AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Singer Mangli: ವಿವಾದಕ್ಕೆ ತುತ್ತಾದ ರಾಬರ್ಟ್​ ಗಾಯಕಿ ಮಂಗ್ಲಿ; ಕ್ಷಮೆ ಕೇಳಲು ಆಗ್ರಹ

ತೆಲುಗು ಜನಪದ ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಂಡವರು ಮಂಗ್ಲಿ. ತೆಲುಗು ನಾಡಿನ ಸಂಸ್ಕೃತಿಗೆ ಸರಿ ಹೊಂದುವ ಸಾಕಷ್ಟು ಹಾಡುಗಳನ್ನು ಹಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ಅವರು.

Singer Mangli: ವಿವಾದಕ್ಕೆ ತುತ್ತಾದ ರಾಬರ್ಟ್​ ಗಾಯಕಿ ಮಂಗ್ಲಿ; ಕ್ಷಮೆ ಕೇಳಲು ಆಗ್ರಹ
ಗಾಯಕಿ ಮಂಗ್ಲಿ
TV9 Web
| Edited By: |

Updated on:Jul 19, 2021 | 5:05 PM

Share

ದರ್ಶನ್​ ನಟನೆಯ ‘ರಾಬರ್ಟ್’ ಸಿನಿಮಾದ​ ತೆಲುಗು ಅವತರಣಿಕೆಯ ‘ಕಣ್ಣೇ ಅಧಿರಿಂದಿ’ ಹಾಡನ್ನು ಹಾಡುವ ಮೂಲಕ ಗಾಯಕಿ ಮಂಗ್ಲಿ ಎಲ್ಲರ ಗಮನ ಸೆಳೆದಿದ್ದರು. ಅವರು ‘ತೆಲುಗು ಬಿಗ್​ ಬಾಸ್​ ಸೀಸನ್​ 5’ಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಅವರ ಸುತ್ತ ವಿವಾದವೊಂದು ಹುಟ್ಟಿಕೊಂಡಿದೆ.

ತೆಲುಗು ಜನಪದ ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಂಡವರು ಮಂಗ್ಲಿ. ತೆಲುಗು ನಾಡಿನ ಸಂಸ್ಕೃತಿಗೆ ಸರಿ ಹೊಂದುವ ಸಾಕಷ್ಟು ಹಾಡುಗಳನ್ನು ಹಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ಅವರು. ಅವರ ಧ್ವನಿ ಎಲ್ಲರಿಗೂ ಇಷ್ಟವಾಗಿದೆ. ಆದರೆ, ಈಗ ಅವರಿಗೆ ವಿವಾದ ಅಂಟಿಕೊಂಡಿದೆ.

ತೆಲುಗು ರಾಜ್ಯಗಳಲ್ಲಿ ಈಗ ಬೊನಾಲು ಹಬ್ಬದ ಸಮಯ. ಈ ವಿಶೇಷ ಸಂದರ್ಭದಲ್ಲಿ ಮಂಗ್ಲಿ ‘ಬೊನಾಲು…’ ಹಾಡನ್ನು ಹಾಡಿ, ನೃತ್ಯ ಮಾಡಿದ್ದಾರೆ. ಈ ಹಾಡಿನಿಂದ ಕೆಲವರು ಬೇಸರಗೊಂಡರೆ, ಇನ್ನೂ ಕೆಲವರು ಈ ಹಾಡು ದೇವರಿಗೆ ಅವಮಾನ ಮಾಡುವ ರೀತಿಯಲ್ಲಿದೆ ಎಂದು ತಕರಾರು ತೆಗೆದಿದ್ದಾರೆ.

‘ನೀವು ಅಮ್ಮನ ಬಗ್ಗೆ ಹಾಗೆ ಮಾತನಾಡುತ್ತೀರಾ? ಭಕ್ತಿಯ ಹೆಸರಿನಲ್ಲಿ ದೇವರಿಗೆ ಅಪಹಾಸ್ಯ ಮಾಡಬೇಡಿ’ ಎಂದು ಅನೇಕರು ಕಮಂಟ್​ ಮಾಡಿದ್ದಾರೆ.  ‘ಭಕ್ತರ ಭಾವನೆ ನೋಯಿಸಿದ ಮಂಗ್ಲಿ ತೆಲಂಗಾಣ ಜನರ ಬಳಿ ಕ್ಷಮೆಯಾಚಿಸಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಜುಲೈ 11ರಂದು ಈ ಹಾಡು ರಿಲೀಸ್​ ಆಗಿದೆ. ಈವರೆಗೆ 45 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಏನಿದು ಬೊನಾಲು: ತೆಲಂಗಾಣದ ಪರಿಶಿಷ್ಟ ಮತ್ತು ಹಿಂದುಳಿದ ಜನಾಂಗದವರು ಬೊನಾಲು ಹಬ್ಬವನ್ನು ಆಚರಿಸುತ್ತಾರೆ. ಶಕ್ತಿ ದೇವತೆಯಾದ ಮಹಾಕಾಳಿ ಅಥವಾ ಕಾಳಿಯ ಕುರಿತಾದ ಈ ಆಚರಣೆಯು ಹೈದರಾಬಾದ್‌, ಸಿಕಂದರಾಬಾದ್, ತೆಲಂಗಾಣ ಮತ್ತು ರಾಯಲಸೀಮಾದ ಭಾಗಗಳಲ್ಲಿದೆ. ಇದನ್ನು ಆಷಾಢ ಮಾಸದಲ್ಲಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ಮತ್ತು ಕಡೆಯ ದಿನದಲ್ಲಿ ಎಲ್ಲಮ್ಮದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.

ಬಿಗ್​ ಬಾಸ್​ಗೆ ಮಂಗ್ಲಿ?: ತೆಲುಗು ಬಿಗ್​ ಬಾಸ್​ ನಾಲ್ಕು ಸೀಸನ್ ಪೂರ್ಣಗೊಳಿಸಿದೆ. ​ಈಗ ಐದನೇ ಸೀಸನ್​ಗೆ ಸಿದ್ಧತೆಗಳು ನಡೆಯುತ್ತಿವೆ. ಆರಂಭದಲ್ಲಿ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಶುರು ಮಾಡುವ ಆಲೋಚನೆ ವಾಹಿನಿಯದ್ದಾಗಿತ್ತು. ಆದರೆ, ಕೊವಿಡ್​ ಕಾರಣದಿಂದ ಬಿಗ್​ ಬಾಸ್ ಆರಂಭ ಮುಂದೂಡಲ್ಪಟ್ಟಿತ್ತು. ಈಗ ಆಗಸ್ಟ್​ ವೇಳೆಗೆ ತೆಲುಗು ಬಿಗ್​ ಬಾಸ್​ ಸೀಸನ್-5ಅನ್ನು ಆರಂಭಿಸುವ ಆಲೋಚನೆಯನ್ನು ವಾಹಿನಿ ಹೊಂದಿದೆ ಎನ್ನಲಾಗುತ್ತಿದೆ.  ಬಿಗ್​ ಬಾಸ್​ ಮನೆ ಸೇರಲಿರುವ ಸಂಭಾವ್ಯ ಪಟ್ಟಿ ಕೂಡ ವೈರಲ್​ ಆಗುತ್ತಿದೆ. ಇದರಲ್ಲಿ ಮಂಗ್ಲಿ ಹೆಸರು ಕೂಡ ಇದೆ.

ಇದನ್ನೂ ಓದಿ: ಆಗಸ್ಟ್​​ನಿಂದ ಆರಂಭವಾಗಲಿದೆ ಬಿಗ್​ ಬಾಸ್​​; ಸಂಭಾವ್ಯ ಪಟ್ಟಿಯಲ್ಲಿ ‘ರಾಬರ್ಟ್’​ ಗಾಯಕಿ ಮಂಗ್ಲಿ, ಅಧ್ಯಕ್ಷ ಸಿನಿಮಾ ನಾಯಕಿ

Published On - 4:50 pm, Mon, 19 July 21

Follow Us
TV9 Web
TV9 Web

TV9 Kannada

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ