ಪ್ರಿಯಾಂಕಾ ತಿಮ್ಮೇಶ್​ ಎಲಿಮಿನೇಟ್ ಆಗೋಕೆ ಕಾರಣವಾಗಿದ್ದು ಈ ಮೂರು ಸ್ಪರ್ಧಿಗಳು

Priyanka Timmesh Eliminated: 4 ದಿನಗಳ ಕಾಲ ನಡೆದ ಟಾಸ್ಕ್​ನಲ್ಲಿ ಸೋತ ತಂಡದ ಸದಸ್ಯರು ನಾಮಿನೇಟ್​ ಆಗಿದ್ದರು. ಈ ಬಾರಿ ಸೋತ ತಂಡದಲ್ಲಿದ್ದ ಪ್ರಶಾಂತ್ ಸಂಬರಗಿ​, ಪ್ರಿಯಾಂಕಾ ತಿಮ್ಮೇಶ್​, ವೈಷ್ಣವಿ ಗೌಡ, ಶುಭಾ ಪೂಂಜಾ ನಾಮಿನೇಷನ್​ ಪಟ್ಟಿಯಲ್ಲಿದ್ದರು.

ಪ್ರಿಯಾಂಕಾ ತಿಮ್ಮೇಶ್​ ಎಲಿಮಿನೇಟ್ ಆಗೋಕೆ ಕಾರಣವಾಗಿದ್ದು ಈ ಮೂರು ಸ್ಪರ್ಧಿಗಳು
ಪ್ರಿಯಾಂಕಾ ತಿಮ್ಮೇಶ್​
Follow us
TV9 Web
| Updated By: Digi Tech Desk

Updated on:Jul 19, 2021 | 9:34 AM

Priyanka Timmesh: ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನ ಮೂರನೇ ಎಲಿಮಿನೇಷನ್​ ಈ ವಾರ ನಡೆದಿದೆ. ನಾಲ್ಕು ಸ್ಪರ್ಧಿಗಳು ಈ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿದ್ದರು. ಈ ಪೈಕಿ ಪ್ರಿಯಾಂಕಾ ತಿಮ್ಮೇಶ್​ ಎಲಿಮಿನೇಟ್​ ಆಗಿದ್ದಾರೆ. ಈ ಮೂಲಕ ಮನೆಯ ಸ್ಪರ್ಧಿಗಳ ಸಂಖ್ಯೆ ಒಂಭತ್ತಕ್ಕೆ ಇಳಿಕೆ ಆಗಿದೆ.

ಈ ವಾರ ಬಿಗ್​ ಬಾಸ್​ ನಾಮಿನೇಷನ್​ಗೆ ಬೇರೆ ರೀತಿಯ ಮಾರ್ಗ ಅನುಸರಿಸಲಾಗಿತ್ತು. ಪ್ರತಿವಾರ ಸ್ಪರ್ಧಿಗಳಿಗೆ ನಾಮಿನೇಷನ್​ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಯಾರಿಗೆ ಯಾವ ಸ್ಪರ್ಧಿ ಇಷ್ಟವಿಲ್ಲವೋ ಅವರನ್ನು ನಾಮಿನೇಟ್​ ಮಾಡುತ್ತಾರೆ. ಈ ಬಾರಿ ಬಿಗ್​ ಬಾಸ್​ ಮನೆಯಲ್ಲಿ ಆ ರೀತಿ ಇರಲಿಲ್ಲ. ಮನೆಯಲ್ಲಿ ಎರಡು ಟೀಂ ಮಾಡಿ 10 ಟಾಸ್ಕ್​ಗಳನ್ನು ನೀಡಲಾಗಿತ್ತು. 4  ದಿನಗಳ ಕಾಲ ನಡೆದ ಟಾಸ್ಕ್​ನಲ್ಲಿ ಸೋತ ತಂಡದ ಸದಸ್ಯರು ನಾಮಿನೇಟ್​ ಆಗಿದ್ದರು. ಈ ಬಾರಿ ಸೋತ ತಂಡದಲ್ಲಿದ್ದ ಪ್ರಶಾಂತ್ ಸಂಬರಗಿ​, ಪ್ರಿಯಾಂಕಾ ತಿಮ್ಮೇಶ್​, ವೈಷ್ಣವಿ ಗೌಡ, ಶುಭಾ ಪೂಂಜಾ ನಾಮಿನೇಷನ್​ ಪಟ್ಟಿಯಲ್ಲಿದ್ದರು. ಕಡಿಮೆ ವೋಟ್ ಪಡೆದು ಪ್ರಿಯಾಂಕಾ ಔಟ್ ಆಗಿದ್ದಾರೆ.

ಅಂದಹಾಗೆ, ಈ ವಾರ ಪ್ರಿಯಾಂಕಾ ಮನೆಯಿಂದ ಹೊರಹೋಗೋಕೆ ಉಳಿದ ಸ್ಪರ್ಧಿಗಳು ಸ್ಟ್ರಾಂಗ್​ ಆಗಿದ್ದಿದ್ದೇ ಕಾರಣ. ಈ ವಾರ ಬಿಗ್​ ಬಾಸ್​ ಮನೆಯಲ್ಲಿ ಪ್ರಿಯಾಂಕಾ ಉತ್ತಮವಾಗಿಯೇ ಆಡಿದ್ದರು. ಆದರೆ, ಉಳಿದ ಮೂರು ಸ್ಪರ್ಧಿಗಳು ತುಂಬಾನೇ  ಸ್ಟ್ರಾಂಗ್​ ಆಗಿದ್ದ ಕಾರಣ ಪ್ರಿಯಾಂಕಾ ಔಟ್​ ಆಗಿದ್ದಾರೆ.

ವೈಷ್ಣವಿ ಗೌಡ ಬಿಗ್ ಬಾಸ್​ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಟಾಪ್​ 5 ಲಿಸ್ಟ್​ನಲ್ಲಿ ಅವರನ್ನು ನೋಡಬೇಕು ಎನ್ನುವುದು ಅಭಿಮಾನಿಗಳ ಇಚ್ಛೆ. ಹೀಗಾಗಿ, ಅವರಿಗೆ ಹೆಚ್ಚು ವೋಟ್​ ಬಿದ್ದಿದೆ. ಇನ್ನು, ಶುಭಾ ಪೂಂಜಾ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡವರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ಅವರಿಗೆ ಹೆಚ್ಚಿನ ವೋಟ್​ ಬಿದ್ದಿದೆ. ಪ್ರಶಾಂತ್​ ಸಂಬರಗಿ ಇತ್ತೀಚೆಗೆ ತುಂಬಾನೇ ಬದಲಾಗಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜತೆ ಬೆರೆಯುತ್ತಿದ್ದಾರೆ. ಹೀಗಾಗಿ, ಅವರು ಈ ವಾರ ಸೇವ್​ ಆಗಿದ್ದಾರೆ. ಹೀಗಾಗಿ ಈ ಮೂವರು ಸ್ಟ್ರಾಂಗ್​ ಸ್ಪರ್ಧಿಗಳಿಂದಾಗಿ, ಪ್ರಿಯಾಂಕಾ ಈಗ ಮನೆಯಿಂದ ಹೊರ ಹೋಗುವಂತಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಕಿದ್ದಾರೆ ಕೀಟ; ಸುದೀಪ್​ ಎದುರು ಹೇಳಿಕೊಂಡ ಸಂಬರಗಿ

Published On - 9:43 pm, Sun, 18 July 21