#BJPFailedKarnataka: ಟ್ವಿಟರ್ನಲ್ಲಿ ಟ್ರೆಂಡ್ ಆಗ್ತಿದೆ ಕರ್ನಾಟಕ ಸರ್ಕಾರದ ವೈಫಲ್ಯ
ಕರ್ನಾಟಕದ ಬಿಜೆಪಿ ಸರ್ಕಾರವು ಎಲ್ಲಾ ರಂಗಗಳನ್ನು ವಿಫಲವಾಗಿದೆ ಎಂದು ಹಲವು ಉದಾಹರಣೆಗಳ ಸಮೇತ ಜನರು ಟ್ವಿಟರ್ನಲ್ಲಿ ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. #BJPFailedKarnataka ಹ್ಯಾಷ್ಟ್ಯಾಗ್ ಟ್ವಿಟರ್ ಇಂಡಿಯಾ ವಿಭಾಗದಲ್ಲಿ ಮುಂಜಾನೆಯಿಂದ ಟ್ರೆಂಡ್ ಆಗುತ್ತಿದೆ.
ಬೆಂಗಳೂರು: ಕರ್ನಾಟಕದ ಬಿಜೆಪಿ ಸರ್ಕಾರವು ಎಲ್ಲಾ ರಂಗಗಳನ್ನು ವಿಫಲವಾಗಿದೆ ಎಂದು ಹಲವು ಉದಾಹರಣೆಗಳ ಸಮೇತ ಜನರು ಟ್ವಿಟರ್ನಲ್ಲಿ ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. #BJPFailedKarnataka ಹ್ಯಾಷ್ಟ್ಯಾಗ್ ಟ್ವಿಟರ್ ಇಂಡಿಯಾ ವಿಭಾಗದಲ್ಲಿ ಮುಂಜಾನೆಯಿಂದ ಟ್ರೆಂಡ್ ಆಗುತ್ತಿದೆ. 24 ಸಾವಿರಕ್ಕೂ ಹೆಚ್ಚು ಜನರು ಈ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಆದರೆ ಕೆಲವರು #BJPFailedKarnataka ಹ್ಯಾಷ್ಟ್ಯಾಗ್ ಒಂದನ್ನೇ ನಾಲ್ಕೈದು ಸಲ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಇದು ವಿರೋಧಪಕ್ಷಗಳ ತಂತ್ರವೂ ಇರಬಹುದು ಎಂಬ ಅನುಮಾನ ಮೂಡುತ್ತದೆ.
ಜೈಲಿಗೆ ಹೋದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಕಳೆದ ಅಧಿಕಾರ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ನಿರ್ಮಿಸಿದರು ಎಂದು ಕೆಲವರು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ನಿಗದಿತ ಸೌಲಭ್ಯಗಳು ಸಿಗುತ್ತಿಲ್ಲ ಎಂದು ವಾಸಿಂ ಸುಲ್ತಾನ್ ಟ್ವೀಟ್ ಮಾಡಿದ್ದಾರೆ. ‘ಕರ್ನಾಟಕಕ್ಕೆ ಜಿಎಸ್ಟಿ ಪರಿಹಾರ ಸಿಕ್ಕಿಲ್ಲ, ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಅನುದಾನ ಬಂದಿಲ್ಲ. ನಿರೀಕ್ಷೆಯಂತೆ ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ’ ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಮ್ಮ ದೇಶದಲ್ಲಿ ಅತಿಹೆಚ್ಚು ತೆರಿಗೆ ತುಂಬುವ 3ನೇ ದೊಡ್ಡ ರಾಜ್ಯ ಕರ್ನಾಟಕ. 25 ಮಂದಿ ಬಿಜೆಪಿ ಸಂಸದರಿದ್ದರೂ ಇವರಿಗೆ ಅನುದಾನ ತರುವಷ್ಟು ಬೆನ್ನುಮೂಳೆ ಗಟ್ಟಿಯಿಲ್ಲ’ ಎಂದು ಟೀಕಿಸಿದ್ದಾರೆ.
Karnataka has not received GST compensation, have not received money for rehabilitation of victims of floods, and have not received any grants from the Centre what was estimated. #BJPFailedKarnataka
— Waseem Sultan (@WaseemS27956478) June 10, 2021
‘ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಕರ್ನಾಟಕ ಬಿಜೆಪಿ ಸರ್ಕಾರದ ಭಾಗವಾಗಿರುವವರು ತಮ್ಮ ಅಭಿವೃದ್ಧಿಯಲ್ಲಿ ಮಗ್ನವಾಗಿದ್ದಾರೆ’ ಎಂಬುದು ವಿಶಾಲ್ ಮೀನಾ ಮಾಡಿರುವ ಆರೋಪ.
BJP government which fulfills the dreams of the people of Karnataka, is busy in its development.#BJPFailedKarnataka@KarnatakaPMC @NSUIKarnataka
— Vishal Meena ?? (@VishalMeena_INC) June 10, 2021
‘ಗುಜರಾತ್ಗೆ ನರೇಂದ್ರ ಮೋದಿ ₹ 1 ಸಾವಿರ ಕೋಟಿ ಪರಿಹಾರ ನೀಡಿದ್ದಾರೆ. ಆದರೆ ಕರ್ನಾಟಕ ಪ್ರವಾಹದಿಂದ ಕಷ್ಟಪಡುತ್ತಿದ್ದಾಗ ಒಂದೇ ಒಂದು ರೂಪಾಯಿ ಪರಿಹಾರ ಕೊಡಲಿಲ್ಲ’ ಎಂಬುದು ಅಂಜನ್ ಕುಮಾರ್ ಯಾದವ್ ಅವರ ಆಕ್ಷೇಪ. ‘ಕರ್ನಾಟಕದ ಮೂಲಕ ದಕ್ಷಿಣ ಭಾರತಕ್ಕೆ ಬಿಜೆಪಿ ಪ್ರವೇಶ ಮಾಡಿತು ಎಂದು ಆ ಪಕ್ಷದವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಕನ್ನಡಿಗರು ತಪ್ಪು ನಿರ್ಧಾರ ತೆಗೆದುಕೊಂಡರು ಎಂದು ಆಗ ನಾನು ಅಂದುಕೊಂಡಿದ್ದೆ. ಈಗಿನ ಬೆಳವಣಿಗೆ ನೋಡಿದರೆ ಉಳಿದವರಿಗೂ ಹೀಗೆಯೇ ಅನ್ನಿಸುತ್ತಿರಬಹುದು’ ಎಂದು ಕಣ್ಣನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಬಿಬಿಎಂಪಿಯಲ್ಲಿ ಈಚೆಗೆ ತೇಜಸ್ವಿ ಸೂರ್ಯ ಬಹಿರಂಗಪಡಿಸಿದ ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಸಂತೋಷ್ ಎನ್ನುವವರು ಪ್ರಸ್ತಾಪಿಸಿದ್ದಾರೆ. ‘ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಹುತೇಕ ಶಾಸಕರು, ಕಾರ್ಪೊರೇಟರ್ಗಳು ಬಿಜೆಪಿಯವರೇ ಆಗಿರುವಾಗ ಬೆಡ್ ಬ್ಲಾಕಿಂಗ್ ಹಗರಣಕ್ಕೆ ಯಾರು ಹೊಣೆಯಾಗುತ್ತಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.
ಆದಾಯ ಕೊರತೆ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಹಲವರು ಪ್ರಸ್ತಾಪಿಸಿದ್ದಾರೆ. ಕೊರೊನಾ ಪಿಡುಗು ವ್ಯಾಪಕವಾಗಿದ್ದಾಗ ಹೆಚ್ಚಾಗಿದ್ದಾಗ ಬಿಜೆಪಿಯು ಬೆಡ್ ಹಂಚಿಕೆಯಲ್ಲಿ ಭ್ರಷ್ಟಾಚಾರ ಮಾಡಿತು ಎಂದು ಬಿಲಾಲ್ ಭಗವಾನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
In pandemic BJP make money over allocation of beds, they do corruption black-marketing vaccine..#BJPFailedKarnataka pic.twitter.com/RI1VTmrFO6
— Bilal Bagwan (@BilalBagwan05) June 10, 2021
ಆದರೆ ಬಹುತೇಕರು ಕೇವಲ #BJPFailedKarnataka ಹ್ಯಾಷ್ಟ್ಯಾಗ್ ಒಂದನ್ನೇ ನಾಲ್ಕೈದು ಬಾರಿ ಟ್ವೀಟ್ ಮಾಡಿದ್ದಾರೆ. ಈ ಹ್ಯಾಷ್ಟ್ಯಾಗ್ ಟ್ರೆಂಡ್ ಮಾಡುವ ಏಕಮೇವ ಉದ್ದೇಶ ಯಾರಿಗೋ ಇದ್ದಂತೆ ಇದೆ ಎಂಬ ಅನುಮಾನ ಮೂಡುತ್ತದೆ.
ಇದನ್ನೂ ಓದಿ: ಜನರ ಸಂಕಷ್ಟವೆಂಬ ಹಸಿಗಾಯದ ಮೇಲೆ ವಿದ್ಯುತ್ ಬೆಲೆ ಏರಿಕೆಯ ಬರೆ: ಸಿದ್ದರಾಮಯ್ಯ ಆಕ್ರೋಶ
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಮೂಲೆಗುಂಪಾಗುವಂಥ ತಂತ್ರ ಹೆಣಿ: ಕುಮಾರಸ್ವಾಮಿಗೆ ದೇವೇಗೌಡರ ಕಿವಿಮಾತು
(BJP Failed Karnataka Hashtag Trending in Twitter Many Criticizes State govt Policies)