ವಿಮಾನದ ಬಾಲ ನೋಡಿ ಫಟಾಫಟ್ ಅಂತ ಒಂದೇ ನಿಮಿಷದಲ್ಲಿ ಅತೀ ಹೆಚ್ಚು ವಿಮಾನಗಳನ್ನು ಗುರುತಿಸಿ ವಿಶ್ವದಾಖಲೆ ಬರೆದ ಪೋರಿ

ಆರ್ನಾ ಗುಪ್ತಾ ಹರಿಯಾಣದವಳು. ಬಾಲಕಿಗೆ ಕೇಲವ 6 ವರ್ಷ ವಯಸ್ಸು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ನೆನಪಿನಶಕ್ತಿ ಹೊಂದಿದ್ದಾಳೆ. ಒಂದು ಹೆಸರನ್ನೂ ತಪ್ಪದೇ ನಿರರ್ಗಳವಾಗಿ ವಿಮಾನಯಾನ ಸಂಸ್ಥೆಗಳ ಹೆಸರನ್ನು ಹೇಳುತ್ತಾಳೆ.

ವಿಮಾನದ ಬಾಲ ನೋಡಿ ಫಟಾಫಟ್ ಅಂತ ಒಂದೇ  ನಿಮಿಷದಲ್ಲಿ ಅತೀ ಹೆಚ್ಚು ವಿಮಾನಗಳನ್ನು ಗುರುತಿಸಿ ವಿಶ್ವದಾಖಲೆ ಬರೆದ ಪೋರಿ
ಬಾಲಕಿ ಆರ್ನಾ ಗುಪ್ತಾ


ಸಾಮಾನ್ಯವಾಗಿ ಈಗಿನ ಮಕ್ಕಳು ಅತಿಹೆಚ್ಚು ಚುರುಕಾಗಿರುವುದನ್ನು ನೋಡಿರುತ್ತೇವೆ. ಹುಟ್ಟುಹುಟ್ಟುತ್ತಲೇ ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಾ ಬುದ್ಧಿವಂತರಾಗಿ ಬೆಳೆಯುತ್ತಿದ್ದಾರೆ. ತಮಾಷೆಯ ವಿಡಿಯೋಗಳಿಂದ ಹಿಡಿದು, ತಮ್ಮ ಪ್ರತಿಭೆಯನ್ನು ತೋರ್ಪಡಿಸುವ ಮಕ್ಕಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದಲ್ಲದೇ ಮೆಚ್ಚುಗೆಗೆ ಪಾತ್ರವಾಗುತ್ತವೆ. ಇಲ್ಲೋರ್ವ 6 ವರ್ಷದ ಬಾಲಕಿ 1 ನಿಮಿಷದೊಳಗೆ ಅತಿ ಹೆಚ್ಚು ವಿಮಾನ ಸಂಸ್ಥೆಗಳ ಹೆಸರನ್ನು ಹೇಳುವುದರ ಮೂಲಕ ಹೆಸರು ಗಳಿಸಿಕೊಂಡಿದ್ದಾಳೆ. ಬಾಲಕಿಯ ನೆನಪಿನ ಶಕ್ತಿಗೆ ಜನರು ಶ್ಲಾಘಿಸಿದ್ದಾರೆ.

ಆರ್ನಾ ಗುಪ್ತಾ ಹರಿಯಾಣದವಳು. ಬಾಲಕಿಗೆ ಕೇಲವ 6 ವರ್ಷ ವಯಸ್ಸು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ನೆನಪಿನಶಕ್ತಿ ಹೊಂದಿದ್ದಾಳೆ. ಒಂದು ಹೆಸರನ್ನೂ ತಪ್ಪದೇ ನಿರರ್ಗಳವಾಗಿ ವಿಮಾನಯಾನ ಸಂಸ್ಥೆಗಳ ಹೆಸರನ್ನು ಹೇಳುತ್ತಾಳೆ. ವಿಮಾನಯಾನ ಸಂಸ್ಥೆಗಳನ್ನು ಗುರುತಿಸುವ ವಿಡಿಯೋ ಯೂಟ್ಯೂಬ್​ನಲ್ಲಿ ಹರಿಬಿಡಲಾಗಿದೆ. ಇವಳ ಈ ಸಾಧನೆ ಇಂಟರ್​ನ್ಯಾಷನಲ್ ಬುಕ್​ ಆಫ್​ ರೆಕಾರ್ಡ್​ಗೆ ದಾಖಲಾಗಿದೆ.

ಏರೋಪ್ಲೇನ್​ಗಳ ಬಾಲ ನೋಡಿ ವಿಮಾನ ಸಂಸ್ಥೆಯ ಹೆಸರುಗಳನ್ನು ಸುಲಭದಲ್ಲಿ ಹೇಳುತ್ತಾಳೆ. ಇವಳ ಸಾಮರ್ಥ್ಯ ಮತ್ತು ಬುದ್ಧಿ ಶಕ್ತಿಯನ್ನು ಮೆಚ್ಚಲೇಬೇಕಿದೆ. ಕೇಲವ ಒಂದು ನಿಮಿಷದಲ್ಲಿ ಅತಿ ಹೆಚ್ಚು ವಿಮಾನ ಸಂಸ್ಥೆಗಳನ್ನು ಗುರುತಿಸುತ್ತಾಳೆ. ಇವಳ ಈ ಸಾಧನೆಯಿಂದ ವಿಶ್ವ ದಾಖಲೆಗೆ ಹೆಸರಾಗಿದ್ದಾಳೆ.

ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ತಾಯಿ ನೇಹಾ ಗುಪ್ತಾ, ಅವಳ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಗೆ ಕುಟುಂಬದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಾವೆಲ್ಲರೂ ಅವಳ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದೇವೆ. ಅವಳ ಕೌಶಲ್ಯದಿಂದ ಏನನ್ನಾದರೂ ಸಾಧಿಸಬೇಕು ಎಂಬುದು ನಮ್ಮೆಲ್ಲರ ಆಶಯವಾಗಿತ್ತು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

10 ನಿಮಿಷಗಳಲ್ಲಿ 76 ಹಾಟ್​ಡಾಗ್​ ತಿಂದು ವಿಶ್ವ ದಾಖಲೆ ಮುರಿದ ಜೋಯಿ ಚೆಸ್ಟ್​ನಟ್​​

Lifting A River ವಿಶ್ವ ದಾಖಲೆ ಸೃಷ್ಟಿಸಿರುವ ಮೇಘಾ ಕಾಳೇಶ್ವರಂ ಯೋಜನೆಯ ಕುತೂಹಲಕಾರಿ ಸಂಗತಿ ಇಂದು ಡಿಸ್ಕವರಿ ಚಾನೆಲ್​ನಲ್ಲಿ

Click on your DTH Provider to Add TV9 Kannada