AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ವಿವಿಯಿಂದ ಕೊವಿಡ್ ರ‍್ಯಾಪಿಡ್‌ ಡಿಟೆಕ್ಷನ್ ಕಿಟ್ ವಿನ್ಯಾಸ; ಲಸಿಕೆ ಅಭಿವೃದ್ಧಿಪಡಿಸಲು ಅನುದಾನದ ಕೊರತೆ

Covid Rapid Detection Kit by Mysore University: ಹಣ ನೀಡಿದರೆ ಕೊವಿಡ್ ಲಸಿಕೆ ಅಭಿವೃದ್ಧಿಪಡಿಸಲು ನಾವು ಸಿದ್ಧರಿದ್ದೇವೆ. ಸಂಶೋಧನೆಗೆ ಅಗತ್ಯವಾದ ಇತರ ಎಲ್ಲ ಸಲಕರಣೆಗಳೂ ನಮ್ಮಲ್ಲಿವೆ. ಸದ್ಯ ಕೊವಿಡ್ ಲಸಿಕೆ ಅಭಿವೃದ್ಧಿಗೆ ಅಗತ್ಯವಾದ ಅನುದಾನದ ಕೊರತೆ ಇದ್ದು, ಅನುದಾನ ದೊರೆತಲ್ಲಿ ಲಸಿಕೆ ಅಭಿವೃದ್ಧಿಗೂ ಪ್ರಯೋಗ ನಡೆಸುತ್ತೇವೆ ಎಂದು ಮೈಸೂರಿನಲ್ಲಿ ಹಿರಿಯ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ.

ಮೈಸೂರು ವಿವಿಯಿಂದ ಕೊವಿಡ್ ರ‍್ಯಾಪಿಡ್‌ ಡಿಟೆಕ್ಷನ್ ಕಿಟ್ ವಿನ್ಯಾಸ; ಲಸಿಕೆ ಅಭಿವೃದ್ಧಿಪಡಿಸಲು ಅನುದಾನದ ಕೊರತೆ
ಪ್ರಾತಿನಿಧಿಕ ಚಿತ್ರ
TV9 Web
| Updated By: guruganesh bhat|

Updated on:Jun 07, 2021 | 3:09 PM

Share

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಕೊವಿಡ್ ರ‍್ಯಾಪಿಡ್‌ ಡಿಟೆಕ್ಷನ್ ಕಿಟ್ ವಿನ್ಯಾಸಗೊಳಿಸಿದ್ದು, ಕೊವಿಡ್ ಪತ್ತೆ ಹಚ್ಚುವಲ್ಲಿ ಶೇಕಡಾ 90ರಷ್ಟು ನಿಖರತೆ ಹೊಂದಿದೆ ಎಂದು ಮೈಸೂರಿನಲ್ಲಿ ಹಿರಿಯ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ. ಅಂದಹಾಗೆ ಸದ್ಯ ಕೊವಿಡ್ ರ‍್ಯಾಪಿಡ್‌ ಡಿಟೆಕ್ಷನ್ ಕಿಟ್​ನ್ನು ₹ 100ಕ್ಕೆ ದೊರೆಯುವಂತೆ ಮಾಡಲು ಶ್ರಮಿಸುತ್ತಿರುವಾಗಿ ಅವರು ತಿಳಿಸಿದ್ದಾರೆ.

ಸಂಶೋಧನೆ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುದಾನ ನೀಡುವುದಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದರೆ ಲಸಿಕೆ ಸಂಶೋಧನೆ ನಡೆಸಬಹುದು. ರ‍್ಯಾಪಿಡ್‌ ಡಿಟೆಕ್ಷನ್ ಕಿಟ್‌ಗೆ ಮೈಸೂರು ವಿವಿ ಹಣ ನೀಡಿದೆ. ಸರ್ಕಾರ ವಿಶ್ವವಿದ್ಯಾಲಯಗಳಿಗೆ ಸಂಶೋಧನೆಗಳಿಗೆ ಎಂದು ಇಂತಿಷ್ಟು ಹಣ ನಿಗದಿ ಮಾಡಬೇಕು. ಅನುದಾನ ಇಲ್ಲದೆಯೇ ಸಂಶೋಧನೆ ನಡೆಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಹಣ ನೀಡಿದರೆ ಕೊವಿಡ್ ಲಸಿಕೆ ಅಭಿವೃದ್ಧಿಪಡಿಸಲು ನಾವು ಸಿದ್ಧರಿದ್ದೇವೆ. ಸಂಶೋಧನೆಗೆ ಅಗತ್ಯವಾದ ಇತರ ಎಲ್ಲ ಸಲಕರಣೆಗಳೂ ನಮ್ಮಲ್ಲಿವೆ. ಸದ್ಯ ಕೊವಿಡ್ ಲಸಿಕೆ ಅಭಿವೃದ್ಧಿಗೆ ಅಗತ್ಯವಾದ ಅನುದಾನದ ಕೊರತೆ ಇದ್ದು, ಅನುದಾನ ದೊರೆತಲ್ಲಿ ಲಸಿಕೆ ಅಭಿವೃದ್ಧಿಗೂ ಪ್ರಯೋಗ ನಡೆಸುತ್ತೇವೆ ಎಂದು ಮೈಸೂರಿನಲ್ಲಿ ಹಿರಿಯ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ.

ಜನಸ್ನೇಹಿ ಆಡಳಿತ ನೀಡುವುದು ನನ್ನ ಉದ್ದೇಶ: ಮೈಸೂರು ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಬಗಾದಿ ಗೌತಮ್ ಅಧಿಕಾರ ಸ್ವೀಕರಿಸಿದರು. ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗೈರಾದ ಕಾರಣ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್​ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ದೊಡ್ಡ ಸವಾಲಾಗಿದೆ. ಜಿಲ್ಲಾಧಿಕಾರಿಯಾಗಿ ನನ್ನ ಕೆಲಸವನ್ನು ನಾನು ಮಾಡಿಕೊಂಡು ಹೋಗುತ್ತೇನೆ. ನನ್ನ ಜೀವನದಲ್ಲಿ ಎಂದೂ ವಿವಾದಕ್ಕೆ ಒಳಗಾಗಿಲ್ಲ. ಜನಸ್ನೇಹಿ ಆಡಳಿತ ನೀಡುವುದು ನನ್ನ ಉದ್ದೇಶ. ನಾನು ಲೋ ಫ್ರೋಫೈಲ್ ಅಧಿಕಾರಿ. ನನ್ನ 13 ವರ್ಷದ ಸರ್ವಿಸ್‌ನಲ್ಲಿ ಬಹುತೇಕರು ನನ್ನ ಹೆಸರು ಸಹ ಕೇಳಿಲ್ಲ. ನಾನು ಕೆಲಸ ಮಾಡಲು ಬಂದಿದ್ದೇನೆ. ವಿವಾದಿತ ಸ್ಥಳಕ್ಕೆ ಬಂದೆ ಅಂತ ಅನ್ನಿಸಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಎಲ್ಲರೂ ಒಳ್ಳೆಯವರಾಗುತ್ತಾರೆ. ನಾನು ಮೈಸೂರಿನ ಜನ ಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು ಸಾರ್ವಜನಿಕರ ಸಲಹೆಗಳನ್ನ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದು ಹುರುಪಿನಿಂದ ಉತ್ತರಿಸಿದರು.

ನಿಮಗೆ ಈ ವರ್ಗಾವಣೆ ಅನಿರೀಕ್ಷಿತವಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ಈ ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಕೊವಿಡ್ ನಿರ್ವಹಣೆ ಜವಾಬ್ದಾರಿ ಇರುವ ಕಾರಣ ಜಿಲ್ಲಾಧಿಕಾರಿ ಕೆಲಸವು ಸವಾಲಾಗಿಯೇ ಇರುತ್ತದೆ. ಆದರೂ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಒಳ್ಳೆ ಕೆಲಸ ಮಾಡಿದರೆ ಎಲ್ಲರೂ ಮುಂದೆ ಬಂದು ಸಹಕಾರ ಕೊಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.

ಪತ್ನಿ ಮಂಡ್ಯದಲ್ಲಿ ಡಿಸಿಯಾಗಿರುವ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಪತ್ನಿ ಮನೆ ಮೊದಲೂ ಸಹ ಹತ್ತಿರವೇ ಇತ್ತು. ಬೆಂಗಳೂರಿನಿಂದ ಮಂಡ್ಯ ದೂರವೇನಲ್ಲ. ಈಗ ಇನ್ನಷ್ಟು ಹತ್ತಿರಕ್ಕೆ ಬಂದಿದ್ದೇವೆ ಎಂದು ನಗುತ್ತಲೇ ಮೈಸೂರಿಗೆ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೈಸೂರು ಜಿಲ್ಲೆ ನನಗೆ ತಾಯಿ ಮನೆಯ ಪ್ರೀತಿ ಕೊಟ್ಟಿದೆ; ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ

Rohini Sindhuri: ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರ, ಸಂಪೂರ್ಣ ವಿವರಣೆ ನೀಡಿದ ರೋಹಿಣಿ ಸಿಂಧೂರಿ

(Covid Rapid Detection Kit Design by Mysore University Lack of grants to develop the vaccine says Dr Rangappa)

Published On - 3:06 pm, Mon, 7 June 21

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ