Ballari News: ಬಳ್ಳಾರಿ ಜಿಲ್ಲೆಯ 180 ಮಕ್ಕಳನ್ನು ಅನಾಥರನ್ನಾಗಿಸಿದ ಕೊರೊನಾ ಎರಡನೇ ಅಲೆ
ಬಳ್ಳಾರಿ ಜಿಲ್ಲೆವೊಂದರಲ್ಲಿಯೇ 18 ವರ್ಷದೊಳಗಿನ 180 ಕ್ಕೂ ಹೆಚ್ಚು ಮಕ್ಕಳು ಕೆಲವರು ತಂದೆಯನ್ನ ಕಳೆದುಕೊಂಡಿದರೆ. ಇನ್ನೂ ಕೆಲವರು ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಇನ್ನು ಮನೆಯ ಆಧಾರ ಸ್ತಂಬವನ್ನು ಕಳೆದುಕೊಂಡು ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ.
ಬಳ್ಳಾರಿ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದ ಏರಿಕೆ ಕಂಡುಬಂದಿದೆ. ಅದೇಷ್ಟೋ ಕುಟುಂಬ ತನ್ನವರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಜೀವನ ಸಾಗಿಸುವಂತಾಗಿದೆ. ಕುಟುಂಬದಲ್ಲಿ ಒಬ್ಬರನ್ನು ಕಳೆದುಕೊಂಡು ಜೀವನ ಸಾಗಿಸುವ ಧೈರ್ಯದಿಂದ ದೂರವಾದವರನ್ನು ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರಪಂಚದ ಅರಿವೇ ಇಲ್ಲದ ಆದೆಷ್ಟೋ ಕಂದಮ್ಮಗಳು ಕೊವಿಡ್ನಿಂದಾಗಿ ಹೆತ್ತವರನ್ನು ಕಳೆದುಕೊಂಡಿದ್ದು, ಅನಾಥರಾಗಿದ್ದಾರೆ. ಇಂತಹದ್ದೇ ಪರಿಸ್ಥಿತಿ ಸದ್ಯ ಬಳ್ಳಾರಿ ಜಿಲ್ಲೆಯದ್ದಾಗಿದ್ದು, 180 ಮಕ್ಕಳು ತಂದೆ- ತಾಯಿ ಇಲ್ಲದೆ ಒಂಟಿಯಾಗಿದ್ದಾರೆ.
ಬಳ್ಳಾರಿ ಜಿಲ್ಲೆವೊಂದರಲ್ಲಿಯೇ 18 ವರ್ಷದೊಳಗಿನ 180 ಕ್ಕೂ ಹೆಚ್ಚು ಮಕ್ಕಳು ಕೆಲವರು ತಂದೆಯನ್ನ ಕಳೆದುಕೊಂಡಿದರೆ. ಇನ್ನೂ ಕೆಲವರು ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಇನ್ನು ಮನೆಯ ಆಧಾರ ಸ್ತಂಬವನ್ನು ಕಳೆದುಕೊಂಡು ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಇದಕ್ಕೆ ಸಾಕ್ಷಿ ಬಳ್ಳಾರಿ ನಗರದ ತಾಳೂರು ರಸ್ತೆಯ ನಿವಾಸಿ ವಿನೂತ. ಒಂದು ತಿಂಗಳ ಹಿಂದೆಯಷ್ಟೇ ಪತಿ ನಾಗರಾಜ್ನನ್ನು ಕೊವಿಡ್ನಿಂದಾ ಕಳೆದುಕೊಂಡಿದ್ದಾರೆ. ಖಾಸಗಿ ಇನ್ಸುರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನಾಗರಾಜ್ ಕೊವಿಡ್ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪತಿಯನ್ನು ಕಳೆದುಕೊಂಡ ಪತ್ನಿ ವಿನೂತರಿಗೆ ಇಬ್ಬರು ಮಕ್ಕಳಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರಿಗೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಿನೂತ ಈಗಾಗಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಈಗ ಇಬ್ಬರು ಚಿಕ್ಕ ಮಕ್ಕಳು ಬಿಟ್ಟರೆ ಯಾರೂ ಇಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ನನಗೆ ಯಾರಾದರು ಸಹಾಯ ಮಾಡಿ ಎಂದು ವಿನೂತ ಅಳಲು ತೋಡಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಇಂದಿರಾನಗರದ ನಿವಾಸಿಯಾಗಿರುವ ಇಬ್ಬರು ಮಕ್ಕಳು ಈಗ ತಂದೆ-ತಾಯಿಯನ್ನ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಮಾರೆಪ್ಪ(55) ಹಾಗೂ ಉಮಾ(44) ಅವರಿಗೆ ಕಳೆದ ತಿಂಗಳು ಮೇ 27 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಒಂದೇ ದಿನದ ಅಂತರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ತಂದೆ-ತಾಯಿಯನ್ನ ಕಳೆದುಕೊಂಡ ಈ ಇಬ್ಬರು ಮಕ್ಕಳಿಗೆ ಈಗ ದಿಕ್ಕೆ ತೋಚದಂತಾಗಿದೆ. ಜೀವನ ಹೇಗೆ ನಿರ್ವಹಿಸಬೇಕು ಎನ್ನುವ ಚಿಂತೆ ಈ ಮಕ್ಕಳನ್ನ ಕಾಡುತ್ತಿದೆ. ಬಡತನದಲ್ಲಿರುವ ಈ ಮಕ್ಕಳಿಗೆ ಈಗ ಸಹಾಯದ ಹಸ್ತ ಬೇಕಾಗಿದೆ.ಇನ್ನೂ ತಂದೆ-ತಾಯಿಯನ್ನ ಕಳೆದುಕೊಂಡ ಈ ಮಕ್ಕಳಿಗೆ ಸರ್ಕಾರ ನೆರವಿಗೆ ಬರಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ 180 ಕ್ಕೂ ಹೆಚ್ಚು ಮಕ್ಕಳು ಕೆಲವರು ತಂದೆ-ಇನ್ನೂ ಕೆಲವರು ತಾಯಿಯನ್ನ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.ಅದೆಷ್ಟೂ ಕುಟುಂಬಗಳು ಈ ಕ್ರೂರಿ ಕೊರೊನಾಕ್ಕೆ ನಲುಗಿ ಹೋಗಿವೆ.ಸರ್ಕಾರ ಈ ಚಿಕ್ಕ ಮಕ್ಕಳ ನೆರವಿಗೆ ನಿಂತು ಸದ್ಯ ವಿದ್ಯಾವಂತರನ್ನಾಗಿ ಮಾಡಬೇಕು ಎನ್ನುವುದು ಸ್ಥಳೀಯರ ಆಶಯ.
ಇದನ್ನೂ ಓದಿ:
ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್ಕೆಜಿಯಿಂದ ಇಂಜಿನಿಯರಿಂಗ್ವರೆಗೂ ಉಚಿತ ಶಿಕ್ಷಣ: ಶ್ರೀ ಸಿದ್ಧರಾಮ ಸ್ವಾಮೀಜಿ
ಕೊರೊನಾ ಆತಂಕ ಮುಗಿದರೂ ದೂರವಾಗಿಲ್ಲ ಸಂಕಷ್ಟ; ಬ್ಲ್ಯಾಕ್ ಫಂಗಸ್ಗೆ ನಲುಗಿದ ಬೀದರ್