ಪ್ರಶಾಂತ್ ವಿಚಾರದಲ್ಲಿ ಬೇಸರಗೊಂಡ ವೀಕ್ಷಕರು; ಮಾತಿಗೆ ತಪ್ಪೋದು ಇಷ್ಟೊಂದು ಸುಲಭವಾ?
ಪ್ರಶಾಂತ್ ಸಂಬರಗಿ ವಿಚಾರದಲ್ಲಿ ಚಕ್ರವರ್ತಿ ಚಂದ್ರಚೂಡ್ ಸುಳ್ಳು ಹೇಳುತ್ತಿರುವ ವಿಚಾರ ಮನೆಯಲ್ಲಿ ಸಾಬೀತಾಗಿತ್ತು. ಈ ವಿಚಾರದ ನಂತರ ಪ್ರಶಾಂತ್ ಹಾಗೂ ಚಕ್ರವರ್ತಿ ಗೆಳೆತನದಲ್ಲಿ ಬಿರುಕು ಮೂಡಿತ್ತು.
ಕನ್ನಡ ಬಿಗ್ ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್ನಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಒಳ್ಳೆಯ ಗೆಳೆತನವಿದೆ. ಆದರೆ, ಇತ್ತೀಚೆಗೆ ನಡೆದ ಜಗಳದಿಂದ ಇಬ್ಬರೂ ಬೇರೆ ಆಗಿದ್ದರು. ಇಬ್ಬರೂ ಮತ್ತೆ ಒಂದಾಗುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈಗ ಎಲ್ಲವೂ ಉಲ್ಟಾ ಆಗಿದೆ. ಅಷ್ಟೇ ಅಲ್ಲ, ಪ್ರಶಾಂತ್ ಬಗ್ಗೆ ಅನೇಕರು ಬೇಸರ ಹೊರ ಹಾಕಿದ್ದಾರೆ.
ಪ್ರಶಾಂತ್ ಸಂಬರಗಿ ವಿಚಾರದಲ್ಲಿ ಚಕ್ರವರ್ತಿ ಚಂದ್ರಚೂಡ್ ಸುಳ್ಳು ಹೇಳುತ್ತಿರುವ ವಿಚಾರ ಮನೆಯಲ್ಲಿ ಸಾಬೀತಾಗಿತ್ತು. ಈ ಘಟನೆ ನಂತರದಲ್ಲಿ ಪ್ರಶಾಂತ್ ಹಾಗೂ ಚಕ್ರವರ್ತಿ ಗೆಳೆತನದಲ್ಲಿ ಬಿರುಕು ಮೂಡಿತ್ತು. ಈ ವಿಚಾರ ವೀಕೆಂಡ್ನಲ್ಲೂ ಚರ್ಚೆಗೆ ಬಂದಿದೆ. ಇದಾದ ಮರುವಾರ (ಹಿಂದಿನ ವಾರ) ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರಗಿ ಅಷ್ಟಾಗಿ ಮಾತನಾಡಿಕೊಂಡಿಲ್ಲ.
‘ನಾನು ಚಕ್ರವರ್ತಿ ಜತೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುತ್ತಿದ್ದೇನೆ. ಅವನ ಜತೆ ಇದ್ದರೆ ನನಗೂ ಕೂಡ ಕೆಟ್ಟ ಹೆಸರು ಬರುತ್ತದೆ. ಚಕ್ರವರ್ತಿ ಯಾಕೋ ತುಂಬಾನೇ ಬದಲಾಗಿದ್ದಾರೆ’ ಎಂದು ಮನೆಯ ಎಲ್ಲಾ ಸದಸ್ಯರ ಜತೆ ಪ್ರಶಾಂತ್ ಹೇಳಿಕೊಂಡು ಬಂದಿದ್ದರು. ಆದರೆ, ಈ ವಾರ ಎಲ್ಲವೂ ಮೊದಲಿನಂತೆ ಆಗಿದೆ.
ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಮತ್ತೆ ಒಂದಾಗಿದ್ದಾರೆ. ಇಬ್ಬರೂ ಕುಳಿತು ಮನೆಯ ಆ ಸದಸ್ಯರು ಹೀಗೆ, ಈ ಸದಸ್ಯರು ಹಾಗೆ ಎಂದೆಲ್ಲ ಮಾತನಾಡಿಕೊಂಡಿದ್ದಾರೆ. ದಿವ್ಯಾ ಉರುಡುಗ ಅವರಿಗೆ ಕಿಚ್ಚನ ಚಪ್ಪಾಳಿ ಸಿಕ್ಕಿತ್ತು. ಇಡೀ ಬಿಗ್ ಬಾಸ್ ಮನೆಯ ಜರ್ನಿ ಇಟ್ಟುಕೊಂಡು ಈ ಚಪ್ಪಾಳೆ ನೀಡಲಾಗಿತ್ತು. ಈ ವಿಚಾರದ ಬಗ್ಗೆ ಪ್ರಶಾಂತ್-ಚಕ್ರವರ್ತಿ ಹೊಟ್ಟೆಕಿಚ್ಚಿನ ಮಾತುಗಳನ್ನು ಆಡಿಕೊಂಡಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಕಳೆದ ಕೆಲ ವಾರಗಳಿಂದ ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟವಾಗಿಲ್ಲ. ಈ ಬಾರಿಯಂತೂ ಅವರು ಪ್ರಿಯಾಂಕಾ ತಿಮ್ಮೇಶ್ಗೆ ಮಧ್ಯ ಬೆರಳು ತೋರಿಸುವ ಮೂಲಕ ಎಲ್ಲರ ಕೋಪಕ್ಕೆ ಕಾರಣವಾಗಿದ್ದರು. ಈ ಮಧ್ಯೆ ಪ್ರಶಾಂತ್ ತುಂಬಾನೇ ಬದಲಾಗಿದ್ದರು. ಎಲ್ಲರ ಜತೆಯೂ ಸಾಫ್ಟ್ ಆಗಿ ನಡೆದುಕೊಳ್ಳುತ್ತಿದ್ದರು. ಹಿಂದಿನಿಂದ ಮಾತನಾಡುವುದನ್ನು ನಿಲ್ಲಿಸಿದ್ದರು. ಆದರೆ, ಈಗ ಅವರು ಮತ್ತೆ ಮೊದಲಿನಂತೆ ಆಗಿರುವುದು ವೀಕ್ಷಕರಿಗೆ ಬೇಸರ ತರಿಸಿದೆ. ಮಾತಿಗೆ ತಪ್ಪೋದು ಇಷ್ಟೊಂದು ಸುಲಭವಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಒದಿ: ‘ನಿಮಗೂ ಮಧ್ಯಬೆಟ್ಟು ತೋರಿಸೋಕೆ ಕಾಯುತ್ತಿದ್ದೇವೆ’; ಚಕ್ರವರ್ತಿ ಚಂದ್ರಚೂಡ್ ಹೊರಹಾಕಲು ಆರಂಭವಾಗಿದೆ ಅಭಿಯಾನ