AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಕ್ಸಿನ್ ಅಭಾವ; ಕೋವ್ಯಾಕ್ಸಿನ್ ಲಸಿಕೆ ಪಡೆಯಲು 30-35 ಕಿ.ಮೀ ದೂರದಿಂದ ಬರುತ್ತಿರುವ ಜನ

ಕಂಪನಿಯಲ್ಲಿ ವ್ಯಾಕ್ಸಿನ್ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿ ಬೆಳಗ್ಗೆ 3:30 ಗಂಟೆಗೆ ಆಗಮಿಸಿ ಕ್ಯೂನಲ್ಲಿ ನಿಂತಿದ್ದಾರೆ. ಸದ್ಯ ಯಲಹಂಕ ವ್ಯಾಕ್ಸಿನ್ ಸೆಂಟರ್ ಬಳಿ 50ಕ್ಕೂ ಹೆಚ್ಚು ಜನರ ಕ್ಯೂನಲ್ಲಿ ನಿಂತು ಲಸಿಕೆ ಪಡೆಯಲು ಕಾಯುತ್ತಿದ್ದಾರೆ. ಬೆಳಗ್ಗೆ 8 ಗಂಟೆಯ ನಂತರ ಟೋಕನ್ ಕೊಡ್ತಾರೆ ಎಂದು ಸಿಬ್ಬಂದಿ ತಿಳಿಸಿದ್ದು ಬೆಳಗ್ಗೆ 3 ಗಂಟೆಗೇ ಬಂದು ಕಾಯ್ತಿದ್ದೀನಿ. ನಿನ್ನೆಯೂ ಬಂದು ವಾಪಾಸ್ ಹೋಗಿದ್ದೆ. ಹೀಗಾಗಿ ಇವತ್ತು ನಾನೇ ಮೊದಲು ಕ್ಯೂನಲ್ಲಿ ನಿಂತಿದ್ದೇನೆ. ವ್ಯಾಕ್ಸಿನ್ ಸಿಗುವ ಭರವಸೆ ಇದೆ ಎಂದು ವ್ಯಕ್ತಿ ತಿಳಿಸಿದ್ದಾರೆ.

ವ್ಯಾಕ್ಸಿನ್ ಅಭಾವ; ಕೋವ್ಯಾಕ್ಸಿನ್ ಲಸಿಕೆ ಪಡೆಯಲು 30-35 ಕಿ.ಮೀ ದೂರದಿಂದ ಬರುತ್ತಿರುವ ಜನ
ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನ
TV9 Web
| Edited By: |

Updated on:Jun 07, 2021 | 10:23 AM

Share

ಬೆಂಗಳೂರು: ಮಹಾಮಾರಿಯಿಂದ ಬಚಾವ್ ಆಗಬೇಕು ಮೂರನೇ ಅಲೆ ಬಂದ್ರೆ ಕಷ್ಟ ಅಂತ ಜನ ವ್ಯಾಕ್ಸಿನ್ ಮೊರೆ ಹೋಗುತ್ತಿದ್ದಾರೆ. ಆದರೆ ರಾಜ್ಯದಲ್ಲಿ ವ್ಯಾಕ್ಸಿನ್ ಅಭಾವ ಹೆಚ್ಚಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇಲ್ಲೊಬ್ಬ ವ್ಯಕ್ತಿ ಲಸಿಕೆ ಪಡೆಯಲು 30 ಕಿ.ಮೀ ದೂರದಿಂದ ಲಸಿಕಾ ಕೇಂದ್ರಕ್ಕೆ ಬಂದಿರುವ ಘಟನೆ ನಡೆದಿದೆ.

ದೇವಹಳ್ಳಿ ಸಮೀಪದ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಕಳೆದ ಒಂದು ತಿಂಗಳಿಂದ ಕೋವ್ಯಾಕ್ಸಿನ್ ಲಸಿಕೆಯೇ ಬೇಕು ಅಂತ ಹುಡುಕಾಟ ನಡೆಸುತ್ತಿದ್ದಾನೆ. ಐದಾರು ವ್ಯಾಕ್ಸಿನ್ ಸೆಂಟರ್ಗೆ ಹೋದ್ರೂ ಅಲ್ಲೆಲ್ಲೂ ಲಸಿಕೆ ಸಿಕಿಲ್ಲ. ದೇವನಹಳ್ಳಿ, ಕೆ.ಆರ್‌ ಪುರ ಸೇರಿದಂತೆ ಅನೇಕ ವ್ಯಾಕ್ಸಿನ್ ಸೆಂಟರ್ಗಳಿಗೆ ಅಲೆದಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಸೆಕೆಂಡ್ ಡೋಸ್ನವರಿಗೆ ಮಾತ್ರ ಲಸಿಕೆ ಎಂದು ಹೇಳಿ ಕಳಿಸಿದ್ದಾರೆ. ಹೀಗಾಗಿ ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆಯಲು 30 ಕಿ.ಮೀ ದೂರದಿಂದ ಈ ವ್ಯಕ್ತಿ ಆಗಮಿಸಿದ್ದಾರೆ.

ಕಂಪನಿಯಲ್ಲಿ ವ್ಯಾಕ್ಸಿನ್ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿ ಬೆಳಗ್ಗೆ 3:30 ಗಂಟೆಗೆ ಆಗಮಿಸಿ ಕ್ಯೂನಲ್ಲಿ ನಿಂತಿದ್ದಾರೆ. ಸದ್ಯ ಯಲಹಂಕ ವ್ಯಾಕ್ಸಿನ್ ಸೆಂಟರ್ ಬಳಿ 50ಕ್ಕೂ ಹೆಚ್ಚು ಜನರ ಕ್ಯೂನಲ್ಲಿ ನಿಂತು ಲಸಿಕೆ ಪಡೆಯಲು ಕಾಯುತ್ತಿದ್ದಾರೆ. ಬೆಳಗ್ಗೆ 8 ಗಂಟೆಯ ನಂತರ ಟೋಕನ್ ಕೊಡ್ತಾರೆ ಎಂದು ಸಿಬ್ಬಂದಿ ತಿಳಿಸಿದ್ದು ಬೆಳಗ್ಗೆ 3 ಗಂಟೆಗೇ ಬಂದು ಕಾಯ್ತಿದ್ದೀನಿ. ನಿನ್ನೆಯೂ ಬಂದು ವಾಪಾಸ್ ಹೋಗಿದ್ದೆ. ಹೀಗಾಗಿ ಇವತ್ತು ನಾನೇ ಮೊದಲು ಕ್ಯೂನಲ್ಲಿ ನಿಂತಿದ್ದೇನೆ. ವ್ಯಾಕ್ಸಿನ್ ಸಿಗುವ ಭರವಸೆ ಇದೆ ಎಂದು ವ್ಯಕ್ತಿ ತಿಳಿಸಿದ್ದಾರೆ.

ಇನ್ನು ಇದೇ ರೀತಿ ಯುವತಿಯೊಬ್ಬರು 35 ಕಿ.ಮೀ ದೂರದಿಂದ ಬಂದು ವ್ಯಾಕ್ಸಿನ್ಗಾಗಿ ಕಾಯುತ್ತಿದ್ದಾರೆ. ಕಾರ್ ಬುಕ್ ಮಾಡ್ಕೊಂಡು ವೈಟ್ ಫೀಲ್ಡ್ ನಿಂದ ಬೆಳಗ್ಗೆ 3:50ಕ್ಕೆ ಲಸಿಕಾ ಕೇಂದ್ರಕ್ಕೆ ಬಂದಿದ್ದಾರೆ. ನಮ್ಮ ಏರಿಯಾಗಳಲ್ಲಿ ಎರಡನೇ ಡೋಸ್ ನವರಿಗೆ ಮಾತ್ರ ಲಸಿಕೆ ಕೊಡ್ತಿದ್ದಾರೆ. ಇಲ್ಲಿ ಬೇಗ ಬಂದ್ರೆ ವ್ಯಾಕ್ಸಿನ್ ಸಿಗುತ್ತೆ ಅಂತ ಬಂದಿದ್ದೇನೆ. ವೈಟ್ ಫೀಲ್ಡ್ನ ರಿಲಾಯನ್ಸ್ ಕಂಪನಿಯಲ್ಲಿ ವ್ಯಾಕ್ಸಿನ್ ಕಡ್ಡಾಯ ಮಾಡಿದ್ದಾರೆ. ಹೀಗಾಗಿ 4 ಸಹೋದ್ಯೋಗಿಗಳೊಂದಿಗೆ ಯಲಹಂಕಗೆ ಆಗಮಿಸಿದ್ದೇನೆ ಎಂದು ಯುವತಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯುತ್ತಿದೆ ವ್ಯಾಕ್ಸಿನ್ ಮಾಫಿಯಾ.. ಸರ್ಕಾರಕ್ಕೆ ಅಭಾವ, ಖಾಸಗಿ ಆಸ್ಪತ್ರೆಗಳಿಗೆ ಭಾರಿ ಲಾಭ

Published On - 9:59 am, Mon, 7 June 21

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ