ಬೆಂಗಳೂರಿನಲ್ಲಿ ನಡೆಯುತ್ತಿದೆ ವ್ಯಾಕ್ಸಿನ್ ಮಾಫಿಯಾ.. ಸರ್ಕಾರಕ್ಕೆ ಅಭಾವ, ಖಾಸಗಿ ಆಸ್ಪತ್ರೆಗಳಿಗೆ ಭಾರಿ ಲಾಭ

ಬೆಂಗಳೂರಿನಲ್ಲಿ ನಡೆಯುತ್ತಿದೆ ವ್ಯಾಕ್ಸಿನ್ ಮಾಫಿಯಾ.. ಸರ್ಕಾರಕ್ಕೆ ಅಭಾವ, ಖಾಸಗಿ ಆಸ್ಪತ್ರೆಗಳಿಗೆ ಭಾರಿ ಲಾಭ
ಕೊರೊನಾ ವ್ಯಾಕ್ಸಿನ್

ಲಸಿಕೆ ತಯಾರಿಕಾ ಕಂಪನಿಗಳಿಂದ ಐದು ಪ್ರತಿಷ್ಠಿತ ಆಸ್ಪತ್ರೆಗಳು ಲಸಿಕೆ ಖರೀದಿ ಮಾಡ್ತಿವೆ. ಕಂಪನಿಗಳು ಸರ್ಕಾರಕ್ಕೆ ಲಸಿಕೆ ಕಡಿಮೆ ಕೊಟ್ಟು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಲಸಿಕೆ ಸರಬರಾಜು ಮಾಡುತ್ತಿವೆ. ಲಸಿಕೆ ಪಡೆದ ಖಾಸಗಿ ಆಸ್ಪತ್ರೆಗಳು ಇದರಿಂದ ಹಣ ಮಾಡಿಕೊಳ್ಳುತ್ತಿವೆ. ಅಪಾರ್ಟ್ಮೆಂಟ್, ಐಟಿ ಬಿಟಿ ಕಂಪನಿ, ಗಾರ್ಮೆಂಟ್ಸ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ‌ ಜೊತೆ ಒಪ್ಪಂದ ಮಾಡಿಕೊಂಡು ಆಸ್ಪತ್ರೆಗಳು ಲಸಿಕೆ ನೀಡಿ ಹಣ ಪಡೆಯುತ್ತಿವೆ.

TV9kannada Web Team

| Edited By: Ayesha Banu

Jun 07, 2021 | 8:30 AM

ಬೆಂಗಳೂರು: ಕೊರೊನಾದ 2ನೇ ಅಲೆಯ ಪ್ರಭಾವಕ್ಕೆ ತತ್ತರಿಸಿದ ಜನ ವ್ಯಾಕ್ಸಿನ್ ಮೊರೆ ಹೋಗಿದ್ದಾರೆ. ಕೊರೊನಾ ಲಸಿಕೆ ಪಡೆಯಲು ವ್ಯಾಕ್ಸಿನ್ ಸೆಂಟರ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಅದೆಷ್ಟೋ ಮಂದಿ 30-40 ಕಿ.ಮೀ ದೂರದಿಂದ ಬೆಳ್ಳಂಬೆಳಗ್ಗೆಯೇ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರಿಗೆ ಎಷ್ಟೇ ಸುತ್ತಾಡಿದ್ರೂ ಲಸಿಕೆ ಸಿಗುವುದೇ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಕೊರೊನಾ ವ್ಯಾಕ್ಸಿನ್ನಲ್ಲಿ ಭಾರೀ ಮಾಫಿಯಾ ನಡೆದಿದೆ.

ಖಾಸಗಿ ಆಸ್ಪತ್ರೆಗಳಿಂದ ವ್ಯಾಕ್ಸಿನ್ ಮಾಫಿಯಾ ಶುರುವಾಗಿದೆ. ಸರ್ಕಾರದಿಂದ ಉಚಿತವಾಗಿ ವ್ಯಾಕ್ಸಿನ್ ಹಂಚಿಕೆ ಮಾಡಲಾಗುತ್ತಿದೆ. ಆದ್ರೆ ಹಂಚಿಕೆ‌ ಮಾಡಲು ವ್ಯಾಕ್ಸಿನೇ ಬರ್ತಿಲ್ಲ. ಕಳೆದ ಒಂದು ವಾರದಲ್ಲಿ ಬಿಬಿಎಂಪಿಗೆ ಸಿಕ್ಕಿದ್ದು ಕೇವಲ 85 ಸಾವಿರ ಡೋಸ್ ವ್ಯಾಕ್ಸಿನ್. ಈ ಪೈಕಿ 18-45 ವರ್ಷದ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರ ಖರೀದಿ ಮಾಡುತ್ತಿದ್ದು ಕಳೆದ ವಾರ ಕೇವಲ 45 ಸಾವಿರ ಡೋಸ್ ವ್ಯಾಕ್ಸಿನ್ ಬಂದಿದೆ. ಕೇಂದ್ರ ಸರ್ಕಾರ 45 ವರ್ಷದ ಮೇಲ್ಪಟ್ಟವರಿಗೆ ನೀಡುವ ವ್ಯಾಕ್ಸಿನ್40 ಸಾವಿರ ಡೋಸ್ ಬಂದಿದೆ. ಆದ್ರೆ ವ್ಯಾಕ್ಸಿನ್ ಹೋಗ್ತಿರೋದು ಎಲ್ಲಿ ಎಂಬ ಪ್ರಶ್ನೆಗೆ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ.

ರಾಜ್ಯದಲ್ಲಿ ಐದು ಪ್ರತಿಷ್ಠಿತ ಆಸ್ಪತ್ರೆಗಳ ಪಾಲಾಗುತ್ತಿದೆ ವ್ಯಾಕ್ಸಿನ್ ಲಸಿಕೆ ತಯಾರಿಕೆ ಕಂಪನಿಗಳು ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಮಾರಾಟ ಮಾಡುತ್ತಿವೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಲಸಿಕೆ ತಯಾರಿಕಾ ಕಂಪನಿಗಳಿಂದ ಐದು ಪ್ರತಿಷ್ಠಿತ ಆಸ್ಪತ್ರೆಗಳು ಲಸಿಕೆ ಖರೀದಿ ಮಾಡ್ತಿವೆ. ಕಂಪನಿಗಳು ಸರ್ಕಾರಕ್ಕೆ ಲಸಿಕೆ ಕಡಿಮೆ ಕೊಟ್ಟು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಲಸಿಕೆ ಸರಬರಾಜು ಮಾಡುತ್ತಿವೆ. ಲಸಿಕೆ ಪಡೆದ ಖಾಸಗಿ ಆಸ್ಪತ್ರೆಗಳು ಇದರಿಂದ ಹಣ ಮಾಡಿಕೊಳ್ಳುತ್ತಿವೆ. ಅಪಾರ್ಟ್ಮೆಂಟ್, ಐಟಿ ಬಿಟಿ ಕಂಪನಿ, ಗಾರ್ಮೆಂಟ್ಸ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ‌ ಜೊತೆ ಒಪ್ಪಂದ ಮಾಡಿಕೊಂಡು ಆಸ್ಪತ್ರೆಗಳು ಲಸಿಕೆ ನೀಡಿ ಹಣ ಪಡೆಯುತ್ತಿವೆ. ಖಾಸಗಿ ಆಸ್ಪತ್ರೆಗಳು ಆಯಾ ಸ್ಥಳಕ್ಕೆ‌ ಹೋಗಿ ವ್ಯಾಕ್ಸಿನ್ ನೀಡುತ್ತಿವೆ. ಪ್ರತಿ ಡೋಸ್ಗೆ 800-1000 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಬಿಬಿಎಂಪಿಯಿಂದ ಉಚಿತವಾಗಿ ವ್ಯಾಕ್ಸಿನ್ ಸಿಗದ ಕಾರಣ, ಜನ ಅನಿವಾರ್ಯವಾಗಿ ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ರಾಜ್ಯದ ಪ್ರಭಾವಿ ನಾಯಕರು ಸರ್ಕಾರದಲ್ಲಿ ಲಸಿಕೆ ಅಭಾವ ಹೆಚ್ಚಿಸಿ, ಖಾಸಗಿ ಆಸ್ಪತ್ರೆಗಳಿಗೆ ಲಾಭ ಮಾಡಿಸುತ್ತಿದ್ದಾರೆ ಎಂದು ಲಸಿಕೆ ತಾರತಮ್ಯದ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಖಾಸಗಿ ಆಸ್ಪತ್ರೆಗಳು ಈಗಾಗಲೇ ಅಪಾರ್ಟ್ಮೆಂಟ್ಗಳಲ್ಲಿ ಲಸಿಕೆ ನೀಡುತ್ತಿದ್ದು. ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದೆ. ಆದರೆ ಬಿಬಿಎಂಪಿ ಲಸಿಕಾ ಕೇಂದ್ರಗಳಲ್ಲಿ‌ ಲಸಿಕೆನೇ ಬರ್ತಿಲ್ಲವೆಂದು ಅಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕೊರೊನಾ ಲಕ್ಷಣ ಇದ್ದರೆ ಪ್ಯಾರಾಸಿಟಮಾಲ್, ಕಫ್ ಸಿರಪ್ ಮಾತ್ರ ನೀಡಬೇಕು; ಜಿಂಕ್, HCQ ಮಾತ್ರೆ ಇತ್ಯಾದಿ ನೀಡುವಂತಿಲ್ಲ: ಪರಿಷ್ಕೃತ ಮಾರ್ಗಸೂಚಿ

Follow us on

Related Stories

Most Read Stories

Click on your DTH Provider to Add TV9 Kannada