ಚಲಿಸುತ್ತಿರುವ ಬೈಕ್​ ಹ್ಯಾಂಡಲ್​ಗೆ ಸುತ್ತಿಕೊಂಡ ಹಸಿರು ಹಾವು; ಕಂಗಾಲಾಗಿ ಕಿರುಚಾಡಿದ ಮಹಿಳೆ! ಇಲ್ಲಿದೆ ವೈರಲ್ ವಿಡಿಯೋ

ಬೈಕ್​ನಲ್ಲಿ ಚಲಿಸುತ್ತಿರುವ ಮಹಿಳೆಗೆ ಹ್ಯಾಂಡಲ್​ ಬಳಿ ಹಸಿರು ಹಾವು ಸುತ್ತಿ ಹಾಕಿರುವುದನ್ನು ಕಂಡಾಕ್ಷಣ ಏನಾಯಿತು? ಇಲ್ಲಿದೆ ನೋಡಿ ವೈರಲ್​ ವಿಡಿಯೋ.

ಚಲಿಸುತ್ತಿರುವ ಬೈಕ್​ ಹ್ಯಾಂಡಲ್​ಗೆ ಸುತ್ತಿಕೊಂಡ ಹಸಿರು ಹಾವು; ಕಂಗಾಲಾಗಿ ಕಿರುಚಾಡಿದ ಮಹಿಳೆ! ಇಲ್ಲಿದೆ ವೈರಲ್ ವಿಡಿಯೋ
ಬೈಕ್​ ಹ್ಯಾಂಡಲ್​ಗೆ ಸುತ್ತಿಕೊಂಡ ಹಸಿರು ಹಾವು
Follow us
shruti hegde
|

Updated on: May 11, 2021 | 3:39 PM

ಸರಸರನೆ ಹರಿದು ಹೋಗುವ ಹಾವಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​ ಆಗುತ್ತಿರುತ್ತದೆ. ಆದರೆ ಬೈಕ್​ನಲ್ಲಿ ಚಲಿಸುತ್ತಿರುವಾಗ ಒಮ್ಮೆಲೆ ಬೈಕ್​ ಹ್ಯಾಂಡಲ್​ಗೆ ಹಾವು ಸುತ್ತಿಕೊಂಡಿರುವುದು ಕಂಡು ಬಿಟ್ಟರೆ ಹೇಗಾಗಬಹುದು? ಒಮ್ಮೆಲೆ ಭಯ, ಅದರಲ್ಲಿಯೂ ವಾಹನ ಚಲಾಯಿಸುತ್ತಿರುವಾಗ ಹಾವು ಅಂದಾಕ್ಷಣ, ಹೆದರಿಕೆ ಹೆಚ್ಚಾಗಿ ಅಪಘಾತ ಉಂಟಾಗಬಹುದು. ಬೈಕ್​ನಲ್ಲಿ ಚಲಿಸುತ್ತಿರುವ ಮಹಿಳೆಗೆ ಹ್ಯಾಂಡಲ್​ ಬಳಿ ಹಸಿರು ಹಾವು ಸುತ್ತಿ ಹಾಕಿರುವುದನ್ನು ಕಂಡಾಕ್ಷಣ ಏನಾಯಿತು? ಇಲ್ಲಿದೆ ನೋಡಿ ವೈರಲ್​ ವಿಡಿಯೋ.

ರಾತ್ರಿ ಹೊತ್ತು ಮಹಿಳೆ ಬೈಕ್​ ಓಡಿಸಿಕೊಂಡು ರಸ್ತೆಯಲ್ಲಿ ಸಾಗುತ್ತಿರುತ್ತಾರೆ. ತನ್ನ ಜೊತೆ ಹಾವೂ ಬೈಕ್​ನಲ್ಲಿ ಸಾಗುತ್ತಿದೆ ಎಂಬುದು ಮಹಿಳೆಗೆ ತಿಳಿದಿರಲಿಲ್ಲ. ಒಮ್ಮೆಲೆ ಬೈಕ್​ ಹ್ಯಾಂಡಲ್​ಗೆ ಹಾವು ಸುತ್ತಿ ಹಾಕಿಕೊಂಡಿರುವುದನ್ನು ನೋಡಿದ ಮಹಿಳೆ ಜೋರಾಗಿ ಕಿರುಚುತ್ತಿದ್ದಾಳೆ. ವಿಡಿಯೋ ನೋಡಿದರೆ ನೀವೂ ಆಶ್ಚರ್ಯಗೊಳ್ಳುತ್ತೀರಿ. ಇಲ್ಲಿದೆ ವಿಡಿಯೋ ನೀವೂ ನೋಡಿ.

ಬೈಕ್​ ಸವಾರಿ ಮಾಡುತ್ತಿರುವ ಮಹಿಳೆ ಹಾವು ನೋಡಿದಾಕ್ಷಣ ಒಂದೇ ಕೈಯ್ಯಲ್ಲಿ ಬೈಕ್​ ಓಡಿಸುತ್ತಾಳೆ. ನಂತರ ಬೈಕ್​ಅನ್ನು ರಸ್ತೆಯ ಅಂಚಿನಲ್ಲಿ ನಿಲ್ಲಿಸಿ ವಿಡಿಯೋ ಮಾಡಲು ಪ್ರಾರಂಭಿಸುತ್ತಾಳೆ. ಈ ಘಟನೆ ಮೇ 3ರಂದು ಥೈಲ್ಯಾಂಡ್​ನ ಉಥೈ ಥಾನಿಯಲ್ಲಿ ನಡೆದಿದೆ. ಯೂಟ್ಯೂಬ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ‘ಹಾವು ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಲಾಗಿದೆ.

ರಸ್ತೆಯ ಪಕ್ಕಕ್ಕೆ ಬೈಕ್​ಅನ್ನು ನಿಲ್ಲಿಸಿದ ಬಳಿಕ ಹಾವು ಸುಮ್ಮನಾಗಿಬಿಡುತ್ತದೆ. ಬೈಕ್​ ಹ್ಯಾಂಡಲ್​ಅನ್ನು ಬಿಡಲು ಪ್ರಯತ್ನಿಸುತ್ತದೆ. ಮೇ 7ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು 1,200 ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ಹಾವು ಬೈಕ್​ನಲ್ಲಿ ಕುಳಿತಿರುವುದು ಇದೇ ಮೊದಲ ಬಾರಿ ಅಲ್ಲ. 2017ರಲ್ಲಿ ರಸ್ತೆಯಲ್ಲಿ ಸವಾರಿ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಓಡಿಸುತ್ತಿದ್ದ ಬೈಕ್​ಅನ್ನು ನಿಲ್ಲಿಸಲಾಯಿತು. ನೋಡಿದರೆ, 2 ಮೀಟರ್​ ಉದ್ದ ಹಾವು ನನ್ನ ಜೊತೆ ಬೈಕ್​ನಲ್ಲಿ ಸವಾರಿ ಮಾಡುತ್ತಿತ್ತು ಎಂದು ಅಭಿಪ್ರಾಯ ಹಂಚಿಕೊಳ್ಳಲಾಗಿದೆ.

ಥೈಲ್ಯಾಂಡ್​, 200ಕ್ಕೂ ಹೆಚ್ಚು ಹಾವುಗಳ ಜಾತಿಯನ್ನು ಹೊಂದಿರುವ ದೇಶವಾಗಿದೆ. ಜೊತೆಗೆ ಅತ್ಯಂತ ವಿಷಕಾರಿ ಹಾವುಗಳೂ ಇಲ್ಲಿ ಕಂಡುಬರುತ್ತವೆ. ಮನೆಗಳಲ್ಲಿ, ಊರುಗಳಲ್ಲಿ ಕಂಡು ಬಂದಿದ್ದ ಹಾವುಗಳನ್ನು ವನ್ಯಜೀವಿ ಇಲಾಖೆ ರಕ್ಷಿಸುವ ಕಾರ್ಯ ಮಾಡುತ್ತಿವೆ ಎಂದು ಹೇಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಾವು ಥೈಲ್ಯಾಂಡ್​ಗೆ ಹೋಗಿದ್ದ ಸಮಯದಲ್ಲಿ ಹಾವುಗಳನ್ನು ನೋಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ರೌಂಡ್ಸ್​ನಲ್ಲಿದ್ದಾಗ ಇನ್ಸ್​ಪೆಕ್ಟರ್​ ಜೀಪ್​ನಲ್ಲಿ ಹಾವು ಪ್ರತ್ಯಕ್ಷ್ಯ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್