ಕೃಷಿ ಸಚಿವರು ನಾಪತ್ತೆ; ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುತ್ತೇವೆ: ಲಾಕ್‌ಡೌನ್ ಸಂಕಷ್ಟದಲ್ಲಿರುವ ರೈತರ ಕೂಗು
Agriculture minister missing: ಕೃಷಿ ಸಚಿವರು ನಾಪತ್ತೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುತ್ತೇವೆ ಎಂದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಘೋಷಣೆ ಮಾಡಿದೆ. ಲಾಕ್‌ಡೌನ್ ಪರಿಣಾಮ ರೈತರಿಗೆ ಸಂಕಷ್ಟ ಎದುರಾಗಿದೆ. ಆದರೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಪತ್ತೆನೇ ಇಲ್ಲಾ. ದಯಮಾಡಿ ಹುಡುಕಿಕೊಟ್ಟು, ರೈತರಿಂದ ಸೂಕ್ತ ಬಹುಮಾನ ಪಡೆಯಿರಿ ಎಂದಿದ್ದಾರೆ.

ಮೈಸೂರು: ಕೃಷಿ ಸಚಿವರು ನಾಪತ್ತೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುತ್ತೇವೆ ಎಂದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಘೋಷಣೆ ಮಾಡಿದೆ. ಲಾಕ್‌ಡೌನ್ ಪರಿಣಾಮ ರೈತರಿಗೆ ಸಂಕಷ್ಟ ಎದುರಾಗಿದೆ. ಕೃಷಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಎಲ್ಲಾ ಕಡೆ ಬಂದು ಹೋದರು. ಆದರೆ ಈಗ ಕೃಷಿ ಸಚಿವ ಬಿ.ಸಿ. ಪಾಟೀಲ್ ಪತ್ತೆನೇ ಇಲ್ಲಾ. ದಯಮಾಡಿ ಹುಡುಕಿಕೊಟ್ಟು, ರೈತರಿಂದ ಸೂಕ್ತ ಬಹುಮಾನ ಪಡೆಯಿರಿ ಎಂದು ಮೈಸೂರಿನಲ್ಲಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಸರ್ಕಾರದಿಂದ ಎಲ್ಲಾ ರೀತಿಯಾದ ಪ್ಯಾಕೇಜ್ ಸಿಕ್ತಿದೆ. ಆದರೆ ರೈತರಿಗೆ ಯಾವುದೇ ಅನುಕೂಲವಿಲ್ಲ. ರಾಜ್ಯದ ಉತ್ತರ ಭಾಗದಲ್ಲಿ ಈಗ ಮುಂಗಾರು ಶುರುವಾಗಿದೆ. ನಮಗೆ ಏಪ್ರಿಲ್ ಕೊನೆಯಲ್ಲಿ ಮುಂಗಾರು ಆಗುತ್ತೆ. ಮೈಸೂರು ಜಿಲ್ಲೆಯಲ್ಲಿ 2.27 ಲಕ್ಷ ಎಕರೆಯಷ್ಟು ಹತ್ತಿ ಬೆಳೆಯುತ್ತಿದ್ದೆವು. ಮುಸುಕಿನ ಜೋಳ ಬೆಳೆಯುತಿದ್ದೆವು. ಇದೆಲ್ಲವೂ ಕಡಿಮೆಯಾಗಿದೆ. ನಮಗೆ ಬಿತ್ತನೆ ಬೀಜ, ಗೊಬ್ಬರದ, ಕೀಟನಾಶಕಗಳ ಕೊರತೆ ಹೆಚ್ಚಾಗಿದೆ ಎಂದು ಕೃಷಿ ಸಚಿವರ ಗಮನ ಸೆಳೆಯಲು ಯತ್ನಿಸಿದರು.
ರಾಜ್ಯದ 12 ಜಿಲ್ಲೆಯಲ್ಲಿ ಲಕ್ಷಾಂತರ ಎಕೆರೆಯಲ್ಲಿ ಮುಸುಕಿನ ಜೋಳ ಬೆಳೆಯುತ್ತವೆ. ಆದರೆ ಈಗ ಬಿತ್ತನೆ ಬೀಜದ ಕೊರತೆಯಾಗಿದೆ. ಕಳಪೆ ಬಿತ್ತನೆ ಬೀಜದಿಂದ ಬೆಳೆ ಸರಿಯಾಗಿ ಬಂದಿಲ್ಲ. ಲಾಕ್‌ಡೌನ್ ಕಾರಣದಿಂದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳು ಬಂದಿಲ್ಲ ಅಂತಾರೆ. ಸರ್ಕಾರ ರೈತರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈಗಾಗಲೇ ರಸಗೊಬ್ಬರದ ಬೆಲೆ ಹೆಚ್ಚಾಗಿದೆ. ಕೆಲವು ಭಾಗದಲ್ಲಿ ಹಳೆ ದಾಸ್ತಾನು ಇದ್ದರೂ ಹೊಸ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಮಸ್ತ ರೈತರ ಪರ ಅವರು ಅಳಲು ತೋಡಿಕೊಂಡರು.
(Agriculture minister bc patil is missing says mysuru farmers union chief b nagendra)
8 ಕೋಟಿ ಆಸ್ತಿ ಹೊಂದಿದ್ದು, 2 ಕೋಟಿ ಸಾಲ ಮಾಡಿದ್ದಾರಂತೆ ಬಿಸಿ ಪಾಟೀಲ್
Published On - 3:12 pm, Mon, 7 June 21