Kichcha Sudeep: ಕ್ರಿಕೆಟ್​ ಮಾತ್ರವಲ್ಲ, ಚೆಸ್​ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡಲು ರೆಡಿಯಾದ ಕಿಚ್ಚ ಸುದೀಪ್​

Viswanathan Anand: ಈ ಆಟದಲ್ಲಿ ವಿಶ್ವನಾಥನ್​ ಆನಂದ್​ ಜೊತೆ ಕಿಚ್ಚ ಸುದೀಪ್​ ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಬಾಲಿವುಡ್​ ನಟ ಆಮೀರ್​ ಖಾನ್​ ಕೂಡ ವಿಶ್ವನಾಥನ್​​ ಆನಂದ್​ಗೆ​ ಪೈಪೋಟಿ ನೀಡಲಿದ್ದಾರೆ.

Kichcha Sudeep: ಕ್ರಿಕೆಟ್​ ಮಾತ್ರವಲ್ಲ, ಚೆಸ್​ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡಲು ರೆಡಿಯಾದ ಕಿಚ್ಚ ಸುದೀಪ್​
ಕಿಚ್ಚ ಸುದೀಪ್​, ವಿಶ್ವನಾಥನ್​ ಆನಂದ್​
Follow us
ಮದನ್​ ಕುಮಾರ್​
| Updated By: Digi Tech Desk

Updated on:Jun 12, 2021 | 10:21 AM

ಕಿಚ್ಚ ಸುದೀಪ್​ ಅವರದ್ದು ಬಹುಮುಖ ಪ್ರತಿಭೆ. ನಟನೆ, ನಿರ್ದೇಶನ, ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ನಿರೂಪಣೆ, ಅಡುಗೆ ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇನ್ನು, ಕ್ರೀಡೆಯಲ್ಲೂ ಅವರಿಗೆ ಇರುವ ಆಸಕ್ತಿ ಅಪಾರ. ವೃತ್ತಿಪರ ಕ್ರಿಕೆಟರ್​ಗಳ ಜೊತೆ ಅವರು ಮೈದಾನದಲ್ಲಿ ಕಾದಾಡಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ನಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲ, ಈಗ ಅವರು ಚೆಸ್​ನಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಭಾರತೀಯರಿಗೆ ಚೆಸ್ ಎಂದ ತಕ್ಷಣ ನೆನಪಾಗುವುದು ವಿಶ್ವನಾಥನ್​ ಆನಂದ್​. 5 ಬಾರಿ ವರ್ಲ್ಡ್​ ಚಾಂಪಿಯನ್​ ಆದ ವಿಶ್ವನಾಥನ್​ ಆನಂದ್​ ಅವರ ಖ್ಯಾತಿ ದೊಡ್ಡದು. ಚೆಸ್​ನಲ್ಲಿ ಅವರಿಗೆ ಪೈಪೋಟಿ ನೀಡುವುದು ಎಂದರೆ ಸುಲಭದ ಮಾತಲ್ಲ. ಈಗ ಅವರ ಜೊತೆ ಕಿಚ್ಚ ಸುದೀಪ್​ ಸ್ಪರ್ಧೆ ನಡೆಸಲಿದ್ದಾರೆ! ಅದಕ್ಕಾಗಿ ಅಖಾಡ ಸಜ್ಜಾಗಿದೆ.

ಅರೆರೆ, ಇದೇನಿದು ಏಕಾಏಕಿ ಇಂಥ ಆಟ ಎಂದು ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರವೂ ಇಲ್ಲಿದೆ. ವಿಶ್ವನಾಥನ್​ ಆನಂದ್​ ಜೊತೆ ಸುದೀಪ್​ ಚೆಸ್​ ಆಡಲಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ. ಕೊವಿಡ್​ನಿಂದಾಗಿ ಇಡೀ ದೇಶವೇ ಕಷ್ಟದ ಪರಿಸ್ಥಿತಿಯಲ್ಲಿದೆ. ಕೊರೊನಾ ವಿರುದ್ಧ ಹೋರಾಡಲು ಹಣ ಸಂಗ್ರಹ ಮಾಡುವ ಸಲುವಾಗಿ ಈ ಆಟ ಆಯೋಜಿಸಲಾಗಿದೆ.

ಜೂ.13ರಂದು ಸಂಜೆ 5 ಗಂಟೆಗೆ ‘ಚೆಕ್​ಮೇಟ್​ ಕೊವಿಡ್​- ಸೆಲೆಬ್ರಿಟಿ ಎಡಿಷನ್​’ ಆರಂಭ ಆಗಲಿದೆ. ಇದರಲ್ಲಿ ವಿಶ್ವನಾಥನ್​ ಆನಂದ್​ ಜೊತೆ ಕಿಚ್ಚ ಸುದೀಪ್​ ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಬಾಲಿವುಡ್​ ನಟ ಆಮೀರ್​ ಖಾನ್​ ಕೂಡ ವಿಶ್ವನಾಥನ್​​ ಆನಂದ್​ಗೆ​ ಪೈಪೋಟಿ ನೀಡಲಿದ್ದಾರೆ. ಆ ಮೂಲಕ ನಿಧಿ ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ.

ಇಷ್ಟು ದಿನ ಕ್ರಿಕೆಟ್​ ಮೈದಾನದಲ್ಲಿ ಕಿಚ್ಚನ ಖದರ್​ ನೋಡಿದವರು ಈಗ ಚೆಸ್​ನಲ್ಲಿ ಅವರ ಪ್ರತಿಭೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅಕ್ಷಯ ಪಾತ್ರಾ ಫೌಂಡೇಶನ್​ ಹಾಗೂ ಚೆಸ್​ ಡಾಟ್​ ಕಾಮ್​ ಜೊತೆಯಾಗಿ ಈ ಆಟವನ್ನು ಆಯೋಜಿಸಿವೆ. Chess.com – India ಯೂಟ್ಯೂಬ್ ಚಾನೆಲ್​​ನಲ್ಲಿ ಆಟ ಪ್ರಸಾರ ಆಗಲಿದೆ.

ಇದನ್ನೂ ಓದಿ:

ಸುದೀಪ್​ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್​ ರೋಣ’ ಪೋಸ್ಟರ್​; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ

ಅನ್ನ ಅಮೃತ’ ಕಾರ್ಯಕ್ರಮದ ಮೂಲಕ 1 ಸಾವಿರ ಜನರಿಗೆ ಕಿಚ್ಚ ಸುದೀಪ್​ ಕಡೆಯಿಂದ ದಿನಸಿ ಕಿಟ್

Published On - 8:08 am, Sat, 12 June 21

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್