Rohini Sindhuri: ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರ, ಸಂಪೂರ್ಣ ವಿವರಣೆ ನೀಡಿದ ರೋಹಿಣಿ ಸಿಂಧೂರಿ

Rohini Sindhuri: ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರ, ಸಂಪೂರ್ಣ ವಿವರಣೆ ನೀಡಿದ ರೋಹಿಣಿ ಸಿಂಧೂರಿ
ಈಜುಕೊಳ ನಿರ್ಮಾಣದಲ್ಲಿ ಅಕ್ರಮ ಎಸಗಿಲ್ಲ ಎಂದ ಸಿಂಧೂರಿ; ಒಂದೇ ದಿನದಲ್ಲಿ 2 ವರದಿ ಮಂಡಿಸಿದ ಪ್ರಾದೇಶಿಕ ಆಯುಕ್ತ? ಈಜುಕೊಳದ ಒಳಸುಳಿ ಏನು?

Swimming pool construction at Mysuru DC residence: ಮೈಸೂರು ಡಿಸಿ ನಿವಾಸದಲ್ಲಿ ನಿರ್ಮಾಣವಾಗಿದ್ದ ಈಜುಕೊಳದ ವಿಚಾರವಾಗಿ ಈಜುಕೊಳವನ್ನು ಕಾನೂನುಬಾಹಿರವಾಗಿ ನಿರ್ಮಾಣ ಮಾಡಿಲ್ಲ ಎಂದು ಪ್ರಾದೇಶಿಕ ಆಯುಕ್ತ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್​ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ರೋಹಿಣಿ ಸಿಂಧೂರಿ ಸಂಪೂರ್ಣ ವಿವರಣೆ ನೀಡಿದ್ದಾರೆ.

sadhu srinath

|

Jun 07, 2021 | 10:12 AM

ಮೈಸೂರು: ತಾವು ಜಿಲ್ಲಾಧಿಕಾರಿಯಾಗಿದ್ದಾಗ ಮೈಸೂರು ಡಿಸಿ ನಿವಾಸದಲ್ಲಿ ನಿರ್ಮಾಣವಾಗಿದ್ದ ಈಜುಕೊಳದ ವಿಚಾರವಾಗಿ ಈಜುಕೊಳವನ್ನು ಕಾನೂನುಬಾಹಿರವಾಗಿ ನಿರ್ಮಾಣ ಮಾಡಿಲ್ಲ ಎಂದು ಪ್ರಾದೇಶಿಕ ಆಯುಕ್ತ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್​ ಅವರಿಗೆ ( Regional Commissioner of Mysuru G.C. Prakash) ಸಲ್ಲಿಸಿರುವ ವರದಿಯಲ್ಲಿ ರೋಹಿಣಿ ಸಿಂಧೂರಿ ಸಂಪೂರ್ಣ ವಿವರಣೆ ನೀಡಿದ್ದಾರೆ. ಈಜುಕೊಳ ನಿರ್ಮಾಣವು 5 ವರ್ಷಗಳ ಹಿಂದಿನ ಯೋಜನೆಯಾಗಿದೆ. ಇದರ ನಿರ್ಮಾಣ ವೆಚ್ಚ ಎಲ್ಲವೂ ನಿರ್ಮಿತಿ ಕೇಂದ್ರದ್ದಾಗಿದೆ. ಈ ಈಜುಕೊಳ ನಿರ್ಮಾಣಕ್ಕೆ 27.72 ಲಕ್ಷ ರೂಪಾಯಿ ವೆಚ್ಚವಾಗಿದೆ. ನಿರ್ಮಿತಿ ಕೇಂದ್ರ ವಾರ್ಷಿಕ ಸಭೆಯಲ್ಲಿ ಅನುಮೋದನೆ ಪಡೆದೇ ನಿರ್ಮಾಣ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲೆಯಾದ್ಯಂತ ಉತ್ತಮ ಗುಣಮಟ್ಟದ ಈಜುಕೊಳಗಳ ನಿರ್ಮಾಣ ಮಾಡುವ ಉದ್ದೇಶ ಆ ಯೋಜನೆಯದ್ದಾಗಿತ್ತು. ಅದರಂತೆ ಪ್ರಾಯೋಗಿಕವಾಗಿ ಜಿಲ್ಲಾಧಿಕಾರಿ ನಿವಾಸದಲ್ಲಿ ನಿರ್ಮಾಣ ಮಾಡಲಾಗಿದೆ. ಜಿಲ್ಲಾಧಿಕಾರಿ ನಿವಾಸವು (deputy commissioner) 5.15 ಎಕರೆ ಪ್ರದೇಶದಲ್ಲಿದೆ. ಅದರಲ್ಲಿ ಸಣ್ಣ ಭಾಗದಲ್ಲಿ ಈಜುಕೊಳ ನಿರ್ಮಾಣ (swimming pool) ಮಾಡಲಾಗಿದೆ ಎಂದು ರೋಹಿಣಿ ಸಿಂಧೂರಿ ವಿವರಿಸಿದ್ದಾರೆ.

ಇನ್ನು, ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಆರೋಪದ ಬಗ್ಗೆಯೂ ವಿವರಣೆ ನೀಡಿರುವ ಅವರು ಈಗಾಗಲೇ ಹಲವಾರು ಪಾರಂಪರಿಕ ಕಟ್ಟಡಗಳ ಪಕ್ಕದಲ್ಲಿ ಕಟ್ಟಡ‌ಗಳ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದು, ನಿರ್ಮಾಣವಾಗಿರುವ ಕಟ್ಟಡಗಳ ಅಷ್ಟೂ ಮಾಹಿತಿಯನ್ನು ನೀಡಿದ್ದಾರೆ ರೋಹಿಣಿ ಸಿಂಧೂರಿ (rohini sindhuri). ಚುನಾವಣಾ ಶಾಖೆ‌, ವಸಂತ ಮಹಲ್, ಪ್ರಾದೇಶಿಕ ಆಯುಕ್ತರ ಕಚೇರಿ, ಜಲದರ್ಶಿನಿ ಆವರಣ ಸೇರಿ ಹಲವು ಕಡೆ ಕಟ್ಟಡಗಳ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಈಜುಕೊಳ ಕಾನೂನುಬಾಹಿರ ಅಲ್ಲ ಎಂದು ತಮ್ಮ ವರದಿಯಲ್ಲಿ ರೋಹಿಣಿ ಸಿಂಧೂರಿ ವಿವರಿಸಿದ್ದಾರೆ.

ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್​ ಕಟ್ಟಿಸಿರಲಿಲ್ಲ. ಹೀಗಿರುವಾಗ ಈ ಸಮಯದಲ್ಲಿ ಸರ್ಕಾರಿ ಸ್ಥಳದಲ್ಲಿ ಈಜುಕೊಳ ಬೇಕಿತ್ತಾ? ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಎ.ಮಂಜು ಕಳೆದ ವಾರ ವಾಗ್ದಾಳಿ ನಡೆಸಿದ್ದರು.

ಸರ್ಕಾರಿ ಅಧಿಕಾರಿಗಳು ಒಂದೇ ಕಡೆ ಇರುತ್ತಾರಾ? ಬೇರೆಡೆ ವರ್ಗಾವಣೆ ಆಗಿ ಹೋಗ್ತಾರೆ ಇದು ಗುತ್ತಿಗೆದಾರನಿಗಾಗಿ ಮಾಡಿರುವ ಕೆಲಸವಷ್ಟೇ? ಇವತ್ತು ದನ ಕಾಯುವವರೂ ಐಎಎಸ್ ಮಾಡುತ್ತಾರೆ. ನಂತರ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ದನ ಕಾಯೋರು, ಅಡ್ಜೆಸ್ಟ್​ಮೆಂಟ್ ಮಾಡಿಕೊಳ್ಳುವವರು ಸಹ ಐಎಎಸ್ ಪಾಸ್ ಮಾಡುತ್ತಾರೆ. ಆದರೆ ಜನಸೇವೆ ಹೇಗೆ ಮಾಡುತ್ತೇವೆ ಅನ್ನುವುದು ಮುಖ್ಯ ಎಂದು ಮಾಜಿ ಸಚಿವ ಎ ಮಂಜು ಆಕ್ರೋಶ ವ್ಯಕ್ತಪಡಿಸಿದ್ದರು.

(mysuru former deputy commissioner rohini sindhuri submits report divisional commissioner on swimming pool construction at dc office)

ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ; ಅವರ ವರ್ಗಾವಣೆಗೆ ಪಿತೂರಿ ನಡೀತಿದೆ: ವಾಟಾಳ್ ನಾಗರಾಜ್ ಆಕ್ರೋಶ

Follow us on

Related Stories

Most Read Stories

Click on your DTH Provider to Add TV9 Kannada