AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mimi Face Art: ಈಕೆಯ ಮುಖದ ತುಂಬಾ ಕಣ್ಣು, ಕಿವಿ, ಮೂಗು, ಬಾಯಿ!

TV9 Web
| Edited By: |

Updated on: Jul 18, 2021 | 7:32 AM

Share

ಮುಖದಲ್ಲೇ ಡಜನ್​ಗಟ್ಟಲೆ ಕಣ್ಣು, ತುಟಿ, ಮೂಗು ಮೂಡಿಸಿ ನೋಡುಗರನ್ನು ಅಚ್ಚರಿಗೆ ನೂಕಿರುವ ಕಲಾವಿದೆ ಹೆಸರು ಮಿಮಿ ಚಾಯ್. ಈಕೆಯ ಕೈಚಳಕ ನೋಡಿದ್ರೆ ತಲೆ ಕೆಡೋದು ಪಕ್ಕಾ.

ಕಲಾವಿದರ ಕೈಚಳಕ ಅಂದ್ರೆ ತಮಾಷೆ ವಿಚಾರವೇ ಅಲ್ಲ. ಅದರಲ್ಲೂ ಭ್ರಮೆಯನ್ನ ಸೃಷ್ಟಿಸೋ ಮೇಕಪ್ ಕಲಾವಿದರು ಮಾಯಾಜಾಲವನ್ನೇ ಸೃಷ್ಟಿಸಿಬಿಡ್ತಾರೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಈಗ ನೋಡುಗರಿಗೂ ಸಿಕ್ಕಾಪಟ್ಟೆ ಭ್ರಮೆ ಹುಟ್ಟಿಸುತ್ತಾ ಇದೆ. ಈ ಕಲೆಯಲ್ಲಿ ತಲೆ ಇದ್ಯೋ ಅಥವಾ ತಲೆಯಲ್ಲಿ ಕಲೆ ಇದ್ಯೋ? ಎನ್ನುವಂತೆ ಭ್ರಮಾ ಜಗತ್ತನ್ನೇ ಸೃಷ್ಟಿಸಿದ್ದಾಳೆ ಮೇಕಪ್ ಕಲಾವಿದೆ.

ಮುಖದಲ್ಲೇ ಡಜನ್​ಗಟ್ಟಲೆ ಕಣ್ಣು, ತುಟಿ, ಮೂಗು ಮೂಡಿಸಿ ನೋಡುಗರನ್ನು ಅಚ್ಚರಿಗೆ ನೂಕಿರುವ ಕಲಾವಿದೆ ಹೆಸರು ಮಿಮಿ ಚಾಯ್. ಈಕೆಯ ಕೈಚಳಕ ನೋಡಿದ್ರೆ ತಲೆ ಕೆಡೋದು ಪಕ್ಕಾ. ಭ್ರಮಾ ಚಿತ್ರ ಕಲಾವಿದೆಯಾಗಿ ಪ್ರಸಿದ್ಧಳಾಗುತ್ತಿರುವ ಮಿಮಿ, ಇದೀಗಫೇಸ್ ಆರ್ಟ್​ನಲ್ಲಿ ಹೊಸ ಹೊಸ ಪ್ರಯೋಗ ಶುರು ಮಾಡಿದ್ದಾಳೆ. ಸದ್ಯ ಮಿಮಿ ರಚಿಸಿದ ಫೇಸ್ ಆರ್ಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಇದನ್ನೂ ಓದಿ:
Puri Ratha Yatra 2021: ಪುರಿ ಬೀಚ್​ನಲ್ಲಿ ಅರಳಿದ ಮರಳು ಕಲೆ! ಜಗನ್ನಾಥ ದೇವರನ್ನು ಚಿತ್ರಿಸಿದ ಕಲಾವಿದ