ಹೋಲ್ ಚಿಕನ್ ರೋಸ್ಟ್; ಸರಳ ವಿಧಾನದ ಜತೆ ಮನೆಯಲ್ಲೇ ಮಾಡಿ ಸವಿಯಿರಿ
ಇಡೀ ಚಿಕನ್ ಅನ್ನು ತಂದು ಮನೆಯಲ್ಲಿ ಮಾಡಲು ಸ್ವಲ್ಪ ಹಿಂಜರಿಕೆ ಇದೆ. ಅದನ್ನು ಹೇಗೆ ಮಾಡುವುದು ಅದು ಒಳಗೆ ಚೆನ್ನಾಗಿ ಬೇಯುವುದಿಲ್ಲ ಎಂದು ಗೊಂದಲಕ್ಕೀಡಾಗುವುದು ಬೇಡ ಮನೆಯಲ್ಲೇ ಸರಳವಾಗಿ ಈ ವಿಧಾನದ ಜತೆ ಹೋಲ್ ಚಿಕನ್ ರೋಸ್ಟ್ ಮಾಡಿ ಸವಿಯಿರಿ
ನಾನ್ ವೆಜ್ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಚಿಕನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಆದರೆ ಇಡಿ ಚಿಕನ್ ಅನ್ನು ತಂದು ಮನೆಯಲ್ಲಿ ಮಾಡಲು ಸ್ವಲ್ಪ ಹಿಂಜರಿಕೆ ಇದೆ. ಅದನ್ನು ಹೇಗೆ ಮಾಡುವುದು ಅದು ಒಳಗೆ ಚೆನ್ನಾಗಿ ಬೇಯುವುದಿಲ್ಲ ಎಂದು ಗೊಂದಲಕ್ಕೀಡಾಗುವುದು ಬೇಡ ಮನೆಯಲ್ಲೇ ಸರಳವಾಗಿ ಈ ವಿಧಾನದ ಜತೆ ಹೋಲ್ ಚಿಕನ್ ರೋಸ್ಟ್ ಮಾಡಿ ಸವಿಯಿರಿ
ಹೋಲ್ ಚಿಕನ್ ರೋಸ್ಟ್ ಮಾಡಲು ಬೇಕಾಗುವ ಸಾಮಾಗ್ರಿಗಳು ಟೆಂಡರ್ ಚಿಕನ್, ಖಾರದ ಪುಡಿ, ಕರಿ ಮೆಣಸು ಪುಡಿ, ಅರಿಶಿಣ, ಉಪ್ಪು, ಜೀರಿಗೆ ಪುಡಿ, ಬೆಳ್ಳುಳ್ಳಿ -ಶುಂಠಿ ಪೇಸ್ಟ್, ಕಬಾಬ್ ಪೌಡರ್, ನಿಂಬೆ ಹಣ್ಣು, ಕೊಬ್ಬರಿ ಎಣ್ಣೆ, ಅಡುಗೆ ಎಣ್ಣೆ. ಹುಣಸೆ ಹಣ್ಣು, ಬೇವಿನ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಬ್ಯಾಡಗಿ ಮೆಣಸು, ಈರುಳ್ಳಿ, ಗಾಂಧಾರಿ ಮೆಣಸು, ಸಕ್ಕರೆ.
ಹೋಲ್ ಚಿಕನ್ ರೋಸ್ಟ್ ಮಾಡುವ ವಿಧಾನ
ಟೆಂಡರ್ ಚಿಕನ್ ಅನ್ನು ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ ಬಳಿಕ ಅದರ ಕಾಲುಗಳಿಗೆ ಕಡ್ಡಿ ಚುಚ್ಚಿ , ನಂತರ ಅದರ ಮೇಲೆ ನಾಲ್ಕೈದು ಕಡೆ ಭಾಗ ಮಾಡಿ ಖಾರ ಒಳಗೆ ಸೇರುವಂತೆ ಮಾಡಿ ಇಟ್ಟುಕೊಳ್ಳಿ. ಒಂದು ಬೌಲ್ ಅಲ್ಲಿ ಖಾರದ ಪುಡಿ, ಕರಿ ಮೆಣಸಿನ ಪುಡಿ, ಅರಿಶಿಣ, ಉಪ್ಪು, ಜೀರಿಗೆ ಪುಡಿ, ಬೆಳ್ಳುಳ್ಳಿ -ಶುಂಠಿ ಪೇಸ್ಟ್, ಕಬಾಬ್ ಪೌಡರ್, ನಿಂಬೆ ಹಣ್ಣು, ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸಿ ಮಾಡಿ. ಬಳಿಕ ಈ ಮಿಶ್ರಣವನ್ನು ಚಿಕನ್ಗೆ ಚೆನ್ನಾಗಿ ಹಚ್ಚಿ 2 ಗಂಟೆ ಫ್ರೀಡ್ಜ್ ಅಲ್ಲಿ ಇಡಿ.
ಬಳಿಕ ಒಂದು ಕುಕ್ಕರ್ಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಚಿಕನ್ ಅದರೊಳಗೆ ಇಡಿ. ನಂತರ ಒಂದು ವಿಜಿಲ್ ಬರಬೇಕು. ಬಳಿಕ ಹುಣಸೆ ಹಣ್ಣು, ಬೇವಿನ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಬ್ಯಾಡಗಿ ಮೆಣಸು, ಈರುಳ್ಳಿ, ಗಾಂಧಾರಿ ಮೆಣಸು ಹಾಕಿ ಮಿಕ್ಸಿ ಅಲ್ಲಿ ಕಡೆದುಕೊಳ್ಳಿ. ಒಂದು ಬಣಾಲೆ ಇಟ್ಟು ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಬೆಂದ ಚಿಕನ್ ಹಾಕಿ ಫ್ರೈ ಮಾಡಿ ಅದನ್ನು ತೆಗೆದಿಟ್ಟುಕೊಳ್ಳಿ. ನಂತರ ಬಣಾಲೆಗೆ ರುಬ್ಬಿದ ಮಸಾಲೆ ಹಾಕಿ, ಖಾರದ ಪುಡಿ, ಸಕ್ಕರೆ , ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಬೇಕು ನಂತರ ಫ್ರೈ ಮಾಡಿದ ಚಿಕನ್ ಹಾಕಬೇಕು. ಈಗ ಬಿಸಿ ಬಿಸಿಯಾದ ಹೋಲ್ ಚಿಕನ್ ರೋಸ್ಟ್ ಸವಿಯಲು ಸಿದ್ಧ.
ಇದನ್ನೂ ಓದಿ:
ಶಾವಿಗೆಯಲ್ಲೂ ಚಿಕನ್ ಬಿರಿಯಾನಿ ಮಾಡಬಹುದು; ಸುಲಭವಾಗಿ ಮನೆಯಲ್ಲಿ ತಯಾರಿಸಿ