ಆಗಸ್ಟ್​​ನಿಂದ ಆರಂಭವಾಗಲಿದೆ ಬಿಗ್​ ಬಾಸ್​​; ಸಂಭಾವ್ಯ ಪಟ್ಟಿಯಲ್ಲಿ ‘ರಾಬರ್ಟ್’​ ಗಾಯಕಿ ಮಂಗ್ಲಿ, ಅಧ್ಯಕ್ಷ ಸಿನಿಮಾ ನಾಯಕಿ

71 ದಿನಕ್ಕೆ ಕನ್ನಡದ ಬಿಗ್​ ಬಾಸ್​ ನಿಂತರೆ, 95 ದಿನಕ್ಕೆ ಮಲಯಾಳಂ ಬಿಗ್​ ಬಾಸ್​ ಅಂತ್ಯವಾಗಿದೆ. ಹೀಗಿರುವಾಗಲೇ ಬಿಗ್​ ಬಾಸ್​ ಮುಂದಿನ ಸೀಸನ್​ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ.

ಆಗಸ್ಟ್​​ನಿಂದ ಆರಂಭವಾಗಲಿದೆ ಬಿಗ್​ ಬಾಸ್​​; ಸಂಭಾವ್ಯ ಪಟ್ಟಿಯಲ್ಲಿ ‘ರಾಬರ್ಟ್’​ ಗಾಯಕಿ ಮಂಗ್ಲಿ, ಅಧ್ಯಕ್ಷ ಸಿನಿಮಾ ನಾಯಕಿ
ಹೆಬ್ಬಾ ಪಟೇಲ್​-ಮಂಗ್ಲಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 22, 2021 | 5:24 PM

ಕೊರೊನಾ ಕಾರಣಕ್ಕೆ ಕನ್ನಡ ಹಾಗೂ ಮಲಯಾಳಂ ಬಿಗ್​ ಬಾಸ್​ ಅರ್ಧಕ್ಕೆ ನಿಂತಿದೆ. ಕೊವಿಡ್​ ಎರಡನೇ ಅಲೆ ಜೋರಾಗಿರುವುದರಿಂದ ಹೇರಿರುವ ಲಾಕ್​ಡೌನ್​ನಿಂದ ಶೂಟಿಂಗ್​ ನಿಂತಿದೆ. ಇದರ ಪರಿಣಾಮ ಬಿಗ್​ ಬಾಸ್​ ಮೇಲೆ ಉಂಟಾಗಿದೆ. 71 ದಿನಕ್ಕೆ ಕನ್ನಡದ ಬಿಗ್​ ಬಾಸ್​ ಸೀಸನ್- 8 ನಿಂತರೆ, 95 ದಿನಕ್ಕೆ ಮಲಯಾಳಂ ಬಿಗ್​ ಬಾಸ್ ಸೀಸನ್​-4​ ಅಂತ್ಯವಾಗಿದೆ. ಹೀಗಿರುವಾಗಲೇ ಬಿಗ್​ ಬಾಸ್​ ಮುಂದಿನ ಸೀಸನ್​ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ.

ತೆಲುಗು ಬಿಗ್​ ಬಾಸ್​ ನಾಲ್ಕು ಸೀಸನ್ ಪೂರ್ಣಗೊಳಿಸಿದೆ. ​ಈಗ ಐದನೇ ಸೀಸನ್​ಗೆ ಸಿದ್ಧತೆಗಳು ನಡೆಯುತ್ತಿವೆ. ಆರಂಭದಲ್ಲಿ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಶುರು ಮಾಡುವ ಆಲೋಚನೆ ವಾಹಿನಿಯದ್ದಾಗಿತ್ತು. ಆದರೆ, ಕೊವಿಡ್​ ಎರಡನೇ ಅಲೆ ಇನ್ನೂ ಹಾಗೆಯೇ ಇದೆ. ಜುಲೈ ವೇಳೆಗೆ ಇದರ ಅಬ್ಬರ ಕಡಿಮೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದನ್ನೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆಗಸ್ಟ್​ ವೇಳೆಗೆ ತೆಲುಗು ಬಿಗ್​ ಬಾಸ್​ ಸೀಸನ್-5ಅನ್ನು ಆರಂಭಿಸುವ ಆಲೋಚನೆಯನ್ನು ವಾಹಿನಿ ಹೊಂದಿದೆ.

ಸದ್ಯ, ಕೊವಿಡ್​ನಿಂದ ಲಾಕ್​ಡೌನ್​ ಘೋಷಣೆ ಮಾಡಲಾಗಿದ್ದು, ಶೂಟಿಂಗ್​ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಆರಂಭಿಸುತ್ತೇವೆ ಎಂದರೂ ಅದು ಅಸಾಧ್ಯವಾಗದ ಮಾತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್​ ವೇಳೆಗೆ ಸೀಸನ್​-5 ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಬಿಗ್​ ಬಾಸ್​ ಮನೆ ಸೇರಲಿರುವ ಸಂಭಾವ್ಯ ಪಟ್ಟಿ ಕೂಡ ವೈರಲ್​ ಆಗುತ್ತಿದೆ. ತೆಲುಗಿನಲ್ಲಿ ‘ರಾಬರ್ಟ್’​ ಸಿನಿಮಾದ ಹಾಡನ್ನು ಹಾಡಿದ ಗಾಯಕಿ ಮಂಗ್ಲಿ, ಆ್ಯಂಕರ್​ ರವಿ, ಶರಣ್​ ನಟನೆಯ ‘ಅಧ್ಯಕ್ಷ’ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್​ ಸೇರಿ ಅನೇಕರು ಬಿಗ್​ ಬಾಸ್​ ಮನೆ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ.

ತೆಲುಗು ಬಿಗ್​ ಬಾಸ್​-4ರಲ್ಲಿ ಅಭಿಜೀತ್​ ವಿನ್ನರ್​ ಆಗಿದ್ದರು. ಅಖಿಲ್​ ಸಾರ್ಥಕ್​ ಹಾಗೂ ಸೋಹೆಲ್​ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್​ ಅಪ್​ ಆಗಿದ್ದರು.

ಇದನ್ನೂ ಓದಿ:

Bigg Boss: ಕೊವಿಡ್​ ನಿಯಮ ಉಲ್ಲಂಘನೆ; ಬಿಗ್​ ಬಾಸ್​ ಮನೆ ಸೀಜ್​, 1 ಲಕ್ಷ ರೂಪಾಯಿ ದಂಡ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್