AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೈಲು ಹತ್ತುವಾಗ ಜಾರಿ ಬಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಆರ್​ಪಿಎಫ್​ ಕಾನ್​ಸ್ಟೇಬಲ್​

ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ರೈಲು ಹತ್ತಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಅಚಾನಕ್​ ಆಗಿ ಹಿಡಿತ ತಪ್ಪಿ ಜಾರಿ ಬೀಳುತ್ತಾನೆ. ರೈಲು ಮತ್ತು ನಿಂತಿರುವ ಜಾಗದ ಮಧ್ಯದಲ್ಲಿರುವ ಅಂತರದಲ್ಲಿ ಸಿಲುಕಿಕೊಳ್ಳುತ್ತಾನೆ. ಅಲ್ಲಿದ್ದ ಆರ್​ಪಿಎಫ್​ ಕಾನ್​ಸ್ಟೇಬಲ್​ ಅದನ್ನು ಗಮನಿಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.

Viral Video: ರೈಲು ಹತ್ತುವಾಗ ಜಾರಿ ಬಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಆರ್​ಪಿಎಫ್​ ಕಾನ್​ಸ್ಟೇಬಲ್​
ವ್ಯಕ್ತಿ ರೈಲು ಹತ್ತುತ್ತಿರುವ ದೃಶ್ಯ
TV9 Web
| Updated By: shruti hegde|

Updated on: Jun 10, 2021 | 5:51 PM

Share

ಕೆಲವೊಮ್ಮೆ ಎಷ್ಟೇ ಗಮನದಲ್ಲಿದ್ದರೂ ಅಚಾನಕ್​ ಆಗಿ ಭಯಂಕರ ಸನ್ನಿವೇಶವೊಂದು ನಡೆದುಹೋಗುತ್ತದೆ. ಅಂತಹುದೇ ಒಂದು ಘಟನೆ ಮುಂಬೈ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.  ಆದರೆ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು. ಅಲ್ಲೇ ಇದ್ದ ಆರ್​ಪಿಎಫ್​ ಕಾನ್ಸ್ಟೇಬಲ್​ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಹಳಿಯ ಮೇಲೆ ನಿಧಾನವಾಗಿ ಸಾಗುತ್ತಲೇ ಇರುವ ರೈಲನ್ನು ಹತ್ತುವಾಗ ವ್ಯಕ್ತಿಯೊಬ್ಬ ಜಾರಿ ಬಿದ್ದ ಘಟನೆ ನಡೆದಿದೆ. ಸಮಯಕ್ಕೆ ಸರಿಯಾಗಿ ಆರ್​ಪಿಎಫ್​ ಕಾನ್​ಸ್ಟೇಬಲ್​ ಆತನನ್ನು ರಕ್ಷಿಸಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೆಲವು ಬಾರಿ ರೈಲು ಹತ್ತುವ ಆತುರದಲ್ಲಿ ಗಡಿಬಿಡಿ ಮಾಡುತ್ತೇವೆ. ಅದೇ ಕೆಲವು ಬಾರಿ ಅಚಾತುರ್ಯಕ್ಕೆ ಕಾರಣವಾಗಬಹುದು. ಹೀಗಿರುವಾಗ ವಾಹನಗಳನ್ನು ಹತ್ತುವಾಗ ಅಥವಾ ಇಳಿಯುವಾಗ ಎಷ್ಟು ಎಚ್ಚರವಾಗಿದ್ದರೂ ಸಾಲದು. ರೈಲು ಹತ್ತುವಾಗ ವ್ಯಕ್ತಿಯೋರ್ವ ಜಾರಿ ಬಿದ್ದ ಘಟನೆ ನಡೆದಿದೆ. ತಕ್ಷಣವೇ ಆರ್​ಪಿಎಫ್​ ಕಾನ್​ಸ್ಟೇಬಲ್​ ಆನನ್ನು ರಕ್ಷಿಸಿದ ವಿಡಿಯೋವನ್ನು ಸೆಂಟ್ರಲ್​ ರೈಲ್ವೇ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಾನ್​ಸ್ಟೇಬಲ್​ರನ್ನು ಶ್ಲಾಘಿಸಿದ್ದಾರೆ.

ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ರೈಲು ಹತ್ತಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಅಚಾನಕ್​ ಆಗಿ ಹಿಡಿತ ತಪ್ಪಿ ಜಾರಿ ಬೀಳುತ್ತಾನೆ. ರೈಲು ಮತ್ತು ನಿಂತಿರುವ ಜಾಗದ ಮಧ್ಯದಲ್ಲಿರುವ ಅಂತರದಲ್ಲಿ ಸಿಲುಕಿಕೊಳ್ಳುತ್ತಾನೆ. ಅಲ್ಲಿದ್ದ ಆರ್​ಪಿಎಫ್​ ಕಾನ್​ಸ್ಟೇಬಲ್​ ಅದನ್ನು ಗಮನಿಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆರ್​ಪಿಎಫ್​ಗೆ ಸಲಾಂ… ಆ ಸಮಯದಲ್ಲಿ ತಡಮಾಡದೇ ವ್ಯಕ್ತಿಯನ್ನು ಕಾಪಾಡಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Viral Video : ಒಬ್ಬ ವ್ಯಕ್ತಿ 37 ನೇ ಬಾರಿಗೆ ಮದುವೆಯಾಗುತ್ತಿದ್ದಾನೆ ಎಂಬ ವಿಡಿಯೋ ಸದ್ಯ ಸಿಕ್ಕಾ ಪಟ್ಟೆ ವೈರಲ್ ಆಗಿದೆ!

Viral Video: ಅಬ್ಬಬ್ಬಾ ಭಯವೇ ಇಲ್ವೇ ಈಕೆಗೆ? ಸರಸರನೆ ಹರಿಯುವ ವಿಷಪೂರಿತ ಸರ್ಪದೊಟ್ಟಿಗೆ ಯುವತಿಯ ಸೆಣೆಸಾಟ