ಸ್ಪರ್ಧಿಗಳನ್ನು ಪ್ರಶಂಸಿಸಲು ಜಡ್ಜ್​ಗಳು ಅತಿರೇಕಕ್ಕೆ ಹೋಗುತ್ತಾರೆ; ರಿಯಾಲಿಟಿ ಶೋ ಬಗ್ಗೆ ಸೋನು ನಿಗಮ್​ ಬೇಸರ

Sonu Nigam: ಕಿರುತೆರೆ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಮನರಂಜನಾ ವಾಹಿನಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತವೆ. ಅದರಲ್ಲೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮೋಡಿ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ.

ಸ್ಪರ್ಧಿಗಳನ್ನು ಪ್ರಶಂಸಿಸಲು ಜಡ್ಜ್​ಗಳು ಅತಿರೇಕಕ್ಕೆ ಹೋಗುತ್ತಾರೆ; ರಿಯಾಲಿಟಿ ಶೋ ಬಗ್ಗೆ ಸೋನು ನಿಗಮ್​ ಬೇಸರ
ಸ್ಪರ್ಧಿಗಳನ್ನು ಪ್ರಶಂಸಿಸಲು ಜಡ್ಜ್​ಗಳು ಅತಿರೇಕಕ್ಕೆ ಹೋಗುತ್ತಾರೆ; ರಿಯಾಲಿಟಿ ಶೋ ಬಗ್ಗೆ ಸೋನು ನಿಗಮ್​ ಬೇಸರ

ಇಂಡಿಯನ್​ ಐಡಲ್​ ಶೋ ಬಗ್ಗೆ ಸಾಕಷ್ಟು ಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಟಿಆರ್​ಪಿಗೋಸ್ಕರ ಇಲ್ಲ-ಸಲ್ಲದ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಜಡ್ಜ್​ ಹಾಗೂ ಸ್ಪರ್ಧಿಗಳು ಕಿಡಿಕಾರಿದ್ದರು. ಈಗ ರಿಯಾಲಿಟಿ ಶೋ ಜಡ್ಜ್​ಗಳು ಮಾಡುವ ತಪ್ಪುಗಳ ಬಗ್ಗೆ ಸೋನು ನಿಗಮ್​ ಬೇಸರ ಹೊರ ಹಾಕಿದ್ದಾರೆ.

‘ಸ್ಪರ್ಧಿಗಳನ್ನು ಪ್ರಶಂಸಿಸಲು ಹೆಚ್ಚಿನ ಸಮಯ ಜಡ್ಜ್​ಗಳು ಅತಿರೇಕಕ್ಕೆ ಹೋಗುತ್ತಾರೆ. ಆದರೆ ಇದು ಸ್ಪರ್ಧಿಗಳಿಗೆ ಮತ್ತು ಅವರ ವೃತ್ತಿಜೀವನಕ್ಕೆ ಒಳ್ಳೆಯದಲ್ಲ. ನಾವು ಜಡ್ಜ್​ಗಳು, ಮಾರ್ಗದರ್ಶಕರು, ನಮಗೆ ಒಂದು ಜವಾಬ್ದಾರಿ ಇದೆ. ಜಡ್ಜ್​​ಗಳಾಗಿ ನಾವು ಅವರಿಗೆ ಪ್ರಾಮಾಣಿಕ ವಿಮರ್ಶೆ ಮತ್ತು ಪ್ರತಿಕ್ರಿಯೆಯನ್ನು ನೀಡಬೇಕು’ ಎಂದಿದ್ದಾರೆ ಸೋನು ನಿಗಮ್.

‘ನೀವು ಅವರನ್ನು ಹೊಗಳುತ್ತಲೇ ಇದ್ದರೆ ಅವರಿಗೆ ಎಂದಿಗೂ ಸತ್ಯ ತಿಳಿಯುವುದಿಲ್ಲ. ಅವರ ಪರ್ಫಾರ್ಮೆನ್ಸ್​ ಉತ್ತಮವಾಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಅವರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ? ನಿಮ್ಮ ತಪ್ಪುಗಳ ಮೂಲಕ ನೀವು ಕಲಿಯುತ್ತೀರಿ, ಅದು ಒಳ್ಳೆಯದು. ವೇದಿಕೆಯಲ್ಲಿ ಏನಾದರೂ ತಪ್ಪಾದಲ್ಲಿ, ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ’ ಎಂದಿದ್ದಾರೆ ಸೋನು ನಿಗಮ್.

ಕಿರುತೆರೆ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಮನರಂಜನಾ ವಾಹಿನಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತವೆ. ಅದರಲ್ಲೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮೋಡಿ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಬಗ್ಗೆ ಪರ-ವಿರೋಧದ ಅನೇಕ ಚರ್ಚೆಗಳು ಸೋಶಿಯಲ್​ ಮೀಡಿಯಾದಲ್ಲಿ ನಡೆದಿದೆ. ಇತ್ತೀಚೆಗೆ ನಡೆದ ‘ಇಂಡಿಯನ್​ ಐಡಲ್​’  ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಗಾಯಕ ಆಶಿಷ್​ ಕುಲಕರ್ಣಿ ಅವರನ್ನು ಎಲಿಮಿನೇಟ್​ ಮಾಡಲಾಗಿದೆ. ಈ ಬಗ್ಗೆ ಪ್ರೇಕ್ಷಕರಿಗೆ ತೀವ್ರ ಬೇಸರ ಆಗಿದೆ. ಮತ್ತೋರ್ವ ಗಾಯಕಿ ಷಣ್ಮುಖಪ್ರಿಯಾ ಅವರು ಎಲಿಮಿನೇಷನ್​ನಿಂದ ಬಜಾವ್​ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. ಇಂಡಿಯನ್​ ಐಡಲ್​ ಶೋನಲ್ಲಿ ಮೋಸದ ಎಲಿಮಿನೇಷನ್​ ನಡೆದಿದೆ ಎಂದು ನೆಟ್ಟಿಗರು ಟ್ವೀಟ್​ಮಾಡಿದ್ದರು.

ಇದನ್ನೂ ಓದಿ: ನಿರಂತರ ಬೆದರಿಕೆ; ದರ್ಶನ್​ ಹಿಂಬಾಲಕ ವಿರುದ್ಧ ಸೈಬರ್​ ಪೊಲೀಸರಿಗೆ ಇಂದ್ರಜಿತ್​ ದೂರು

‘ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್’; ದರ್ಶನ್​ ಬೆಂಬಲಕ್ಕೆ ನಿಂತ ಯುವ ನಟ

Read Full Article

Click on your DTH Provider to Add TV9 Kannada