ರೋಸ್ ಕೋಕೊನೆಟ್ ಬಾಲ್; ಮಕ್ಕಳಿಗೆ ಇಷ್ಟವಾಗುವ ತಿಂಡಿಯನ್ನು ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ರೋಸ್ ಕೋಕೊನೆಟ್ ಬಾಲ್ ಅನ್ನು 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು.
ಲಾಕ್ಡೌನ್ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು, ರೋಸ್ ಕೋಕೊನೆಟ್ ಬಾಲ್ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ರೋಸ್ ಕೋಕೊನೆಟ್ ಬಾಲ್ ಅನ್ನು 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ರೋಸ್ ಕೋಕೊನೆಟ್ ಬಾಲ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ರೋಸ್ ಕೋಕೊನೆಟ್ ಬಾಲ್ ಮಾಡಲು ಬೇಕಾಗುವ ಸಾಮಾಗ್ರಿಗಳು ಗೋಡಂಬಿ, ದ್ರಾಕ್ಷಿ, ಟೂಟಿ ಫ್ರೂಟಿ, ಗುಲ್ಕನ್, ಬಾದಾಮಿ, ಮಿಕ್ಸಿಡ್ ಸೀಡ್ಸ್, ಒಣಕೊಬ್ಬರಿ, ಮಿಲ್ಕ್ ಮೇಡ್, ಏಲಕ್ಕಿ ಪುಡಿ, ರೋಸ್ ಸಿರಪ್, ಪಾನ್ ಸೀರಪ್, ಫುಡ್ ಕಲರ್, ಎಸೆನ್ಸ್
ರೋಸ್ ಕೋಕೊನೆಟ್ ಬಾಲ್ ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಒಣಕೊಬ್ಬರಿ,ರೋಸ್ ಸಿರಪ್, ಪಾನ್ ಸೀರಪ್, ಫುಡ್ ಕಲರ್, ಎಸೆನ್ಸ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಬಾಲ್ ಆಕಾರಕ್ಕೆ ಮಾಡಿಟ್ಟುಕೊಳ್ಳಿ. ಬಳಿಕ ಇನ್ನೊಂದು ಪಾತ್ರೆಯಲ್ಲಿ, ಗೋಡಂಬಿ, ದ್ರಾಕ್ಷಿ, ಟೂಟಿ ಫ್ರೂಟಿ, ಗುಲ್ಕನ್, ಬಾದಾಮಿ, ಮಿಕ್ಸಿಡ್ ಸೀಡ್ಸ್, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಇದನ್ನು ಒಣಕೊಬ್ಬರಿ ಉಂಡೆಯ ಮಧ್ಯದಲ್ಲಿ ಇಟ್ಟು, ಬಾಲ್ ಆಕಾರಕ್ಕೆ ಮಾಡಿಕೊಳ್ಳು. ಈಗ ರುಚಿಕರವಾದ ರೋಸ್ ಕೋಕೊನೆಟ್ ಬಾಲ್ ಸವಿಯಲು ಸಿದ್ಧ.
ಇದನ್ನೂ ಓದಿ:
ಉತ್ತರ ಭಾರತದ ಡೋಕ್ಲಾ ತಿಂಡಿ ತಿಂದಿದ್ದೀರಾ? ವಿಧಾನ ಸುಲಭವಿದೆ