ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಇಷ್ಟೊಂದು ಬದಲಾಗಿದ್ದಾರಾ? ಸಾಮಾಜಿಕ ಜಾಲತಾಣಗಳಲ್ಲಿ ಅವರದ್ದೇ ಸುದ್ದಿ
ಹಸೀನ್ ಜಹಾನ್ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವೊಂದಷ್ಟು ಮಂದಿ ಕಾಲೆಳೆದು ಟ್ರೋಲ್ ಮಾಡಿದ್ದಾರೆ. ಆಧುನಿಕ ಉಡುಗೆ ತೊಡುಗೆಗಳೊಂದಿಗೆ ಯಾವ ಹೀರೋಯಿನ್ಗೂ ಕಮ್ಮಿ ಇಲ್ಲವೆಂಬಂತೆ ಫೋಟೋ ತೆಗೆಸಿಕೊಂಡಿರುವ ಹಸೀನ್ ಸೀರೆ ಉಟ್ಟು ಸಾಂಪ್ರದಾಯಿಕ ಶೈಲಿಯಲ್ಲೂ ಮಿಂಚಿದ್ದಾರೆ. ಇತ್ತೀಚೆಗೆ ವೈರಲ್ ಆಗಿರುವ ಹಸೀನ್ ಜಹಾನ್ ಅವರ ಕೆಲ ಫೋಟೋಗಳು ಇಲ್ಲಿವೆ.
ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ 2014ರಲ್ಲಿ ಹಸೀನ್ ಜಹಾನ್ ಎಂಬುವವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ್ದು, ಕಳೆದ ಕೆಲ ವರ್ಷಗಳಿಂದ ಈ ಜೋಡಿ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಇವರಿಬ್ಬರ ನಡುವೆ ಕೆಲ ಮನಸ್ತಾಪಗಳು ತಲೆದೋರಿರುವ ಕಾರಣ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ಗುಸುಗುಸು ಎದ್ದಿತ್ತಾದರೂ ಪ್ರಸ್ತುತ ವಿಚ್ಛೇದನ ಪಡೆಯದೇ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ. ಅಂದಹಾಗೆ, ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದು, ಆಗಾಗ ಒಂದಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಸಿಕ್ಕಾಪಟ್ಟೆ ಗಮನ ಸೆಳೆದಿದ್ದು, ವೈರಲ್ ಆಗುತ್ತಿದೆ. ಅದರೊಟ್ಟಿಗೆ ಇನ್ನೂ ಕೆಲ ಫೋಟೋಗಳನ್ನು ಕಂಡು ಜನರು ಹುಬ್ಬೇರಿಸಿದ್ದಾರೆ.
ಹಸೀನ್ ಜಹಾನ್ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವೊಂದಷ್ಟು ಮಂದಿ ಕಾಲೆಳೆದು ಟ್ರೋಲ್ ಮಾಡಿದ್ದಾರೆ. ಆಧುನಿಕ ಉಡುಗೆ ತೊಡುಗೆಗಳೊಂದಿಗೆ ಯಾವ ಹೀರೋಯಿನ್ಗೂ ಕಮ್ಮಿ ಇಲ್ಲವೆಂಬಂತೆ ಫೋಟೋ ತೆಗೆಸಿಕೊಂಡಿರುವ ಹಸೀನ್ ಸೀರೆ ಉಟ್ಟು ಸಾಂಪ್ರದಾಯಿಕ ಶೈಲಿಯಲ್ಲೂ ಮಿಂಚಿದ್ದಾರೆ. ಇತ್ತೀಚೆಗೆ ವೈರಲ್ ಆಗಿರುವ ಹಸೀನ್ ಜಹಾನ್ ಅವರ ಕೆಲ ಫೋಟೋಗಳು ಇಲ್ಲಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುವಾಗ #HasinJahanfam #Model ಸೇರಿದಂತೆ ಬೇರೆ ಬೇರೆ ಹ್ಯಾಶ್ಟ್ಯಾಗ್ಗಳೊಂದಿಗೆ ಇವರು ಫೋಟೋ ಹಂಚಿಕೊಳ್ಳುವುದು ಸಾಮಾನ್ಯವಾಗಿದ್ದು #stylistHasinJahan ಎಂಬ ಹ್ಯಾಶ್ಟ್ಯಾಗನ್ನೂ ಸೇರಿಸಿಕೊಂಡಿರುತ್ತಾರೆ. ಇವರ ಇನ್ಸ್ಟಾಗ್ರಾಂ ಖಾತೆಗೆ ಅಪಾರ ಅಭಿಮಾನಿಗಳಿದ್ದು, 1.25ಲಕ್ಷಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ.
View this post on Instagram
2018ರಲ್ಲಿ ಪತಿಯ ವಿರುದ್ಧ ದೌರ್ಜನ್ಯ, ಅತ್ಯಾಚಾರ, ಹತ್ಯೆ ಯತ್ನ ಸೇರಿದಂತೆ ಬೇರೆ ಬೇರೆ ಆರೋಪಗಳನ್ನು ಮಾಡಿ ಭಾರೀ ಸುದ್ದಿಯಾಗಿದ್ದ ಹಸೀನ್ ಜಹಾನ್, ಪತಿ ಶಮಿಯ ಸಹೋದರನ ಮೇಲೂ ಕೆಲ ದೂರು ದಾಖಲಿಸಿದ್ದರು. 2014ರಲ್ಲಿ ಮೊಹಮ್ಮದ್ ಶಮಿ ಹಾಗೂ ಹಸೀನ್ ಜಹಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇವರಿಗೆ ಒಬ್ಬ ಮಗಳೂ ಇದ್ದಾಳೆ.
ಇದನ್ನೂ ಓದಿ: ವಿಚ್ಛೇದನ ಮತ್ತು ಹೊಸ ಬದುಕು: ಭಾರತ ತಂಡದ ಈ 5 ಪ್ರಸಿದ್ಧ ಆಟಗಾರರು ಮದುವೆಯಾಗಿದ್ದು ವಿಚ್ಛೇದಿತರನ್ನು