ಕೊವಿಡ್​ ಲಸಿಕೆ ಹಾಕಿಸಿಕೊಂಡ ಧ್ರುವ ಸರ್ಜಾ; ಬೈಸೆಪ್ಸ್​ ನೋಡಿ ದಂಗಾದ ಫ್ಯಾನ್ಸ್​

ಕೊವಿಡ್​ ಲಸಿಕೆ ಹಾಕಿಸಿಕೊಂಡ ಧ್ರುವ ಸರ್ಜಾ; ಬೈಸೆಪ್ಸ್​ ನೋಡಿ ದಂಗಾದ ಫ್ಯಾನ್ಸ್​
ಧ್ರುವ ಸರ್ಜಾ

ಅವರು ಲಸಿಕೆ ಹಾಕಿಸಿಕೊಳ್ಳುವಾಗ ಶರ್ಟ್​ ತೆಗೆದಿದ್ದರು. ಹೀಗಾಗಿ, ಅವರ ಬೈಸೆಪ್ಸ್​ ಎದ್ದು ಕಾಣುತ್ತಿತ್ತು. ಇದನ್ನು ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ.

Rajesh Duggumane

|

Jun 05, 2021 | 7:49 PM

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದೆ. ಇದರ ಜತೆಗೆ ​ ಕೊರೊನಾ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಿದೆ. ಅನೇಕ ಸೆಲೆಬ್ರಿಟಿಗಳು ಕೊವಿಡ್​ ಲಸಿಕೆ ಪಡೆದು ತಮ್ಮ ಅಭಿಮಾನಿಗಳ ಬಳಿ ಕೊರೊನಾ ಲಸಿಕೆ ಪಡೆಯವಂತೆ ಕರೆ ನೀಡುತ್ತಿದ್ದಾರೆ. ಈಗ ಸ್ಯಾಂಡಲ್​​ವುಡ್​ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಕೂಡ ಕೊವಿಡ್​ ಲಸಿಕೆ ಹಾಕಿಸಿಕೊಂಡಿದ್ದಾರೆ.  

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ ದಂಪತಿ ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಧ್ರುವ, ನೀವೂ ಕೂಡ ತಪ್ಪದೇ ವ್ಯಾಕ್ಸಿನೇಷನ್​ ಮಾಡಿಕೊಂಡು ಕೊವಿಡ್ ಮುಕ್ತ ಭಾರತ ನಿರ್ಮಾಣ ಮಾಡಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ಇನ್ನು, ಅವರು ಲಸಿಕೆ ಹಾಕಿಸಿಕೊಳ್ಳುವಾಗ ಶರ್ಟ್​ ತೆಗೆದಿದ್ದರು. ಹೀಗಾಗಿ, ಅವರ ಬೈಸೆಪ್ಸ್​ ಎದ್ದು ಕಾಣುತ್ತಿತ್ತು. ಇದನ್ನು ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ. ಅಲ್ಲದೆ, ನಿಮ್ಮ ಬೈಸೆಪ್ಸ್​ ಅದ್ಭುತವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು, ಅಗತ್ಯವಿದ್ದಲ್ಲಿ ಮಾತ್ರ ಶರ್ಟ್​ ತೆಗೆಯಿರಿ ಎಂದು ಕಿವಿಮಾತು ಹೇಳಿದ್ದಾರೆ.

ಧ್ರುವ ಸರ್ಜಾ ಅವರಿಗೆ ಕಳೆದ ವರ್ಷ ಕೊವಿಡ್​ ಪಾಸಿಟಿವ್​ ಆಗಿತ್ತು. ಈ ವೇಳೆ ಟ್ವೀಟ್​ ಮಾಡಿದ್ದ ಅವರು, ನನಗೆ ಕೊವಿಡ್ ಪಾಸಿಟಿವ್​ ಆಗಿದೆ. ಹೀಗಾಗಿ, ನಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆಗೆ ಒಳಪಡಿ ಎಂದು ಮನವಿ ಮಾಡಿದ್ದರು. ನಂತರ ಅವರು ಕೊವಿಡ್​ನಿಂದ ಚೇತರಿಸಿಕೊಂಡಿದ್ದರು.

ಇದೇ ವೇಳೆ ಧ್ರುವ ಅತ್ತಿಗೆ ಮೇಘನಾ ರಾಜ್​ ಕುಟುಂಬದ ಎಲ್ಲರಿಗೂ ಕೊರೊನಾ ಪಾಸಿಟಿವ್​ ಆಗಿತ್ತು. ಆ ವಿಚಾರವನ್ನು ಅವರು ಡಿ.8ರಂದು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದರು. ಮೇಘನಾ ರಾಜ್​ ಮತ್ತು ಅವರ ಪುತ್ರ ಮನೆಯಲ್ಲೇ ಐಸೋಲೇಟ್​ ಆಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದರು.

ಇದನ್ನೂ ಓದಿ: Meghana Raj: ಮೇಘನಾ ರಾಜ್​ ಮನೆಯಲ್ಲಿ ಮತ್ತೆ ಶೋಕ; ಕುಟುಂಬದ ಸದಸ್ಯನಂತಿದ್ದ ಬ್ರುನೋ ಸಾವು

Follow us on

Related Stories

Most Read Stories

Click on your DTH Provider to Add TV9 Kannada