‘ಅನ್ನ ಅಮೃತ’ ಕಾರ್ಯಕ್ರಮದ ಮೂಲಕ 1 ಸಾವಿರ ಜನರಿಗೆ ಕಿಚ್ಚ ಸುದೀಪ್​ ಕಡೆಯಿಂದ ದಿನಸಿ ಕಿಟ್

ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಊಟಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಈ ಸಂಕಷ್ಟದ ಸಮಯದಲ್ಲಿ 1,000 ರೇಶನ್ ಕಿಟ್ ಮನೆ ಮನೆಗೆ ತಲುಪಿಸೋ ‘ಅನ್ನ ಅಮೃತ’ ಕಾರ್ಯಕ್ಕೆ ಸುದೀಪ್ ಚಾಲನೆ ನೀಡಿದ್ದಾರೆ.

'ಅನ್ನ ಅಮೃತ’ ಕಾರ್ಯಕ್ರಮದ ಮೂಲಕ 1 ಸಾವಿರ ಜನರಿಗೆ ಕಿಚ್ಚ ಸುದೀಪ್​ ಕಡೆಯಿಂದ ದಿನಸಿ ಕಿಟ್
ಕಿಚ್ಚ ಸುದೀಪ್​
Follow us
ರಾಜೇಶ್ ದುಗ್ಗುಮನೆ
|

Updated on: Jun 05, 2021 | 5:26 PM

ಕೊರೊನಾ ವೈರಸ್​ ಹರಡುವಿಕೆ ಮಿತಿ ಮೀರಿದೆ. ಇಂಥ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಸಹಾಯ ಮಾಡುತ್ತಿದ್ದಾರೆ. ಉಪೇಂದ್ರ, ಯಶ್​ ಸೇರಿ ಸಾಕಷ್ಟು ನಟರು, ನಿರ್ದೇಶಕರು ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಇತ್ತೀಚೆಗೆ ನಟ ಕಿಚ್ಚ ಸುದೀಪ್​, ಹಿರಿಯ ಕಲಾವಿದರಿಗೆ ಬೇಕಿರುವ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡಿದ್ದರು. ಈಗ ಸಂಕಷ್ಟದಲ್ಲಿರುವ 1000 ಜನರಿಗೆ ‘ಅನ್ನ ಅಮೃತ’ ಕಾರ್ಯದ ಮೂಲಕ ಸಹಾಯ ಮಾಡುತ್ತಿದ್ದಾರೆ.  

ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಊಟಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಈ ಸಂಕಷ್ಟದ ಸಮಯದಲ್ಲಿ 1,000 ರೇಶನ್ ಕಿಟ್ ಮನೆ ಮನೆಗೆ ತಲುಪಿಸೋ ‘ಅನ್ನ ಅಮೃತ’ ಕಾರ್ಯಕ್ಕೆ ಸುದೀಪ್ ಚಾಲನೆ ನೀಡಿದ್ದಾರೆ. ಇಷ್ಟು ದಿನ ‘ಕಿಚ್ಚನ ಕೈ ತುತ್ತು’ ಎಂದು ಹಸಿದವರಿಗೆ ಸುದೀಪ್ ತಂಡ ಅನ್ನ ನೀಡುತ್ತಿತ್ತು. ಈಗ ಹೊಸ ಕಾರ್ಯಮ್ರಕ್ಕೆ ಚಾಲನೆ ನೀಡಲಾಗಿದೆ. ಕಿಚ್ಚ ಸುದೀಪ್​ ಚಾರಿಟೆಬಲ್ ಟ್ರಸ್ಟ್​ ವತಿಯಿಂದ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಾಗುತ್ತಿದೆ. ಸ್ಯಾಂಡಲ್​ವುಡ್ ಹಿರಿಯ ಪೋಷಕ ನಟ ಮತ್ತು ನಟಿಯರ ಆರೋಗ್ಯ ವಿಚಾರಿಸಿ ಫುಡ್ ಕಿಟ್ ವಿತರಣೆ ಮಾಡಿದ್ದರು.

ಸಹಾಯ ಕೇಳಿಕೊಂಡು ಬಂದವರಿಗೆ ತಮ್ಮ ಕೈಲಾದ ನೆರವನ್ನು ನೀಡುವುದು ಸುದೀಪ್​ ಜಾಯಮಾನ. ಇತ್ತೀಚೆಗೆ ಅವರು ಬಿಗ್ ಬಾಸ್​ ಸೀಸನ್​ 6ರ ಸ್ಪರ್ಧಿ ಸೋನು ಪಾಟೀಲ್​ಗೆ ಸಹಾಯ ಮಾಡಿದ್ದರು. ಸೋನು ಪಾಟೀಲ್​ ಅವರ ತಾಯಿಗೆ ತೀವ್ರ ಅನಾರೋಗ್ಯವಾಗಿದ್ದು, ಅವರ ಚಿಕಿತ್ಸೆಗೆ ಸುದೀಪ್​ ಲಕ್ಷಾಂತರ ರೂಪಾಯಿ ನೀಡಿದ್ದರು. ಈ ವಿಷಯವನ್ನು ವಿಡಿಯೋ ಮೂಲಕ ಸ್ವತಃ ಸೋನು ಪಾಟೀಲ್​ ಹೇಳಿಕೊಂಡಿದ್ದರು.

ಧನ್ಯವಾದಗಳು ಅಣ್ಣ. ಯಾಕೆಂದರೆ ಈ ಸಮಯದಲ್ಲಿ ದುಡ್ಡು ಹೊಂದಿಸುವುದು ನಮಗೆ ಬಹಳ ಕಷ್ಟ ಆಗುತ್ತಿತ್ತು. ನನಗೆ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಸಾಯುವವರೆಗೆ ನಿಮ್ಮ ಋಣವನ್ನು ಮರೆಯುವುದಿಲ್ಲ. ಇವತ್ತಿನ ಸಂದರ್ಭದಲ್ಲಿ ಯಾರ ಬಳಿಯೂ ದುಡ್ಡು ಇಲ್ಲ. ದುಡ್ಡು ಇದ್ದವರು ಕೊಡಲು ಮುಂದೆ ಬರುವುದಿಲ್ಲ. ಎಲ್ಲರೂ ಕೈಬಿಟ್ಟರೂ ಸುದೀಪ್​ ಅಣ್ಣ ನಮ್ಮ ಕೈ ಬಿಡಲಿಲ್ಲ. ಫ್ಯಾಮಿಲಿ ಎಂದು ಹೇಳಿದ್ದರು. ಇಂದಿಗೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ನನಗೆ ಮಾತ್ರವಲ್ಲ, ಕೊವಿಡ್​ ಸಂದರ್ಭದಲ್ಲಿ ಕಷ್ಟಪಡುತ್ತಿರುವ ಅನೇಕರಿಗೆ ಸುದೀಪ್​ ಚಾರಿಟೆಬಲ್​ ಟ್ರಸ್ಟ್​ನಿಂದ ಸಹಾಯ ಮಾಡುತ್ತಿದ್ದಾರೆ. ನನ್ನ ಆಯಷ್ಯವನ್ನೂ ಆ ದೇವರು ನಿಮಗೆ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಅಣ್ಣ’ ಎಂದು ಸೋನು ಪಾಟೀಲ್​ ಹೇಳಿದ್ದರು.

ಇದನ್ನೂ ಓದಿ: Kichcha Sudeep: ಹಿರಿಯ ಕಲಾವಿದರ ಸಹಾಯಕ್ಕೆ ನಿಂತ ಸುದೀಪ್​; ಅಗತ್ಯ ವಸ್ತುಗಳ ಜತೆ ಪತ್ರ ತಲುಪಿಸಿದ ಕಿಚ್ಚ

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ