ದೂರು ನೀಡದೆ ಸುದ್ದಿಗೋಷ್ಠಿ ನಡೆಸಿದ್ದು ಆಡಳಿತಾತ್ಮಕ ಉಲ್ಲಂಘನೆ ಅಲ್ಲವೇ?: ಶಿಲ್ಪಾ ನಾಗ್​ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಶ್ನೆ

ದೂರು ನೀಡದೆ ಸುದ್ದಿಗೋಷ್ಠಿ ನಡೆಸಿದ್ದು ಆಡಳಿತಾತ್ಮಕ ಉಲ್ಲಂಘನೆ ಅಲ್ಲವೇ?: ಶಿಲ್ಪಾ ನಾಗ್​ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಶ್ನೆ
ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆಪಾದಿಸಿ ಸಾರ್ವಜನಿಕ ಹೇಳಿಕೆ ನೀಡಿದ್ದ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.

TV9kannada Web Team

| Edited By: ganapathi bhat

Jun 04, 2021 | 5:52 PM

ಮೈಸೂರು: ಯಾವ ಆಧಾರದಲ್ಲಿ ನೀವು ಸುದ್ದಿಗೋಷ್ಠಿ ನಡೆಸಿದ್ರಿ? ಸುದ್ದಿಗೋಷ್ಠಿ ನಡೆಸುವ ಉದ್ದೇಶ ಏನಿತ್ತು ಎಂದು ನಿನ್ನೆಯ ಸುದ್ದಿಗೋಷ್ಠಿ ಬಗ್ಗೆ ಶಿಲ್ಪಾ ನಾಗ್ ಬಳಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ. ನನಗೆ ಈ ವಿಚಾರವಾಗಿ ದೂರು ನೀಡಬಹುದಿತ್ತು. ದೂರು ನೀಡದೇ ಏಕಾಏಕಿ ಸುದ್ದಿಗೋಷ್ಠಿ ನಡೆಸಿದ್ದೀರಿ. ಈ ಕಾರ್ಯ ಆಡಳಿತಾತ್ಮಕ ಉಲ್ಲಂಘನೆ ಅಲ್ಲವೆ ಎಂದು ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆಪಾದಿಸಿ ಸಾರ್ವಜನಿಕ ಹೇಳಿಕೆ ನೀಡಿದ್ದ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ. ತಾವು ಮಾಡಿರುವ ದೂರಿನ ಬಗ್ಗೆ ದಾಖಲೆಗಳನ್ನು ಕೂಡ ಕೇಳಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪಗಳಿಗೆ ದಾಖಲೆ ಇವೆಯಾ? ಎಂದು ಕೇಳಿದ್ದಾರೆ.

ವಾಟ್ಸಾಪ್​ ಗ್ರೂಪ್​ನಿಂದ ತಮ್ಮನ್ನು ತೆಗೆದುಹಾಕಿದ್ದ ಬಗ್ಗೆ ಶಿಲ್ಪಾ ನಾಗ್ ಮಾಹಿತಿ ನೀಡಿದ್ದಾರೆ. ಸಿಎಸ್​ಆರ್ ಫಂಡ್ ವಿಚಾರವಾಗಿ ಮಾಡಿದ್ದ ಗ್ರೂಪ್ ಒಂದರಿಂದ ತೆಗೆದುಹಾಕಿದ್ದ ಬಗ್ಗೆ ಹೇಳಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ವಿವರಣೆ ನೀಡಿ ಎಂದು ರವಿಕುಮಾರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಕೊವಿಡ್ ನಿರ್ವಹಣಾ ಸಭೆಯಲ್ಲಿ ರವಿಕುಮಾರ್ ಭಾಗವಹಿಸಿದ್ದಾರೆ. ಸಭೆ ಮುಕ್ತಾಯವಾದ ಬಳಿಕ, ಕೆ.ಆರ್. ಆಸ್ಪತ್ರೆಗೆ ಸಿಎಸ್ ರವಿಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೈಸೂರು ಜಿಲ್ಲೆಯ ಕೊವಿಡ್ ನಿರ್ವಹಣೆ ಸಭೆ ಮುಕ್ತಾಯವಾದ ಬಳಿಕ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಜೊತೆ ನಡೆಸಿದ್ದಾರೆ. ಸಭೆಗೂ ಮೊದಲೇ ಜಿಲ್ಲಾಧಿಕಾರಿ ಬಳಿ ಜಟಾಪಟಿ ಕುರಿತು ರವಿಕುಮಾರ್ ಮಾಹಿತಿ ಪಡೆದಿದ್ದರು ಎಂದು ತಿಳಿದುಬಂದಿದೆ.

ಬಳಿಕ, ಟಿವಿ9 ಜೊತೆ ಮಾತನಾಡಿದ ರವಿಕುಮಾರ್, ಈಗ ಶಿಲ್ಪಾ ನಾಗ್ ವಿಚಾರ ಮಾತನಾಡುವುದಿಲ್ಲ. ಆ ಬಗ್ಗೆ ಪ್ರತಿಕ್ರಿಯರ ನೀಡುವುದಿಲ್ಲ. ನಾನು ಬೇರೆ ಕೆಲಸಕ್ಕೆ ಬಂದಿದ್ದೇನೆ. ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್ ಹೇಚ್ವಿದೆ. ಅದನ್ನು ಕಂಟ್ರೋಲ್ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ಮೈಸೂರಲ್ಲಿ ಅಧಿಕಾರಿಗಳ‌ ಮಧ್ಯೆ ಗೊಂದಲ‌ ಇರುವುದು ನಿಜ. ಬೆಂಗಳೂರಿಗೆ ಹೋಗಿ ಎಲ್ಲಾ ಸರಿಪಡಿಸುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಜಟಾಪಟಿಗೆ ಶಾಸಕರು ಕಿಡಿಕಾರಿದ್ದಾರೆ.

ಇಬ್ಬರು ಅಧಿಕಾರಿಗಳನ್ನು ಮೊದಲು ಮನೆಗೆ ಕಳುಹಿಸಬೇಕು. ಇಂತಹ ಸಮಯದಲ್ಲಿ ಮಾನವೀಯ ಮನಸ್ಥಿತಿ ಇರಬೇಕಿತ್ತು. ಜಗಳ ಇಬ್ಬರು ಅಧಿಕಾರಿಗಳ ಯೋಗ್ಯತೆಗೆ ತಕ್ಕ ಕೆಲಸ ಅಲ್ಲ. ಆಂತರಿಕ ವಿಚಾರ ಇದ್ದರೆ ಸಚಿವರ ಜತೆ ಚರ್ಚೆ ನಡೆಸಬೇಕಿತ್ತು. ಅಲ್ಲಿನ ಉಸ್ತುವಾರಿ ಸಚಿವರು ಈ ಬಗ್ಗೆ ತೀರ್ಮಾನಿಸಬೇಕು ಎಂದು ಮಡಿಕೇರಿಯಲ್ಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹೇಳಿಕೆ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕ ಪ್ರಸಂಗಿ. ಕೊವಿಡ್ ಸಂಕಷ್ಟದಲ್ಲಿ ಅಧಿಕಾರಿಗಳ ಕೆಸರೆರಚಾಟ ಸರಿಯಲ್ಲ. ಡಿಸಿಗೆ ಹೆದರಿ ಪಾಲಿಕೆ ಆಯುಕ್ತೆ ಏಕೆ ರಾಜೀನಾಮೆ ನೀಡಬೇಕು? ಸರ್ಕಾರ ಇಬ್ಬರೂ ಅಧಿಕಾರಿಗಳನ್ನ ನಿಯಂತ್ರಣದಲ್ಲಿಡಬೇಕು. ಇಬ್ಬರೂ ಅಧಿಕಾರಿಗಳಿಗೆ ಸರ್ಕಾರದ ಸಿಎಸ್ ಬುದ್ಧಿ ಹೇಳಲಿ ಎಂದು ಚಾಮರಾಜನಗರದಲ್ಲಿ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ಇದನ್ನೂ ಓದಿ: Shilpa Nag Vs Rohini Sindhuri : ಶಿಲ್ಪಾನಾಗ್ ಆರೋಪಗಳಿಗೆ ಡಿಸಿ ರೋಹಿಣಿ ಸಿಂಧೂರಿ ಪ್ರತಿಕ್ರಿಯೇನು..?

ಐಎಎಎಸ್ vs ಐಎಎಸ್​: ಮೈಸೂರಿಗೆ ಮುಖ್ಯಕಾರ್ಯದರ್ಶಿ ಭೇಟಿ, ಶಿಲ್ಪಾ ನಾಗ್​ಗೆ ಪಾಲಿಕೆ ಸದಸ್ಯರ ಬೆಂಬಲ

Follow us on

Related Stories

Most Read Stories

Click on your DTH Provider to Add TV9 Kannada