ನಿರಂತರ ಬೆದರಿಕೆ; ದರ್ಶನ್​ ಹಿಂಬಾಲಕ ವಿರುದ್ಧ ಸೈಬರ್​ ಪೊಲೀಸರಿಗೆ ಇಂದ್ರಜಿತ್​ ದೂರು

ಇಂದು (ಜುಲೈ 19) ಇಂದ್ರಜಿತ್​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದಕ್ಕೆ ಕಾರಣ ಅವರಿಗೆ ಬರುತ್ತಿರುವ ಬೆದರಿಕೆಗಳು. ಕಳೆದ 24 ಗಂಟೆಯಲ್ಲಿ  ಪ್ರತಿ 30 ಸೆಕೆಂಡ್​ಗೆ ಒಂದು ಕರೆ ಬರ್ತಿದೆ. ಅಶ್ಲೀಲ ಚಿತ್ರಗಳಲ್ಲದೆ, ಅಶ್ಲೀಲ ಮೆಸೇಜ್​ಕೂಡ ಬರ್ತಿದೆ ಎಂದಿದ್ದಾರೆ ಇಂದ್ರಜಿತ್.


ನಿರ್ದೇಶಕ ಇಂದ್ರಜಿತ್ ಲಂಕೇಶ್​ ಹಾಗೂ ನಟ ದರ್ಶನ್​ ನಡುವಿನ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರವಾಗುತ್ತಿಲ್ಲ. ಇಂದ್ರಜಿತ್​ ಮಾಡುವ ಆರೋಪಕ್ಕೆ ದರ್ಶನ್​ ಉತ್ತರ ನೀಡಿದರೆ, ದರ್ಶನ್​ ಮಾಡುವ ಪ್ರತ್ಯಾರೋಪಕ್ಕೆ ಇಂದ್ರಜಿತ್​ ಉತ್ತರಿಸುತ್ತಿದ್ದಾರೆ. ಹೀಗಾಗಿ, ಇಬ್ಬರ ನಡುವಿನ ಕಿತ್ತಾಟ ಮುಂದುವರಿಯುತ್ತಲೇ ಇದೆ. ಇಂದು (ಜುಲೈ 19) ಇಂದ್ರಜಿತ್​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದಕ್ಕೆ ಕಾರಣ ಅವರಿಗೆ ಬರುತ್ತಿರುವ ಬೆದರಿಕೆಗಳು. ‘ಕಳೆದ 24 ಗಂಟೆಯಲ್ಲಿ  ಪ್ರತಿ 30 ಸೆಕೆಂಡ್​ಗೆ ಒಂದು ಕರೆ ಬರ್ತಿದೆ. ಅಶ್ಲೀಲ ಚಿತ್ರಗಳಲ್ಲದೆ, ಅಶ್ಲೀಲ ಮೆಸೇಜ್​ಕೂಡ ಬರ್ತಿದೆ. ಹೀಗಾಗಿ ಸೈಬರ್​ ಕ್ರೈಮ್​ಗೆ ದೂರು ನೀಡುತ್ತಿದ್ದೇನೆ. ಅವರಿಗೆ ಪಾಠ ಕಲಿಸುತ್ತೇನೆ’ ಎಂದು ಎಚ್ಚರಿಸಿದ್ದಾರೆ ಇಂದ್ರಜಿತ್​.