‘ವಿಕ್ರಾಂತ್ ರೋಣ ನೋಡುತ್ತಿದ್ದರೆ ಜೀವ ನಡುಗುತ್ತದೆ’; ರಿಲೀಸ್​ಗೂ ಮೊದಲೇ ಸುದೀಪ್ ಸಿನಿಮಾದ ವಿಮರ್ಶೆ ಮಾಡಿದ ನಟ

Kichcha Sudeep: ‘ವಿಕ್ರಾಂತ್ ರೋಣ’ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಚಿತ್ರ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ಮತ್ತು ಟೀಸರ್​ಗಳು ಸಿಕ್ಕಾಪಟ್ಟೆ ಕೌತುಕ ಮೂಡಿಸಿವೆ.

‘ವಿಕ್ರಾಂತ್ ರೋಣ ನೋಡುತ್ತಿದ್ದರೆ ಜೀವ ನಡುಗುತ್ತದೆ’; ರಿಲೀಸ್​ಗೂ ಮೊದಲೇ ಸುದೀಪ್ ಸಿನಿಮಾದ ವಿಮರ್ಶೆ ಮಾಡಿದ ನಟ
ಸುದೀಪ್​


ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರ ರಿಲೀಸ್​ಗೂ ಮೊದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದಲ್ಲಿ ಸುದೀಪ್​ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೊವಿಡ್​ ಕಾರಣದಿಂದ ಚಿತ್ರಮಂದಿರಗಳು ಮುಚ್ಚಿವೆ. ಹೀಗಾಗಿ. ಸಿನಿಮಾ ರಿಲೀಸ್​ಗೆ ಅಭಿಮಾನಿಗಳು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಈಗ ಸಿನಿಮಾ ನೋಡಿದ ನಟರೊಬ್ಬರು ಚಿತ್ರ ಹೇಗಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.

‘ವಿಕ್ರಾಂತ್ ರೋಣ’ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಚಿತ್ರ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ಮತ್ತು ಟೀಸರ್​ಗಳು ಸಿಕ್ಕಾಪಟ್ಟೆ ಕೌತುಕ ಮೂಡಿಸಿವೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ ಎಂಬುದು ಚಿತ್ರದ ಮೈಲೇಜ್​ ಹೆಚ್ಚಲು ಮತ್ತೊಂದು ಕಾರಣ. ಈಗಾಗಲೇ ಶೂಟಿಂಗ್​ ಪೂರ್ಣಗೊಳಿಸಿಕೊಂಡಿರುವ ಚಿತ್ರತಂಡ, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿದೆ.

ಅದೇ ರೀತಿ, ರವಿಶಂಕರ್​ ಗೌಡ ಇತ್ತೀಚೆಗೆ ಚಿತ್ರದ ಡಬ್ಬಿಂಗ್​ ಮಾಡೋಕೆ ತೆರಳಿದ್ದರು. ಅವರು ಸಿನಿಮಾ ನೋಡಿದ್ದು, ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ನಾನು ‘ವಿಕ್ರಾಂತ್ ರೋಣ’ ಡಬ್ಬಿಂಗ್ ಮಾಡಿದೆ. ಅಬ್ಬಾ, ಸಿನಿಮಾ ಪ್ರಾರಂಭವಾದಾಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ. ಕುತೂಹಲದ ಮಹಾಪೂರ. ಇಡಿ ಸಿನಿಮಾ ನೋಡುತ್ತಿದ್ದರೆ ಜೀವ ನಡುಗುತ್ತದೆ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲ. ಹೊಸ ಕಲಾವಿದರದು ಅಚ್ಚುಕಟ್ಟಾದ ಅಭಿನಯ. ಅಭಿನಂದನೆಗಳು ನಿರ್ದೇಶಕ ಅನೂಪ್ ಬಂಡಾರಿ’ ಎಂದು ಬರೆದುಕೊಂಡಿದ್ದಾರೆ.

ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್ ಪಾಂಡಿಯನ್​ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಚಿತ್ರ ಮೂಡಿಬರುತ್ತಿದೆ. ವಿಲಿಯಮ್​ ಡೇವಿಡ್​ ಛಾಯಾಗ್ರಹಣ, ಅಜನೀಶ್​ ಲೋಕನಾಥ್​ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸುದೀಪ್​ ಜೊತೆ ನೀತಾ ಅಶೋಕ್​, ನಿರೂಪ್​ ಭಂಡಾರಿ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ: Photo Gallery | ಕಿಚ್ಚ ಸುದೀಪ್​ ಸಿನಿ ಜರ್ನಿಗೆ 25 ವರ್ಷ.. ಬುರ್ಜ್ ಖಲೀಫಾದ ಮೇಲೆ ರಾರಾಜಿಸಲಿದೆ ವಿಕ್ರಾಂತ್​ ರೋಣ ಟೀಸರ್​..!

ಸುದೀಪ್​ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್​ ರೋಣ’ ಪೋಸ್ಟರ್​; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ