Viral Video: ರಸ್ತೆ ಮಧ್ಯೆ ಹಾವು ಮುಂಗುಸಿ ನಡುವೆ ಭರ್ಜರಿ ಫೈಟ್​! ಈ ಸೆಣಸಾಟದಲ್ಲಿ ಗೆದ್ದಿದ್ಯಾರು?

Viral Video: ರಸ್ತೆ ಮಧ್ಯೆ ಹಾವು ಮುಂಗುಸಿ ನಡುವೆ ಭರ್ಜರಿ ಫೈಟ್​! ಈ ಸೆಣಸಾಟದಲ್ಲಿ ಗೆದ್ದಿದ್ಯಾರು?
ರಸ್ತೆ ಮಧ್ಯೆ ಹಾವು ಮುಂಗುಸಿ ನಡುವೆ ಭರ್ಜರಿ ಫೈಟ್​!

ಹಾವು ಮತ್ತು ಮುಂಗುಸಿಯ ಭರ್ಜರಿ ಫೈಟ್​ ನಡೆಯುತ್ತಿರುವ ವೇಳೆ ಜನರು ಕೆಲ ಸಮಯ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ನಿಂತಿದ್ದಾರೆ. ರಸ್ತೆ ಮಧ್ಯೆದಲ್ಲೇ ಹಾವು ಮುಂಗುಸಿ ನಡುವೆ ಭರ್ಜರಿ ಫೈಟ್ ದೃಶ್ಯ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ.

TV9kannada Web Team

| Edited By: Apurva Kumar Balegere

Jun 07, 2021 | 4:44 PM

ಹಾವೇರಿ: ನಾಗರ ಹಾವು ಮತ್ತು ಮುಂಗಿಸಿ ಪರಸ್ಪರ ಸೆಣೆಸಾಡುತ್ತಿರುವ ಅಪರೂಪದ ದೃಶ್ಯ ಜಿಲ್ಲೆಯ ಕೂರಗುಂದ ರಸ್ತೆಯ ಮಧ್ಯದಲ್ಲಿ ನಡೆದಿದೆ. ಶಕ್ತಿ ಮೀರಿ ಮುಂಗುಸಿ, ಹಾವಿನೊಡನೆ ಸೆಣೆಸಾಡಿದೆ. ಪರಸ್ಪರ ಕಿತ್ತಾಡಿಕೊಳ್ಳುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. 

ಈ ಹಿಂದೆ ನಾಗರ ಹಾವೊಂದು ಮನೆಯೊಳಗೆ ಬಂದು ಮಗುವನ್ನು ಕಚ್ಚಲು ಹೊರಟಾಗ ಮನೆಯ ಕಾವಲಿಗಿದ್ದ ಮುಂಗುಸಿ ಸೆಣೆಸಾಡಿ ಮಗುವನ್ನು ರಕ್ಷಿಸಿದ ಕಥೆಯನ್ನು ಕೇಳಿಯೇ ಇರ್ತೀರಿ. ಮಗುವಿನ ತಾಯಿ ನೀರಿಗೆ ಹೋದಾಗ ನಾಗರ ಹಾವಿನ ವಿರುದ್ಧ ಹೋರಾಡಿ ಮುಂಗುಸಿ ಮಗುವನ್ನು ಕಾಪಾಡುತ್ತದೆ. ಅಂತಹುದೇ ಒಂದು ಘಟನೆಯನ್ನು ಜನರು ಪ್ರತ್ಯಕ್ಷವಾಗಿ ನೋಡಿ ಈಗ ಧಂಗಾಗಿದ್ದಾರೆ.

ಹಾವು ಮತ್ತು ಮುಂಗುಸಿಯ ಭರ್ಜರಿ ಫೈಟ್​ ನಡೆಯುತ್ತಿರುವ ವೇಳೆ ಜನರು ಕೆಲ ಸಮಯ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ನಿಂತಿದ್ದಾರೆ. ರಸ್ತೆ ಮಧ್ಯೆದಲ್ಲೇ ಹಾವು ಮುಂಗುಸಿ ನಡುವೆ ಭರ್ಜರಿ ಫೈಟ್ ದೃಶ್ಯ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ. ಸೆಣಸಾಟದಲ್ಲಿ ಹಾವನ್ನು ಸೋಲಿಸಿ ಪಕ್ಕದ ರೈತರ ಜಮೀನಿಗೆ ಮುಂಗುಸಿ ಎಳೆದುಕೊಂಡು ಹೋಗುತ್ತದೆ. ಮೊಬೈಲ್​ನಲ್ಲಿ ಸೆರೆಯಾದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: 

ಚಲಿಸುತ್ತಿರುವ ಬೈಕ್​ ಹ್ಯಾಂಡಲ್​ಗೆ ಸುತ್ತಿಕೊಂಡ ಹಸಿರು ಹಾವು; ಕಂಗಾಲಾಗಿ ಕಿರುಚಾಡಿದ ಮಹಿಳೆ! ಇಲ್ಲಿದೆ ವೈರಲ್ ವಿಡಿಯೋ

ಸೀರೆ ಉಟ್ಟಾಗ ಹಾವು ಹಿಡಿಯೋದು ಕಷ್ಟ -ಉರಗ ತಜ್ಞೆಯ ಸಾಹಸಕ್ಕೆ ಸ್ಥಳೀಯರು ಫುಲ್​ ಫಿದಾ!

Follow us on

Related Stories

Most Read Stories

Click on your DTH Provider to Add TV9 Kannada