‘ನಿಮಗೂ ಮಧ್ಯಬೆಟ್ಟು ತೋರಿಸೋಕೆ ಕಾಯುತ್ತಿದ್ದೇವೆ’; ಚಕ್ರವರ್ತಿ ಚಂದ್ರಚೂಡ್​ ಹೊರಹಾಕಲು ಆರಂಭವಾಗಿದೆ ಅಭಿಯಾನ

ಬಿಗ್​ ಬಾಸ್​ ಸೀಸನ್​ 8 ಎರಡನೆ ಇನ್ನಿಂಗ್ಸ್ ಆರಂಭದಲ್ಲಿ ಪ್ರಿಯಾಂಕಾ ಹಾಗೂ ಚಕ್ರವರ್ತಿ ಚಂದ್ರಚೂಡ್​ ನಡುವೆ ಒಳ್ಳೆಯ ಗೆಳೆತನ ಇತ್ತು. ಪ್ರಿಯಾಂಕಾ-ಶಮಂತ್​ ಅನ್ಯೋನ್ಯವಾಗಿದ್ದಾರೆ ಎನ್ನುವುದೇ ಚಕ್ರವರ್ತಿ ಬೇಸರಕ್ಕೆ ಕಾರಣವಾಗಿತ್ತು.

‘ನಿಮಗೂ ಮಧ್ಯಬೆಟ್ಟು ತೋರಿಸೋಕೆ ಕಾಯುತ್ತಿದ್ದೇವೆ’; ಚಕ್ರವರ್ತಿ ಚಂದ್ರಚೂಡ್​ ಹೊರಹಾಕಲು ಆರಂಭವಾಗಿದೆ ಅಭಿಯಾನ

ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿದ್ದ ಚಕ್ರವರ್ತಿ ಚಂದ್ರಚೂಡ್​ ಆರಂಭದಲ್ಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ, ಬರುಬರುತ್ತಾ ಅವರ ಮಾತಿನಮೇಲೆ ಅವರಿಗೇ ಹಿಡಿತವಿರಲಿಲ್ಲ. ಈಗಲೂ ಅವರು ತಮ್ಮ ವರ್ತನೆಯನ್ನು ನಿಯಂತ್ರಿಸೋಕೆ ಸಾಧ್ಯವಾಗುತ್ತಿಲ್ಲ. ಇದು ಅವರಿಗೇ ಮುಳವಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಭಾನುವಾರದ ಎಪಿಸೋಡ್​ನಲ್ಲಿ ಚಕ್ರವರ್ತಿ ಮಾಡಿದ ಎಡವಟ್ಟಿನಿಂದ ಎಲ್ಲರೂ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಬಿಗ್​ ಬಾಸ್​ ಸೀಸನ್​ 8 ಎರಡನೆ ಇನ್ನಿಂಗ್ಸ್ ಆರಂಭದಲ್ಲಿ ಪ್ರಿಯಾಂಕಾ ಹಾಗೂ ಚಕ್ರವರ್ತಿ ಚಂದ್ರಚೂಡ್​ ನಡುವೆ ಒಳ್ಳೆಯ ಗೆಳೆತನ ಇತ್ತು. ಪ್ರಿಯಾಂಕಾ-ಶಮಂತ್​ ಅನ್ಯೋನ್ಯವಾಗಿದ್ದಾರೆ ಎನ್ನುವುದೇ ಚಕ್ರವರ್ತಿ ಬೇಸರಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ. ಜುಲೈ 18ರ ಎಪಿಸೋಡ್​ನಲ್ಲಿ ಪ್ರಿಯಾಂಕಾ ಎಲಿಮಿನೇಟ್​ ಆಗಿದ್ದಾರೆ. ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅವರಿಗೆ ಬಿಗ್​ ಬಾಸ್ ವಿಶೇಷ ಅಧಿಕಾರ ಒಂದನ್ನು ನೀಡಿದ್ದರು. ಅದರನ್ವಯ ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್​ ಮಾಡಬೇಕು.

ಈ ಆದೇಶ ಬರುತ್ತಿದ್ದಂತೆ ಒಂದು ಕ್ಷಣವು ಯೋಚಿಸದೆ ಪ್ರಿಯಾಂಕಾ ತಿಮ್ಮೇಶ್​ ಅವರು ಚಕ್ರವರ್ತಿ ಚಂದ್ರಚೂಡ್​ ಹೆಸರನ್ನು ಹೇಳಿದ್ದರು. ಇದು ನಿರೀಕ್ಷಿತವೇ ಆಗಿದ್ದರು, ಚಕ್ರವರ್ತಿಗೆ ಇದನ್ನು ಸಹಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಅವರು ಮಧ್ಯಬೆಟ್ಟನ್ನು ಎತ್ತಿ ತೋರಿಸಿದ್ದಾರೆ. ಇದು ಪ್ರಶಾಂತ್​ ಗಮನಕ್ಕೂ ಬಂದಿದೆ. ‘ಸಾರ್ವಜನಿಕ ಪ್ಲಾಟ್​ಫಾರ್ಮ್​ನಲ್ಲಿದ್ದಾಗ ಈ ರೀತಿ ಮಾಡೋದು ಸರಿಯಲ್ಲ’ ಎಂದು ಚಕ್ರರ್ತಿಗೆ ಬುದ್ಧಿವಾದ ಹೆಳುವ ಕೆಲಸ ಮಾಡಿದ್ದಾರೆ ಪ್ರಶಾಂತ್​.

ಈ ವಿಚಾರದಲ್ಲಿ ಚಕ್ರವರ್ತಿ ವಿರುದ್ಧ ಅನೇಕರು ಸಿಡಿದೆದ್ದಿದ್ದಾರೆ. ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ, ಕೆಲವರು ನಾವು ಕೂಡ ಮಧ್ಯಬೆಟ್ಟು ತೋರಿಸೋಕೆ ಕಾತುರರಾಗಿದ್ದೇವೆ ಎಂದು ಹೇಳಿದ್ದಾರೆ.

 

View this post on Instagram

 

A post shared by Davangere Trolls (@davangeretrolls)

 

View this post on Instagram

 

A post shared by bigboss 8 (@bigboss_trolls08)

ಇದನ್ನೂ ಓದಿ: ಪ್ರಿಯಾಂಕಾ ತಿಮ್ಮೇಶ್​ ಎಲಿಮಿನೇಟ್ ಆಗೋಕೆ ಕಾರಣವಾಗಿದ್ದು ಈ ಮೂರು ಸ್ಪರ್ಧಿಗಳು

ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ; ಬಿಗ್​ ಬಾಸ್​ ನೀಡ್ತೀರೋ ಶಿಕ್ಷೆ ಏನು?