AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯೂಟಿಪಾರ್ಲರ್​​ನಲ್ಲಿ ಪದೇಪದೆ ತಲೆ ಅಲ್ಲಾಡಿಸುತ್ತಿದ್ದ ಮಹಿಳೆಗೆ ತಕ್ಕಶಾಸ್ತ್ರಿ ಮಾಡಿದ ಕೇಶ ವಿನ್ಯಾಸಕ​; ವಿಡಿಯೋ ನೋಡಿ

ವಿಡಿಯೋ ಮಾತ್ರ ನೆಟ್ಟಿಗರಲ್ಲಿ ಸಿಕ್ಕಾಪಟೆ ನಗು ತರಿಸಿದೆ. ಟ್ವಿಟರ್​ನಲ್ಲಿ ಶೇರ್ ಆಗಿರುವ ಈ ವಿಡಿಯೋಕ್ಕೆ 60 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ. ನೆಟ್ಟಿಗರಂತೂ ಬ್ಯೂಟಿಷಿಯನ್​ ಪರನೇ ಜಾಸ್ತಿ ವಕಾಲತ್ತು ವಹಿಸಿದ್ದಾರೆ.

ಬ್ಯೂಟಿಪಾರ್ಲರ್​​ನಲ್ಲಿ ಪದೇಪದೆ ತಲೆ ಅಲ್ಲಾಡಿಸುತ್ತಿದ್ದ ಮಹಿಳೆಗೆ ತಕ್ಕಶಾಸ್ತ್ರಿ ಮಾಡಿದ ಕೇಶ ವಿನ್ಯಾಸಕ​; ವಿಡಿಯೋ ನೋಡಿ
ಬ್ಯೂಟಿಪಾರ್ಲರ್​ಗೆ ಹೋದ ಮಹಿಳೆ
TV9 Web
| Edited By: |

Updated on:Jul 12, 2021 | 5:57 PM

Share

ಇಂಟರ್​ನೆಟ್​ನಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ಸಿಕ್ಕಾಪಟೆ ನಗಿಸುವುದಂತೂ ಸುಳ್ಳಲ್ಲ. ಹಾಗೇ, ಇದೀಗ ಬ್ಯೂಟಿ ಪಾರ್ಲರ್​ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅದನ್ನ ನೋಡಿದರೆ ನಿಮಗೂ ನಗು ಬಾರದೆ ಇರದು.

ಮಹಿಳೆಯೊಬ್ಬರು ತನ್ನ ಸ್ನೇಹಿತೆಯೊಂದಿಗೆ ಬ್ಯೂಟಿಪಾರ್ಲರ್​​ಗೆ ಹೋಗಿದ್ದಾರೆ. ಆಕೆಯನ್ನು ಕುರ್ಚಿಯ ಮೇಲೆ ಕೂರಿಸಿ, ಬ್ಯೂಟಿಷಿಯನ್​ ಯುವಕ ಅವರ ಕೂದಲು ತೊಳೆಯುತ್ತಿದ್ದಾರೆ. ಮಹಿಳೆ ಬಹುಶಃ ಹೇರ್​ ಕಟ್​ಗೆ ಹೋಗಿದ್ದರಬೇಕು  ಹೋಗಿದ್ದರಬೇಕು. ಸಾಮಾನ್ಯವಾಗಿ ಕೂದಲು ಕತ್ತರಿಸುವ ಮೊದಲು  ಅದನ್ನು ಸ್ವಚ್ಛವಾಗಿ ತೊಳೆಯಲಾಗುತ್ತದೆ. ಹೀಗೆ ಈ ಮಹಿಳೆಯನ್ನು ನೇರವಾಗಿ ಮಲಗಿಸಿ, ತಲೆಯನ್ನು ಸಿಂಕ್​ ಬಳಿ ಇಟ್ಟು ಆತ ಕೂದಲು ತೊಳೆಯುತ್ತಿದ್ದಾರೆ. ಆದರೆ ಈಕೆ ತಲೆಯನ್ನು ಸರಿಯಾಗಿ ಇಟ್ಟುಕೊಳ್ಳುತ್ತಿಲ್ಲ. ತನ್ನ ಪಕ್ಕದಲ್ಲಿ, ನಾಯಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಕುಳಿತಿರುವ ಸ್ನೇಹಿತೆಯ ಬಳಿ ಮಾತನಾಡುತ್ತ, ಮೊಬೈಲ್​ ನೋಡುತ್ತ ಪದೇಪದೆ ತಲೆಯನ್ನು ಅಲ್ಲಾಡಿಸುತ್ತಲೇ ಇದ್ದರು. ಇದರಿಂದ ಬ್ಯೂಟಿಷಿಯನ್​ಗೆ ಆಕೆಯ ತಲೆಕೂದಲು ತೊಳೆಯುವುದು ತೀರ ಕಷ್ಟವಾಗುತ್ತಿತ್ತು.

ಪ್ರಾರಂಭದಲ್ಲಿ ಆತ ತಾಳ್ಮೆಯಿಂದಲೇ ಇದ್ದ. ಆದರೆ ಪದೇಪದೆ ತನ್ನ ಕೆಲಸಕ್ಕೆ ಅಡಚಣೆ ಆಗುತ್ತಿದ್ದಂತೆ ಅವನು ಕೈಯಲ್ಲಿದ್ದ ಶೋವರ್​ನಿಂದ ಮಹಿಳೆ ಮುಖದ ಮೇಲೆಲ್ಲ ನೀರು ಸಿಂಪಡಿಸಿದ್ದಾನೆ. ಆತ ಹಾಗೇ ಮಾಡುತ್ತಿದ್ದಂತೆ ಇನ್ನೊಂದು ಕುರ್ಚಿಯಲ್ಲಿ ಕುಳಿತಿದ್ದ ಇನ್ನೊಬ್ಬರು ಮಹಿಳಾ ಗ್ರಾಹಕಿ ತುಂಬ ದಿಗಿಲಾದಂತೆ ನೋಡಿದ್ದಾರೆ. ಒಟ್ಟಾರೆ ವಿಡಿಯೋ ಮಾತ್ರ ನೆಟ್ಟಿಗರಲ್ಲಿ ಸಿಕ್ಕಾಪಟೆ ನಗು ತರಿಸಿದೆ. ಟ್ವಿಟರ್​ನಲ್ಲಿ ಶೇರ್ ಆಗಿರುವ ಈ ವಿಡಿಯೋಕ್ಕೆ 60 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ. ನೆಟ್ಟಿಗರಂತೂ ಬ್ಯೂಟಿಷಿಯನ್​ ಪರನೇ ಜಾಸ್ತಿ ವಕಾಲತ್ತು ವಹಿಸಿದ್ದಾರೆ. ಅವನೆಷ್ಟು ಅಂತ ಸಹಿಸಿಕೊಳ್ಳುವುದು? ಸರಿಯಾಗಿಯೇ ಮಾಡಿದ್ದಾನೆ ಎಂದೂ ಹೇಳಿದ್ದಾರೆ. ನೀವೂ ಒಮ್ಮೆ ವಿಡಿಯೋ ನೋಡಿಬಿಡಿ..

Published On - 5:56 pm, Mon, 12 July 21

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ