ಮೂರು ಸಂಬಂಧ ಮುರಿದು ಬಿದ್ದ ನಂತರ ಮತ್ತೊಂದು ಮದುವೆಗೆ ನಟಿ ವನಿತಾ ವಿಜಯ್​ಕುಮಾರ್ ರೆಡಿ​?

ಮೂರು ಸಂಬಂಧ ಮುರಿದು ಬಿದ್ದ ನಂತರ ಮತ್ತೊಂದು ಮದುವೆಗೆ ನಟಿ ವನಿತಾ ವಿಜಯ್​ಕುಮಾರ್ ರೆಡಿ​?
ಮೂರು ಸಂಬಂಧ ಮುರಿದು ಬಿದ್ದ ನಂತರ ಮತ್ತೊಂದು ಮದುವೆಗೆ ನಟಿ ವನಿತಾ ವಿಜಯ್​ಕುಮಾರ್ ರೆಡಿ​?

ಕಳೆದ ನವೆಂಬರ್​ನಲ್ಲಿ ವನಿತಾ ಅವರ ಮೂರನೇ ಸಂಬಂಧವೂ ಮುರಿದು ಬಿದ್ದಿತ್ತು. ಸದ್ಯ, ಅವರು ತಮ್ಮ ಟಿವಿ ಶೋ ಹಾಗೂ ಯೂಟ್ಯೂಬ್​ ಚಾನೆಲ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

Rajesh Duggumane

| Edited By: Madan Kumar

Jun 11, 2021 | 4:34 PM

ನಟಿ ವನಿತಾ ವಿಜಯ್​ಕುಮಾರ್​ ಅವರು ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿ ಆಗುತ್ತಿರುತ್ತಾರೆ. ಈಗಾಗಲೇ ಅವರು ಮೂರು ಮದುವೆ ಆಗಿದ್ದು, ಮೂರೂ ಸಂಬಂಧಗಳು ಮುರಿದು ಬಿದ್ದಿವೆ. ಈಗ ಅವರು ಮತ್ತೊಂದು ಮದುವೆ ಆಗುವ ಸೂಚನೆ ನೀಡಿದ್ದಾರೆ. ಸದ್ಯ ಅವರ ಟ್ವೀಟ್​ ಸಾಕಷ್ಟು ವೈರಲ್​ ಆಗಿದೆ.

ವನಿತಾ ವಿಜಯ್​ಕುಮಾರ್​ ಕಳೆದ ಜೂನ್​ 27ರಂದು ಪೀಟರ್​ ಪೌಲ್​ ಜತೆ ಮದುವೆ ಆಗಿದ್ದರು. ಪೀಟರ್​ ಪೌಲ್​ಗೆ ಆಗಲೇ ವಿವಾಹ ಆಗಿತ್ತು. ಪೀಟರ್​ ಮೊದಲನೇ ಪತ್ನಿ ಜಗಳ ತೆಗೆದಿದ್ದರು. ‘ನನಗೆ ವಿಚ್ಛೇದನ ನೀಡದೇ ನನ್ನ ಪತಿ ಎರಡನೇ ಮದುವೆ ಆಗಿದ್ದಾನೆ. ಹೀಗಾಗಿ, ಆತನ ಎರಡನೇ ಮದುವೆಗೆ ಕಾನೂನಿನಲ್ಲಿ ಮನ್ನಣೆ ಇಲ್ಲ’ ಎಂದು ಅವರ ಪತ್ನಿ ವಾದಿಸಿದ್ದರು.

ಪೀಟರ್​ ಸ್ವಲ್ಪ ಹೆಚ್ಚಾಗಿ ಕುಡಿಯುತ್ತಿದ್ದ. ಕೆಲ ಸಮಯ ಇದನ್ನು ವನಿತಾ ಸಹಿಸಿಕೊಂಡರು. ಕೊನೆಗೆ ಕಳೆದ ನವೆಂಬರ್​ ತಿಂಗಳಲ್ಲಿ ಇಬ್ಬರೂ ಬೇರೆ ಆದರು. ಈ ಮೂಲಕ ಅವರ ಮೂರನೇ ಸಂಬಂಧವೂ ಮುರಿದು ಬಿದ್ದಿತ್ತು. ಸದ್ಯ, ಅವರು ತಮ್ಮ ಟಿವಿ ಶೋ ಹಾಗೂ ಯೂಟ್ಯೂಬ್​ ಚಾನೆಲ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಈಗ ಅವರು ಅಚ್ಚರಿಯ ಟ್ವೀಟ್​ ಒಂದನ್ನು ಮಾಡಿದ್ದಾರೆ. ‘ನಾನು ಸಿಂಗಲ್​ ಆಗಿದ್ದೇನೆ ಮತ್ತು ಲಭ್ಯವಿದ್ದೇನೆ. ನನ್ನ ಬಗ್ಗೆ ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಮತ್ತು ಅದನ್ನು ನಂಬಬೇಡಿ’ ಎಂದು ಹೇಳಿದ್ದಾರೆ. ಅಂದಹಾಗೆ, ವನಿತಾ ಯಾವ ಅರ್ಥದಲ್ಲಿ ಈ ಟ್ವೀಟ್​ ಮಾಡಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಕೆಲವರು ವನಿತಾ ನಾಲ್ಕನೇ ಮದುವೆ ಆಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ವನಿತಾ ಬಿಗ್​ ಬಾಸ್​ ಜೋಡಿಗಳ್​ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಬಿಗ್​ ಬಾಸ್​ನಲ್ಲಿ ಪಾಲ್ಗೊಂಡ ಸ್ಪರ್ಧಿಗಳು ಇದರಲ್ಲಿ ಸ್ಪರ್ಧಿಗಳಾಗಿದ್ದಾರೆ.

ಇದನ್ನೂ ಓದಿ: Viral Photo: ಮಮತಾ ಬ್ಯಾನರ್ಜಿಗೆ ಮದುವೆಯಂತೆ! ವರ ಯಾರು ಗೊತ್ತಾ? ಲಗ್ನ ಪತ್ರಿಕೆ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada