ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ; ಅವರ ವರ್ಗಾವಣೆಗೆ ಪಿತೂರಿ ನಡೀತಿದೆ: ವಾಟಾಳ್ ನಾಗರಾಜ್ ಆಕ್ರೋಶ
ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ. ಅವರ ವರ್ಗಾವಣೆಗೆ ದೊಡ್ಡ ಪಿತೂರಿ ನಡೀತಿದೆ. ಯಾವುದೇ ಕಾರಣಕ್ಕೂ ರೋಹಿಣಿ ವರ್ಗಾವಣೆ ಮಾಡಬಾರದು ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹ ವ್ಯಕ್ತಪಡಿಸಿದ್ದಾರೆ.
ಮೈಸೂರು: ನಗರದಲ್ಲಿ ನಡೆದಿರುವ ಭೂ ಹಗರಣದ ತನಿಖೆಗೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಧರಣಿ ನಡೆಸಿದ್ದಾರೆ. ಕಳೆದ 25 ವರ್ಷಗಳಿಂದ ಸಾಕಷ್ಟು ಭೂ ಹಗರಣ ನಡೆದಿದೆ. ಈ ಭೂ ಹಗರಣದ ಬಗ್ಗೆ ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಲಿ. ಜಿಲ್ಲಾಧಿಕಾರಿ 25 ವರ್ಷದ ಕಡತ ಪರಿಶೀಲನೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರವಾಗಿ ವಾಟಾಳ್ ನಾಗರಾಜ್ ಮಾತನಾಡಿದ್ದಾರೆ. ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ. ಅವರ ವರ್ಗಾವಣೆಗೆ ದೊಡ್ಡ ಪಿತೂರಿ ನಡೀತಿದೆ. ಯಾವುದೇ ಕಾರಣಕ್ಕೂ ರೋಹಿಣಿ ವರ್ಗಾವಣೆ ಮಾಡಬಾರದು ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹ ವ್ಯಕ್ತಪಡಿಸಿದ್ದಾರೆ.
ನನಗೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಆಗಲ್ಲ. ಆದರೆ, ರೋಹಿಣಿ ವರ್ಗಾವಣೆ ಮಾಡಬಾರದೆಂದು ಹೇಳುವೆ. ರೋಹಿಣಿ ದಕ್ಷ ಅಧಿಕಾರಿಯಾಗಿದ್ದರಿಂದ ಅವರ ವರ್ಗಾವಣೆಗೆ ಪಿತೂರಿ ನಡೆದಿದೆ. ಅವರ ಕೆಲಸದಿಂದಾಗಿ ಕೆಲವರ ಬಂಡವಾಳ ಬಯಲಾಗುತ್ತೆ ಎಂದು ವರ್ಗಾಣೆಗೆ ಪಿತೂರಿ ನಡೆದಿದೆ. ಯಾರು ಪಿತೂರಿ ಮಾಡುತ್ತಿದ್ದಾರೆಂದು ನಾನು ಹೇಳುವುದಿಲ್ಲ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಬೇಕು ಎಂದು ಸರ್ಕಾರಕ್ಕೆ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯ ಮಾಡಿದ್ಧಾರೆ. ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದಂತೆ, ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ರದ್ದುಗೊಳಿಸಬೇಕು. ಪರೀಕ್ಷೆ ನಡೆಸದೆ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ- ಮೇಯರ್ ಜಟಾಪಟಿ: ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ ಶಿಲ್ಪಾ ನಾಗ್
Published On - 3:11 pm, Sat, 5 June 21