ಬಿಗ್​ ಬಾಸ್​ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​

ಫೋಟೋ ಹಿಂದಿನ ಅಸಲಿ ವಿಚಾರ ಗೊತ್ತಾಗುವುದಕ್ಕೂ ಮುನ್ನವೇ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಹಾಸ್ಯ ನಟ ಶ್ರೀನಿವಾಸನ್​ ಜೊತೆ ವನಿತಾ ಹಾರ ಬದಲಾಯಿಸಿಕೊಳ್ಳುತ್ತಿರುವುದು ಈ ಫೋಟೋದಲ್ಲಿ ಹೈಲೈಟ್​ ಆಗಿದೆ.

ಬಿಗ್​ ಬಾಸ್​ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​
ಬಿಗ್​ ಬಾಸ್​ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 23, 2021 | 9:05 AM

ಸೆಲೆಬ್ರಿಟಿಗಳ ಜೀವನದಲ್ಲಿ ಮದುವೆ ಮತ್ತು ವಿಚ್ಛೇದನ ದೊಡ್ಡ ವಿಚಾರವೇ ಅಲ್ಲ ಎಂಬಂತಾಗಿ ಬಿಟ್ಟಿದೆ. ಈ ಕಾರಣದಿಂದಲೇ ನಟಿ, ತಮಿಳು ಬಿಗ್​ ಬಾಸ್ (Bigg Boss) ಸೀಸನ್​ 3ರ ಸ್ಪರ್ಧಿ ವನಿತಾ ವಿಜಯ್​ಕುಮಾರ್​ (Vanitha Vijayakumar) ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗಾಗಲೂ ಮೂರು ಸಲ ಮದುವೆ ಮಾಡಿಕೊಂಡಿರುವ ಅವರು ಮತ್ತೊಂದು ಮದುವೆ (Marriage) ಆಗಿದ್ದಾರಾ ಎಂಬ ಅನುಮಾನ ಮೂಡುವಂತಾಗಿದೆ. ಅಂಥ ಅನುಮಾನಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ. ಹಾಗಂತ ಈ ಫೋಟೋ ಎಲ್ಲೋ ಲೀಕ್ ಆಗಿರುವುದಲ್ಲ. ಸ್ವತಃ ವನಿತಾ ವಿಜಯ್​ಕುಮಾರ್​ ಅವರೇ ಈ ಫೋಟೋ ಹಂಚಿಕೊಂಡಿದ್ದಾರೆ.

ಈ ಫೋಟೋ ಹಿಂದಿನ ಅಸಲಿ ವಿಚಾರ ಗೊತ್ತಾಗುವುದಕ್ಕೂ ಮುನ್ನವೇ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಹಾಸ್ಯ ನಟ ಶ್ರೀನಿವಾಸನ್​ ಜೊತೆ ವನಿತಾ ಹಾರ ಬದಲಾಯಿಸಿಕೊಳ್ಳುತ್ತಿರುವುದು ಈ ಫೋಟೋದಲ್ಲಿ ಹೈಲೈಟ್​ ಆಗಿದೆ. ಇದು ಅವರು ನಟಿಸಿರುವ ಹೊಸ ಸಿನಿಮಾದ ಫೋಟೋ ಎಂಬುದು ನಂತರದಲ್ಲಿ ಗೊತ್ತಾಗಿದೆ.

ವನಿತಾ 4ನೇ ಮದುವೆ ಆಗುತ್ತಾರೆ ಎಂಬ ಬಗ್ಗೆ ಇತ್ತೀಚೆಗೆ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು. ಗಂಡನ ಹೆಸರು ಎಸ್​ ಅಕ್ಷರದಿಂದ ಆರಂಭವಾಗಲಿದೆ ಎಂದು ಹೇಳಿದ್ದರು. ಹಾಗಾಗಿ ನಟ ಶ್ರೀನಿವಾಸನ್​ ಜೊತೆ ವನಿತಾ ಮದುವೆ ವೇಷದಲ್ಲಿ ಕಾಣಿಸಿಕೊಂಡ ತಕ್ಷಣ ಫ್ಯಾನ್ಸ್​ಗೆ ಅಚ್ಚರಿ ಆಗಿದೆ. ಅಲ್ಲದೆ, ಈ ಫೋಟೋ ಜೊತೆ ವನಿತಾ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಕಾರಣ ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ.

ಬಹುಕಾಲದ ಗೆಳೆಯ ಪೀಟರ್​ ಪೌಲ್​ ಜೊತೆ 2020ರ ಜೂನ್​ನಲ್ಲಿ ವನಿತಾ ಮದುವೆ ಮಾಡಿಕೊಂಡಿದ್ದರು. ಅದು ಅವರ ಮೂರನೇ ಮದುವೆ ಆಗಿತ್ತು. ಆದರೆ ಪೀಟರ್​ ವಿಪರೀತ ಮದ್ಯವ್ಯಸನಿ ಎಂಬ ಕಾರಣಕ್ಕೆ ವನಿತಾ ಈ ಮದುವೆ ಮುರಿದುಕೊಂಡರು.

ಪ್ರಸ್ತುತ ‘ಬಿಗ್​ ಬಾಸ್​ ಜೋಡಿಗಳ್​’ ರಿಯಾಲಿಟಿ ಶೋನಲ್ಲಿ ವನಿತಾ ವಿಜಯ್​ಕುಮಾರ್​ ಭಾಗವಹಿಸುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ಹಿರಿಯ ನಟಿ ರಮ್ಯಾ ಕೃಷ್ಣ ಜಡ್ಜ್​ ಆಗಿದ್ದಾರೆ. ಇತ್ತೀಚೆಗೆ ವನಿತಾ ಮಾಡಿದ ಪರ್ಫಾರ್ಮೆನ್ಸ್​ ರಮ್ಯಾ ಕೃಷ್ಣಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

ಇದನ್ನೂ ಓದಿ:

Priyamani: ‘ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮದುವೆ ಅಸಿಂಧು’; ಮುಸ್ತಫಾ ರಾಜ್ ಮೊದಲ ಪತ್ನಿ ಆರೋಪ

‘ಮುಂದಿನ ವರ್ಷ ಮದುವೆ, ನನ್ನದು ಅರೇಂಜ್​ ಮ್ಯಾರೇಜ್’​; ವಿವಾಹದ ಬಗ್ಗೆ ಮತ್ತೊಮ್ಮೆ ಮೌನ ಮುರಿದ ವೈಷ್ಣವಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್