Viral Video: ಅಬ್ಬಬ್ಬಾ ಭಯವೇ ಇಲ್ವೇ ಈಕೆಗೆ? ಸರಸರನೆ ಹರಿಯುವ ವಿಷಪೂರಿತ ಸರ್ಪದೊಟ್ಟಿಗೆ ಯುವತಿಯ ಸೆಣೆಸಾಟ

ಶ್ವೇತಾಳ ಅಧಿಕೃತ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಅವಳ ಇನ್​ಸ್ಟಾಗ್ರಾಂ ಖಾತೆಯನ್ನು ನೋಡಿದರೆ ಅವಳು ಹಾವು ಹಿಡಿಯುವಲ್ಲಿ ಪರಿಣಿತಳು ಎಂಬುದು ತಿಳಿದು ಬರುತ್ತದೆ. ಸೋಶಿಯಲ್​ ಮಿಡಿಯಾದಲ್ಲಿ ಅವಳ ಪೋಸ್ಟ್​ಗಳನ್ನು ನೋಡಿ ಜನರು ಧಂಗಾಗಿದ್ದಾರೆ.

Viral Video: ಅಬ್ಬಬ್ಬಾ ಭಯವೇ ಇಲ್ವೇ ಈಕೆಗೆ? ಸರಸರನೆ ಹರಿಯುವ ವಿಷಪೂರಿತ ಸರ್ಪದೊಟ್ಟಿಗೆ ಯುವತಿಯ ಸೆಣೆಸಾಟ
ಸರಸರನೆ ಹರಿಯುವ ಸರ್ಪದೊಡನೆ ಆಟವಾಡುತ್ತಿದ್ದಾಳೆ ಇಲ್ಲೋರ್ವ ಯುವತಿ

ಹಾವು ಎದುರು ಬಂದರೆ ಆಮೇಲಿನ ಮಾತು, ಒಮ್ಮೆಲೆ ಹಾವು ಎಂಬ ಪದ ಕಿವಿಗೆ ಬಿದ್ರೂ ಸಾಕು ಭಯವಾಗುವುದು ಸಾಮಾನ್ಯ. ಅದರಲ್ಲಿಯೂ ಕಿಂಗ್​ಕೋಬ್ರಾದಂತಹ ದೈತ್ಯ ವಿಷಕಾರಿ ಹಾವು ಎದುರಿಗಿರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಇಲ್ಲೋರ್ವ ಯುವತಿ ಹಾವಿನ ಜತೆ ಆಟವಾಡುತ್ತಿದ್ದಾಳೆ. ಅಬ್ಬಬ್ಬಾ ಹಾವು ಭಯಂಕರವಾಗಿದೆ. ಆದರೂ ಯುವತಿ ಸರ್ಪದ ಸೆಣೆಸಾಟಕ್ಕೆ ಇಳಿದಿದ್ದಾಳೆ. ನಿಜವಾಗಿಯೂ ಒಮ್ಮೆಲೆ ಮೈ ಜುಂ.. ಎನ್ನುವ ದೃಶ್ಯವಿದು.

ಯುವತಿಯ ಹೆಸರು ಶ್ವೇತಾ. ಕಪ್ಪು ಬಣ್ಣದ ಟಾಪ್​ ಮತ್ತು ರಿಪ್ಡ್​ ಜೀನ್ಸ್​ ಧರಿಸಿ ನಿಂತಿರುವುದನ್ನು ವಿಡಿಯೋದನ್ನು ನೋಡಬಹುದು. ಸ್ವಲ್ಪವೂ ಹೆದರದಂತೆ ಸ್ಟಿಕ್​ ಸಹಾಯದಿಂದ ಸರ್ಪವನ್ನು ಹಿಡಿದು ಮೇಲಕ್ಕೆತ್ತಿದ್ದಾಳೆ. ಹಾವಿನ ಬಾಲವನ್ನು ಮತ್ತೊಂದು ಕೈಯಲ್ಲಿ ಹಿಡಿದಿದ್ದಾಳೆ. ದೈತ್ಯಾಕಾರ ಹಾವು ನೋಡುತ್ತಿದ್ದಂತೆಯೇ ಭಯವಾಗುತ್ತದೆ. ಆದರೂ ಸಹ ಈಕೆ ಧೈರ್ಯದಿಂದ ಹಾವು ಹಿಡಿಯುವ ಸಾಹಸಕ್ಕೆ ಮುಂದಾಗಿದ್ದಾಳೆ. ಇವಳ ಈ ಧೈರ್ಯವನ್ನು ನೋಡಿದ ನೆಟ್ಟಿಗರು ನಿಜಕ್ಕೂ ಆಶ್ಚರ್ಯಪಟ್ಟಿದ್ದಾರೆ.

ಶ್ವೇತಾಳ ಅಧಿಕೃತ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಅವಳ ಇನ್​ಸ್ಟಾಗ್ರಾಂ ಖಾತೆಯನ್ನು ನೋಡಿದರೆ ಅವಳು ಹಾವು ಹಿಡಿಯುವದರಲ್ಲಿ ಪರಿಣಿತಳು ಎಂಬುದು ತಿಳಿದು ಬರುತ್ತದೆ. ಸೋಶಿಯಲ್​ ಮಿಡಿಯಾದಲ್ಲಿ ಅವಳ ಪೋಸ್ಟ್​ಗಳನ್ನು ನೋಡಿ ಜನರು ಧಂಗಾಗಿದ್ದಾರೆ. ಕೆಲವರು ಹಾವು ಹಿಡದು ನಿಂತ ಪೋಸ್​ ನೋಡಿ ಅವಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಇನ್ನಿತರಿಗೆ ಎಚ್ಚರಿಕೆ ನೀಡಿದ್ದಾರೆ. ಹಾವು ಹಿಡುಯುವುದು ಒಂದು ಕಲೆ. ಸಾಮಾನ್ಯ ಜನರು ಇಂತಹ ಕೆಲಸಕ್ಕೆ ಮುಂದಾಗಬೇಡಿ. ಜೀವಕ್ಕೇ ಹಾನಿಯುಂಟಾಗಬಹುದು, ಎಚ್ಚರ! ಎಂದು ಹೇಳಿದ್ದಾರೆ.

ಇದನ್ನೂ ಓದಿ: 

Viral Video: ರಸ್ತೆ ಮಧ್ಯೆ ಹಾವು ಮುಂಗುಸಿ ನಡುವೆ ಭರ್ಜರಿ ಫೈಟ್​! ಈ ಸೆಣಸಾಟದಲ್ಲಿ ಗೆದ್ದಿದ್ಯಾರು?

Viral Video: ಬರಿಗೈಯಲ್ಲೇ ಹಾವು ಹಿಡಿದ ಯುವತಿ! ನೋಡಿ ಭಯಗೊಳ್ಳಬೇಡಿ, ನೀವೂ ಹೀಗೆಲ್ಲಾ ಮಾಡಬೇಡಿ