ನಿಪ್ಪಟ್​ ಮಸಾಲ: ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ನಿಪ್ಪಟ್ ಮಸಾಲವನ್ನು 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ನಿಪ್ಪಟ್​ ಮಸಾಲ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

TV9kannada Web Team

| Edited By: preethi shettigar

Jul 17, 2021 | 7:46 AM

ಲಾಕ್​ಡೌನ್​ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು​ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ನಿಪ್ಪಟ್ ಮಸಾಲವನ್ನು 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ನಿಪ್ಪಟ್​ ಮಸಾಲ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ನಿಪ್ಪಟ್​ ಮಸಾಲ ಮಾಡಲು ಬೇಕಾಗುವ ಸಾಮಾಗ್ರಿಗಳು ನಿಪ್ಪಟ್ಟು, ಓಂ ಪುಡಿ, ಹಸಿ ಮೆಣಸಿನಕಾಯಿ, ಟೊಮೆಟೋ ಸಾಸ್​, ಉಪ್ಪು, ಪುದೀನಾ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು, ಟೊಮೆಟೋ, ಈರುಳ್ಳಿ, ಕ್ಯಾರೆಟ್, ಬೆಲ್ಲ ಮತ್ತು ಹುಣಸೆ ಹಣ್ಣಿನ ಪೇಸ್ಟ್.

ನಿಪ್ಪಟ್​ ಮಸಾಲ ಮಾಡುವ ವಿಧಾನ:
ಮೊದಲು ಒಂದು ನಿಪ್ಪಟ್ಟು ತೆಗೆದುಕೊಂಡು ಚೆನ್ನಾಗಿ ಅದಕ್ಕೆ ಟೊಮೆಟೋ ಸಾಸ್​ ಹಚ್ಚಿ, ನಂತರ ಪುದೀನಾ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್, ಉಪ್ಪು, ಗರಂ ಮಸಾಲಾ, ಟೊಮೆಟೋ, ಈರುಳ್ಳಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಹುಣಸೆ ಮತ್ತು ಬೆಲ್ಲದ ಪೇಸ್ಟ್ ಹಾಕಿ ಅದರ ಮೇಲೆ ಓಂ ಪುಡಿ ಹಾಕಿದರೆ ನಿಪ್ಪಟ್​ ಮಸಾಲಾ ಸವಿಯಲು ಸಿದ್ಧ.

ಇದನ್ನೂ ಓದಿ:
Fried Chicken : ಆನ್ಲೈನ್ ಆರ್ಡರ್ ನಲ್ಲಿ ಫ್ರೈಡ್ ಚಿಕನ್ ಬದಲಿಗೆ ಈ ಕುಟುಂಬಕ್ಕೆ ಫ್ರೈಡ್ ಟವೆಲ್ ತಲುಪಿತ್ತು…

Pizza: ಮನೆಯಲ್ಲಿ ಪಿಜ್ಜಾ ಮಾಡುವುದು ಕಷ್ಟ ಅಂತೀರಾ, ಸರಳ ವಿಧಾನದ ಜತೆ ಮಾಡಿ ಸವಿಯಿರಿ

Follow us on

Click on your DTH Provider to Add TV9 Kannada