Puri Ratha Yatra 2021: ಪುರಿ ಬೀಚ್ನಲ್ಲಿ ಅರಳಿದ ಮರಳು ಕಲೆ! ಜಗನ್ನಾಥ ದೇವರನ್ನು ಚಿತ್ರಿಸಿದ ಕಲಾವಿದ
ಅತಿದೊಡ್ಡ 3ಡಿ ಸ್ಯಾಂಡ್ ಆರ್ಟ್ ಸುಂದರವಾಗಿ ಗೋಚರಿಸುತ್ತಿದೆ. ಸಾಗರ ತೀರದ ಮರಳಿನಲ್ಲಿ ಬಣ್ಣದಿಂದ ಆವೃತವಾದ ಚಿತ್ರ ಜನರನ್ನು ಬೆರಗುಗೊಳಿಸಿದೆ.
ಇಂದು ಸುಪ್ರಸಿದ್ಧ ಪುರಿ ಜಗನ್ನಾಥರ ರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್ನಲ್ಲಿ ರಥದ ಚಿತ್ರವನ್ನು ರಚಿಸಿದ್ದಾರೆ. ಸರಿಸುಮಾರು 43.2 ಅಡಿ ಉದ್ದ ಮತ್ತು 25 ಅಡಿ ಅಗಲವಿರುವ ಭಗವಾನ್ ಜಗನ್ನಾಥರ ರಥ 3ಡಿ ಮರಳು ಕಲೆಯನ್ನು ರಚಿಸಿದ್ದಾರೆ.
ರಥಯಾತ್ರೆಯ ಸಂದರ್ಭದಲ್ಲಿ ಒಡಿಶಾದ ಪುರಿ ಬೀಚ್ನಲ್ಲಿ 43.2 ಅಡಿ ಉದ್ದ ಮತ್ತು 35 ಅಡಿ ಅಗಲದ ಭಗವಾನ್ ಜಗನ್ನಾಥರ ಅವರ ನಂದಿಗೋಸ ರಥದ ಅತಿದೊಡ್ಡ 3ಡಿ ಸ್ಯಾಂಡ್ ಆರ್ಟ್ ರಥವನ್ನು ನಾವು ರಚಿಸಿದ್ದೇವೆ. ಇದೊಂದು ಹೊಸ ದಾಖಲೆಯಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸುದರ್ಶನ್ ಅವರು ಗಿನ್ನಿಸ್ ದಾಖಲೆ ಸೇರಿದಂತೆ ಪದ್ಮಶ್ರೀ ಪುರಸ್ಕೃತ ಮರಳು ಕಲಾವಿದ ವಿಶ್ವದಾದ್ಯಂತ 60ಕ್ಕೂ ಹೆಚ್ಚು ಅಂತರಾಷ್ಟ್ರೀಯ ಚಾಂಪಿಯನ್ಶಿಪ್ಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸಿದ್ದಾರೆ. ಜತೆಗೆ ದೇಶಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅತಿದೊಡ್ಡ 3ಡಿ ಸ್ಯಾಂಡ್ ಆರ್ಟ್ ಸುಂದರವಾಗಿ ಗೋಚರಿಸುತ್ತಿದೆ. ಸಾಗರ ತೀರದ ಮರಳಿನಲ್ಲಿ ಬಣ್ಣದಿಂದ ಆವೃತವಾದ ಚಿತ್ರ ಜನರನ್ನು ಬೆರಗುಗೊಳಿಸಿದೆ.
On the pious occasion of #RathaYatra, we have created the biggest 3D sand art chariot (Nandighosa) of Lord Jagannath- 43.2 ft long and 35 ft wide at #Puri beach in Odisha. We hope, it will be a new record. #JaiJagannath ? #RathaJatra21 pic.twitter.com/nMPNlszsgS
— Sudarsan Pattnaik (@sudarsansand) July 11, 2021
ಕಳೆದ ವರ್ಷದಂತೆ ಈ ಬಾರಿಯೂ ಜು.12ರಂದು ಜಗನ್ನಾಥರ ರಥಯಾತ್ರೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೆ ನಡೆಯಲಿದೆ. ಸುಪ್ರೀಂ ಕೋರ್ಟ್ ಆದೇಶ ಮತ್ತು ಒಡಿಶಾ ರಾಜ್ಯ ಸರ್ಕಾರದ ಎಸ್ಒಪಿ ಅನ್ವಯ ರಥಯಾತ್ರೆಯಲ್ಲಿ ಭಕ್ತರಿಗೆ ಅವಕಅಶ ನೀಡುತ್ತಿಲ್ಲ. ಇನ್ನು ಎರಡೂ ಡೋಸ್ ಲಸಿಕೆ ಪಡೆದು, ಆರ್-ಪಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರುವವರಿಗೆ ರಥ ಎಳೆಯಲು ಅವಕಅಶ ನೀಡಲಾಗುವುದು ಎಂದು ವರದಿ ತಿಳಿಸಿವೆ
ಇದನ್ನೂ ಓದಿ: