AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಭಾರತದ ಡೋಕ್ಲಾ ತಿಂಡಿ ತಿಂದಿದ್ದೀರಾ? ವಿಧಾನ ಸುಲಭವಿದೆ

TV9 Web
| Updated By: sandhya thejappa

Updated on: Jun 17, 2021 | 8:42 AM

ಬೇರೆ ಬೇರೆ ಕಡೆ ಯಾವ ಯಾವ ತಿಂಡಿ ಮಾಡುತ್ತಾರೆ? ಹೇಗೆ ಮಾಡುತ್ತಾರೆ? ರುಚಿ ಹೇಗೆ ಇರುತ್ತೆ? ಇವೆಲ್ಲವನ್ನೂ ತಿಳಿದಿರಬೇಕು. ಉತ್ತರ ಭಾರತದ ಈ ಡೋಕ್ಲಾ ತಿಂಡಿ ಮಕ್ಕಳಿಗೆ ಇಷ್ಟವಾಗುತ್ತೆ. ಒಂದು ಬಾರಿ ಡೋಕ್ಲಾ ಮಾಡಿ ತಿಂದರೆ ಸಾಕು ಪದೇ ಪದೇ ತಿನ್ನಬೇಕು ಅಂತ ಅನಿಸುತ್ತೆ.


ಕಡಲೆ ಹಿಟ್ಟಿನಿಂದ ಬೋಂಡಾ, ಬಜ್ಜಿ ಮಾಡಿ ತಿಂದಿದ್ದೀರಾ. ಆದರೆ ಡೋಕ್ಲಾ ಅನ್ನೊ ತಿಂಡಿನ ತಿಂದಿದ್ದೀರಾ? ಬಹುತೇಕರಿಗೆ ಡೋಕ್ಲಾ ತಿಂಡಿ ಬಗ್ಗೆ ಗೊತ್ತೇ ಇಲ್ಲ. ಈ ತಿಂಡಿ ಉತ್ತರ ಭಾರತದ ಸ್ಪೆಷಲ್. ಮನೆಯಲ್ಲಿ ದಿನಕ್ಕೊಂದು ತಿಂಡಿ ಮಾಡಿ ಸವಿಯಬೇಕು. ಬೇರೆ ಬೇರೆ ಕಡೆ ಯಾವ ಯಾವ ತಿಂಡಿ ಮಾಡುತ್ತಾರೆ? ಹೇಗೆ ಮಾಡುತ್ತಾರೆ? ರುಚಿ ಹೇಗೆ ಇರುತ್ತೆ? ಇವೆಲ್ಲವನ್ನೂ ತಿಳಿದಿರಬೇಕು. ಉತ್ತರ ಭಾರತದ ಈ ಡೋಕ್ಲಾ ತಿಂಡಿ ಮಕ್ಕಳಿಗೆ ಇಷ್ಟವಾಗುತ್ತೆ. ಒಂದು ಬಾರಿ ಡೋಕ್ಲಾ ಮಾಡಿ ತಿಂದರೆ ಸಾಕು ಪದೇ ಪದೇ ತಿನ್ನಬೇಕು ಅಂತ ಅನಿಸುತ್ತೆ.

ಹೊಸ ಅಡುಗೆಗಳಿಗೆ ತುಂಬಾ ಸಾಮಾಗ್ರಿಗಳು ಬೇಕಾಗುತ್ತದೆ. ಮನೆಯಲ್ಲಿ ಒಂದಿದ್ದರೆ ಇನ್ನೊಂದು ಇರಲ್ಲ. ಅದು ಇಲ್ಲ, ಇದು ಇಲ್ಲ ಅಂತ ಅಡುಗೆ ಮಾಡಲು ಮನಸಾಗಲ್ಲ. ಆದರೆ ಸರಳವಾಗಿ, ಮನೆಯಲ್ಲೇ ಇರುವ ಸಾಮಾಗ್ರಿಗಳಲ್ಲಿ ಈ ಡೋಕ್ಲಾ ಮಾಡಬಹುದು. ಡೋಕ್ಲಾ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ,

ಕಡಲೆ ಹಿಟ್ಟು
ಚಿರೋಟಿ ರವೆ
ಮೊಸರು
ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು

ಇದನ್ನೂ ನೋಡಿ

ಕೋಲಾರ ಸ್ಟೈಲ್ ಚಿಕನ್ ಪೆಪ್ಪರ್ ಫ್ರೈನ ಹೇಗೆ ಮಾಡ್ತಾರೆ ನೋಡಿ

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್

(How to make north india special dhokla)