ಈ ಪಾಕಿಸ್ತಾನಿ ಕ್ರಿಕೆಟಿಗನನ್ನು ಹೋದಲ್ಲಿ ಬಂದಲ್ಲಿ ಕಾಡುತ್ತಿದ್ದಾರೆ ನೆಟ್ಟಿಗರು; ಅಷ್ಟೊಂದು ಟ್ರೋಲ್​ ಆಗಲು ಕಾರಣವೇನು?

ಪಾಕಿಸ್ತಾನದ ಬ್ಯಾಟ್ಸ್​ಮನ್ ಅಜಮ್ ಖಾನ್ ಫಿಟ್​ನೆಸ್ ನೋಡಿ ಪಾಕಿಸ್ತಾನಿ ಕ್ರಿಕೆಟ್​ ಪ್ರೇಮಿಗಳೇ ತಮಾಷೆ ಮಾಡಿಕೊಂಡು ನಗುತ್ತಿದ್ದಾರೆ. 110 ಕೆಜಿ ತೂಕದ ಅಜಮ್​ಖಾನ್ ದೇಹವನ್ನು ನೋಡಿ ಈತನನ್ನು ತಂಡಕ್ಕೆ ಸೇರಿಸಿಕೊಂಡಿದ್ದೇಕೆ ಎಂದು ಪ್ರಶ್ನೆ ಕೇಳುತ್ತಿದ್ದಾರೆ.


ಪಾಕಿಸ್ತಾನದ ಕ್ರಿಕೆಟ್​ ಟೀಮ್​ನ ಆಟಗಾರನೊಬ್ಬರನ್ನ ಟ್ರೋಲಿಗರು ಸಿಕ್ಕಾಪಟ್ಟೆ ಟಾರ್ಗೆಟ್ ಮಾಡುತ್ತಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಪಾಕಿಸ್ತಾನ ಆಯ್ಕೆ ಮಾಡುವ ಆಟಗಾರರ ಫಿಟ್​ನೆಸ್ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್​ಫ್ಲ್ಯುಯೆನ್ಸ್​ ಕೋಟಾದಲ್ಲಿ ತಂಡ ಸೇರಿದ್ರೆ ಹೀಗೇ ಆಗೋದು ಎಂದು ವ್ಯಂಗ್ಯವಾಡುತ್ತಿದ್ದಾರೆ. ಇಷ್ಟಕ್ಕೂ ಈ ಅಪಹಾಸ್ಯಕ್ಕೆ ಕಾರಣವಾಗಿರುವುದು ಆ ಆಟಗಾರನ ದೇಹ.

ಪಾಕಿಸ್ತಾನದ ಬ್ಯಾಟ್ಸ್​ಮನ್ ಅಜಮ್ ಖಾನ್ ಫಿಟ್​ನೆಸ್ ನೋಡಿ ಪಾಕಿಸ್ತಾನಿ ಕ್ರಿಕೆಟ್​ ಪ್ರೇಮಿಗಳೇ ತಮಾಷೆ ಮಾಡಿಕೊಂಡು ನಗುತ್ತಿದ್ದಾರೆ. 110 ಕೆಜಿ ತೂಕದ ಅಜಮ್​ಖಾನ್ ದೇಹವನ್ನು ನೋಡಿ ಈತನನ್ನು ತಂಡಕ್ಕೆ ಸೇರಿಸಿಕೊಂಡಿದ್ದೇಕೆ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟರ್ ಮೊಯಿನ್ ಖಾನ್ ಪುತ್ರ ಅಜಮ್​ಖಾನ್, ಇಂಗ್ಲೆಂಡ್ ವಿರುದ್ಧದ ಟಿ- 20 ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಆದರೆ, ಮೊದಲ ಪಂದ್ಯದಲ್ಲಿ ಆರನೇ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿದ ಅಜಮ್, 3 ಬಾಲ್​ನಲ್ಲಿ 5 ರನ್ ಬಾರಿಸಿದ್ದರು. ಮೊದಲು 140 ಕೆಜಿ ಇದ್ದ ಅಜಮ್​ಗೆ ಫಿಟ್​ನೆಸ್​ ಇಲ್ಲ ಎಂಬ ಕಾರಣದಿಂದಲೇ ಅವಕಾಶ ನಿರಾಕರಿಸಲಾಗಿತ್ತು. ನಂತರ 12 ತಿಂಗಳಲ್ಲಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡು ತಂಡಕ್ಕೆ ಪ್ರವೇಶಿಸಿದ್ದಾರೆ. ಆದರೆ, ಅಜಮ್ ದೈತ್ಯ ದೇಹ ಕಂಡು ಕ್ರಿಕೆಟ್ ಅಭಿಮಾನಿಗಳು ಸಿಕ್ಕಾಪಟ್ಟೆ ಕಿಂಡಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ:
ಪಾಕಿಸ್ತಾನ ಟಿ20ಐ ತಂಡದಲ್ಲಿ ಕ್ರಿಕೆಟರ್​ಗಳಿಗಿಂತ ಕುಸ್ತಿಪಟುಗಳು ಜಾಸ್ತಿ ಕಾಣುತ್ತಿದ್ದಾರೆ: ಆಕಿಬ್ ಜಾವೆದ್

Click on your DTH Provider to Add TV9 Kannada