾಗೂ ವೈಷ್ಣವಿ ಒಂದೆಡೆ ಕುಳಿತು ಮಾತನಾಡುತ್ತಿದ್ದರು. ‘ನಿಮ್ಮ ಮದುವೆ ಯಾವಾಗ?’ ಎಂದು ಮಂಜು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವೈಷ್ಣವಿ ‘ತಂದೆ ತಾಯಿ ಯಾವಾಗ ನೋಡುತ್ತಾರೋ ಆಗ ನಾನು ಮದುವೆ ಆಗುತ್ತೇನೆ’ ಎಂದರು. ‘ಹಾಗಾದರೆ ಇನ್ನೂ ಎರಡು ವರ್ಷ ವಿಳಂಬವಾಗಬಹುದೇ’ ಎಂದು ಮಂಜು ಪ್ರಶ್ನೆ ಮಾಡಿದರು. ಆಗ ವೈಷ್ಣವಿ, ‘ಇಲ್ಲ. ಅಷ್ಟೊಂದು ವಿಳಂಬವಿಲ್ಲ. ಮುಂದಿನ ವರ್ಷದ ವೇಳೆಗೆ ನಾನು ಮದುವೆ ಆಗುತ್ತೇನೆ. ಸಂಬಂಧಿಗಳಲ್ಲಿ ಮದುವೆ ಆಗುವುದಿಲ್ಲ. ಅದೂ ಅರೆಂಜ್​ ಮ್ಯಾರೇಜ್’​ ಎಂದರು.

ಬಿಗ್​ ಬಾಸ್​ ಸೀಸನ್​ 8 ಇನ್ನು ಮೂರು ವಾರಗಳಲ್ಲಿ ಪೂರ್ಣಗೊಳ್ಳಲಿದೆ. ವೈಷ್ಣವಿ ಗೌಡ ಫಿನಾಲೆ ತಲುಪುವ ಎಲ್ಲಾ ಲಕ್ಷಣ ಗೋಚರವಾಗಿದೆ. ಬಿಗ್​ ಬಾಸ್​ನಿಂದ ವೈಷ್ಣವಿ ಅವರ ನಿಜವಾದ ಕ್ಯಾರೆಕ್ಟರ್​ ಅನಾವರಣಗೊಂಡಿದ್ದು, ಅವರ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹಿರಿದಾಗಿದೆ.

ಇದನ್ನೂ ಓದಿ: ನಾನು ಮದುವೆ ಆದ್ಮೇಲೆ ಮೋಸ ಮಾಡಲ್ಲ; ಮನಸಿನ ಮಾತು ಬಿಚ್ಚಿಟ್ಟ ವೈಷ್ಣವಿ

ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ವೈಷ್ಣವಿ; ಪ್ರಶಾಂತ್​ ವಿರುದ್ಧ ತಿರುಗಿಬಿದ್ದ ನಟಿ

Click on your DTH Provider to Add TV9 Kannada