Pizza: ಮನೆಯಲ್ಲಿ ಪಿಜ್ಜಾ ಮಾಡುವುದು ಕಷ್ಟ ಅಂತೀರಾ, ಸರಳ ವಿಧಾನದ ಜತೆ ಮಾಡಿ ಸವಿಯಿರಿ
Pizza Recipe: ಸರಳ ವಿಧಾನದ ಜತೆಗೆ ಪಿಜ್ಜಾ, ಬರ್ಗರ್ ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಪಿಜ್ಜಾವನ್ನು 20 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಪಿಜ್ಜಾ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಲಾಕ್ಡೌನ್ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಪಿಜ್ಜಾವನ್ನು 20 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಪಿಜ್ಜಾ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಪಿಜ್ಜಾ ಮಾಡಲು ಬೇಕಾಗುವ ಸಾಮಾಗ್ರಿಗಳು, ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು, ಬೇಕಿಂಗ್ ಪೌಡರ್, ಮೊಸರು, ಟೊಮೆಟೋ, ಈರುಳ್ಳಿ, ಎಲೆಕೋಸ್, ಟೊಮೆಟೋ ಸಾಸ್, ಸ್ವಾಝಾವಾನ್ ಸಾಸ್, ಚಿಲ್ಲಿ ಪ್ಲೈಸ್, ಕರಿಮೆಣಸು ಪುಡಿ, ಚೀಸ್.
ಪಿಜ್ಜಾ ಮಾಡುವ ವಿಧಾನ:
ಒಂದು ಬೌಲ್ಗೆ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು, ಬೇಕಿಂಗ್ ಪೌಡರ್, ಮೊಸರು, ಉಪ್ಪು ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿ, ಬಳಿಕ ಅದನ್ನು ರೋಟಿ ರೀತಿಯಲ್ಲಿ ಮಾಡಿ ಇಟ್ಟುಕೊಳ್ಳಿ ಬಳಿಕ ಫೋರ್ಕ್ ಚಮಚದಿಂದ ಸಣ್ಣ ಸಣ್ಣ ತುತುಗಳನ್ನು ಅದರ ಮೇಲೆ ಮಾಡಿಕೊಳ್ಳಿ. ಒಂದು ಪ್ಲೇಟ್ ತೆಗೆದುಕೊಂಡು ನಂತರ ಎಣ್ಣೆ ಸವರಿ ಅದರ ಮೇಲೆ ತಯಾರಿಸಿದ ರೋಟಿ ಹಾಕಿ. ಬಳಿಕ ಅದರ ಮೇಲೆ ಸ್ವಾಝಾವಾನ್ ಸಾಸ್ ಹಾಕಿ, ನಂತರ ಟೊಮೆಟೋ ಸಾಸ್ ಹಾಕಿ, ಚೀಸ್ ಹಾಕಿ, ಬಳಿಕ ಅದರ ಮೇಲೆ ಟೊಮೆಟೋ, ಈರುಳ್ಳಿ, ಎಲೆಕೋಸ್, ಕರಿ ಮೆಣಸು ಪುಡಿ ಹಾಕಿ. ನಂತರ ಒಂದು ಬಾಣಲೆಗೆ ಉಪ್ಪು ಹಾಕಿ ಅದರ ಮೇಲೆ ತಯಾರಿಸಿದ ಪಿಜ್ಜಾ ಇಟ್ಟು ಬೇಯಿಸಬೇಕು. 20 ನಿಮಿಷದ ನಂತರ ಬಿಸಿ ಬಿಸಿಯಾದ ಪಿಜ್ಜಾ ಸವಿಯಲು ಸಿದ್ಧ.
ಇದನ್ನೂ ಓದಿ:
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
