Viral Photo: ಮಮತಾ ಬ್ಯಾನರ್ಜಿಗೆ ಮದುವೆಯಂತೆ! ವರ ಯಾರು ಗೊತ್ತಾ? ಲಗ್ನ ಪತ್ರಿಕೆ ನೋಡಿ

ಜೂನ್​ 13ನೇ ತಾರೀಕಿನಂದು ನವ ಜೋಡಿಗಳಾಗಿ ಹಸೆ ಮಣೆ ಏರುತ್ತಿರುವ ವಧುವಿನ ಹೆಸರು ‘ಮಮತಾ ಬ್ಯಾನರ್ಜಿ’ ಮತ್ತು ವರನ ಹೆಸರು ‘ಸೋಶಿಯಲಿಸಂ’. ಕಳೆದ ಕೆಲವು ದಿನಗಳಿಂದ ಈ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ.

Viral Photo: ಮಮತಾ ಬ್ಯಾನರ್ಜಿಗೆ ಮದುವೆಯಂತೆ! ವರ ಯಾರು ಗೊತ್ತಾ? ಲಗ್ನ ಪತ್ರಿಕೆ ನೋಡಿ
ಲಗ್ನ ಪತ್ರಿಕೆ
Follow us
TV9 Web
| Updated By: shruti hegde

Updated on:Jun 11, 2021 | 1:00 PM

ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ.. ಅಬ್ಬಾ ಇದೇನಪ್ಪಾ ಎಂದು ಕುತೂಹಲ ಕೆರಳಿಸುತ್ತಿರುವ ವಿಷಯವೊಂದು ಹರಿದಾಡುತ್ತಿದೆ. ಒಮ್ಮೆಲೆ ವಿಷಯ ಕೇಳಿದೊಡನೆ ಎಲ್ಲರಿಗೂ ಆಶ್ಚರ್ಯವಾಗುವಂತಹ ಸುದ್ದಿ ಇದು. ಜೂನ್​ 13ರಂದು ನಡೆಯಲಿರುವ ಮದುವೆ ವಿವಾಹದ ಲಗ್ನ ಪತ್ರಿಕೆಯೊಂದು ಭಾರೀ ಸುದ್ದಿಯಲ್ಲಿದೆ. ಗಾಬರಿಯಾಗಬೇಡಿ ವಿಷಯ ನಿಜವೇ! ಸರಿಯಾಗಿಯೇ ಓದಿದ್ದೀರಿ. ಮಮತಾ ಬ್ಯಾನರ್ಜಿ ಮತ್ತು ಸೋಶಿಯಲಿಸಂ ಎಂಬ ಹೆಸರಿನ ಮಧು-ವರ ವಿವಾಹವಾಗುತ್ತಿದ್ದಾರೆ. 

ಜೂನ್​ 13ನೇ ತಾರೀಕಿನಂದು ನವ ಜೋಡಿಗಳಾಗಿ ಹಸೆ ಮಣೆ ಏರುತ್ತಿರುವ ವಧುವಿನ ಹೆಸರು ‘ಮಮತಾ ಬ್ಯಾನರ್ಜಿ’ ಮತ್ತು ವರನ ಹೆಸರು ‘ಸೋಶಿಯಲಿಸಂ’. ಕಳೆದ ಕೆಲವು ದಿನಗಳಿಂದ ಈ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ವಿವಾಹದ ವಧು ಮತ್ತು ವರನ ಹೆಸರನ್ನು ಕೇಳಿದ್ರೆ ನಿಜವಾಗಿಯೂ ಆಶ್ಚರ್ಯ ಆಗುವುದು ನಿಜ.

ತಮಿಳು ನಾಡಿನ ಸೇಲಂನ ಮೋಹನ್​ ಎಂಬುವವರ ಪುತ್ರ ಸೋಶಿಯಲಿಸಂ. ಅವರು ನಂಬಿದ ಸಿದ್ಧಾಂತಕ್ಕೆ ತಕ್ಕಂತೆಯೇ ಇನ್ನಿತರ ಪುತ್ರರಿಗೂ ಕೂಡಾ ‘ ಕಮ್ಯುನಿಸಂ’, ‘ಲೆನಿನಿಸಂ’ ಎಂದು ನಾಮಕರಣ ಮಾಡಿದ್ದಾರೆ. ಹಾಗೂ ಅವರ ಮೊಮ್ಮಗನಿಗೆ ‘ಮಾರ್ಕ್ಸಿಸಂ’ಎಂದು ಹೆಸರಿಟ್ಟಿದ್ದಾರೆ. ವರನ ತಂದೆ ಮೋಹನ್​ ಅವರು ತಮಿಳುನಾಡಿನ ಸೇಲಂನಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ.

mamarabanarjee wedding

ಈ ಕುರಿತಂತೆ ಮೋಹನ್​ ಅವರು ಮಾತನಾಡಿ, ನನ್ನ ಮಕ್ಕಳು ಯಾವಾಗಲೂ ಜನರ ಬೆಂಬಲಿಗರಾಗಿ ನಿಂತಿದ್ದಾರೆ. ತಮ್ಮ 5 ನೇ ವಯಸ್ಸಿನಿಂದಲೇ ಪಕ್ಷದ ಸಭೆಗಳಲ್ಲಿ ಭಾಗವಹಿಸುವಂತೆ ನಾನು ಅವರನ್ನು ಪ್ರೋತ್ಸಾಹಿಸಿದ್ದೇನೆ. ದೊಡ್ಡವರಾಗುತ್ತಿದ್ದಂತೆಯೇ ಪ್ರತಿಭಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 2009ರಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಮಿಳುನಾಡಿನಿಂದ 2,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ನನ್ನ ಮಕ್ಕಳಾದ ‘ಕಮ್ಯುನಿಸಂ’ ಮತ್ತು ‘ಲೆನಿನಿಸಂ’ ಭಾಗವಹಿಸಿದ್ದರು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೂರು ವರ್ಷದ ಹಿಂದೆ ಕಮ್ಯುನಿಸಂ ಹೆಸರಿನ ಮಗನನ್ನು ಆಸ್ಪತ್ರೆಗೆ ದಾಖಲಿಸಲು ಕಷ್ಟಪಟ್ಟ ಕುರಿತಾಗಿ  ಮಾತನಾಡಿದ ಮೋಹನ್ ಅವರು​​, ಹೆಸರು ಕೇಳಿದಾಕ್ಷಣ ವೈದ್ಯರು ನನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದರು. ಹಾಗಾಗಿ ಬೇರೆ ಆಸ್ಪತ್ರೆಯೊಂದನ್ನು ಹುಡುಕುವ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಿದ್ದಾರೆ. ಆದರೆ ಖುಷಿಯೆಂದರೆ, ಇವರ ಹೆಸರುಗಳನ್ನು ಕಾಲೇಜಿನಲ್ಲಿ ಕೇಳಿದ ವಿದ್ಯಾರ್ಥಿಗಳು ಹೆಚ್ಚು ಉತ್ಸುಕರಾದರು. ಕಮ್ಯುನಿಸಂ ಈಗ ವಕೀಲ ವೃತ್ತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತಂತೆ ಇಂಡಿಯನ್​ ಎಕ್ಸ್​ಪ್ರೆಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಮತಾ ಬ್ಯಾನರ್ಜಿ ಎಂಬ ಹೆಸರಿನ ವಧುವಿನ ಅಜ್ಜ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದರು. ಮಮತಾ ಬ್ಯಾನರ್ಜಿಯವರ ಕಾರ್ಯಗಳಿಂದ ಪ್ರೇರೇಪಿತರಾದ ಅವರು ತಮ್ಮ ಮೊಮ್ಮಗಳಿಗೆ ಅವರ ಹೆಸರನ್ನೇ ಇಟ್ಟು ನಾಮಕರಣ ಮಾಡಿದರು. ಇವರ ಮದುವೆಗೆ ಸಿಸಿಐ(ಎಂ)ನ ರಾಜ್ಯ ಕಾರ್ಯದರ್ಶಿ ಮುತ್ತರಸನ್​ ಮತ್ತು ಸಹಾಯಕ ಕಾರ್ಯದರ್ಶಿ ಸುಬ್ಬರಾಯನ್​ ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಇದನ್ನೂ ಓದಿ:

Viral Video: ಅತಿ ಹೆಚ್ಚು ವೇಗದಲ್ಲಿ ಗ್ರೀಸ್​ ಹಚ್ಚಿದ ಕಂಬವನ್ನು ದಾಟುವವರು ಯಾರು? ವಿಡಿಯೋ ವೈರಲ್

Viral Video: ರೈಲು ಹತ್ತುವಾಗ ಜಾರಿ ಬಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಆರ್​ಪಿಎಫ್​ ಕಾನ್​ಸ್ಟೇಬಲ್​

Published On - 12:52 pm, Fri, 11 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್