ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನಿಯರಿಂಗ್​ವರೆಗೂ ಉಚಿತ ಶಿಕ್ಷಣ: ಶ್ರೀ ಸಿದ್ಧರಾಮ ಸ್ವಾಮೀಜಿ

ಶ್ರೀಮಠದ ವಸತಿನಿಲಯಲ್ಲಿ ಇದ್ದು ಕಲಿಯುವಂತರಿಗೂ ಎಲ್ಲ ರೀತಿಯ ವ್ಯವಸ್ಥೆ ಮಾಡುವುದಾಗಿ ಶ್ರೀಗಳು ಹೇಳಿದ್ದಾರೆ. ಅಷ್ಟೇ ಅಲ್ಲ ಕೊವಿಡ್ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೂ ಶ್ರೀಮಠ ಸಾಥ್ ನೀಡಿದೆ. ಆ ಮೂಲಕ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮಠದ ಕಾಲೇಜನ್ನು ಕೊವಿಡ್ ಕೇರ್ ಸೆಂಟರ್ ಮಾಡಲು ಅನುಮತಿ ನೀಡಿದ್ದಾರೆ.

ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನಿಯರಿಂಗ್​ವರೆಗೂ ಉಚಿತ ಶಿಕ್ಷಣ: ಶ್ರೀ ಸಿದ್ಧರಾಮ ಸ್ವಾಮೀಜಿ
ಶ್ರೀ ಸಿದ್ಧರಾಮ ಸ್ವಾಮೀಜಿ
Follow us
preethi shettigar
|

Updated on: May 30, 2021 | 12:41 PM

ಗದಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ ಈ ಬಾರಿಯ ಕೊರೊನಾ ಮನೆಮಂದಿಯನ್ನೇಲ್ಲಾ ಬಲಿ ಪಡೆದಿದ್ದು, ಎಷ್ಟೋ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ಕೊವಿಡ್​ನಿಂದಾಗಿ ಉಂಟಾದ ಈ ದುಸ್ಥಿತಿಯನ್ನು ಅರಿತ ಗದಗದ ತೋಂಟದಾರ್ಯ ಮಠದ ಸ್ವಾಮೀಜಿ. ಕೊರೊನಾದಿಂದ ತಂದೆ- ತಾಯಿಗಳನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಆ ಮೂಲಕ ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹ ನೀಡಲು ಶ್ರೀಮಠ ಮುಂದಾಗಿದೆ.

ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನೀಯರಿಂಗ್​ವರೆಗೂ ಉಚಿತ ಶಿಕ್ಷಣ ನೀಡುವುದಾಗಿ ತೋಂಟದಾರ್ಯ ಮಠದ ಶ್ರೀಗಳು ಹೇಳಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಮಠವಾದ ಗದಗದ ತೋಂಟದಾರ್ಯ ಮಠ ಸಂದಿಗ್ಧ ಪರಿಸ್ಥಿತಿಯಲ್ಲಿ ಟೊಂಕ ಕಟ್ಟಿ ನಿಂತು ಸಹಾಯ ಮಾಡುತ್ತದೆ. ಕಳೆದ ಬಾರಿ ಕೊರೊನಾ ಒಂದನೇಯ ಅಲೆಯಲ್ಲಿ ಆಹಾರ ನೀಡಿ ಮಾನವೀಯತೆ ಮೆರೆದಿತ್ತು. ಈ ಬಾರಿಯೂ ಕೂಡ ಸಾಕಷ್ಟು ಜನರು ಹೊಟ್ಟೆಗೆ ಹಿಟ್ಟು ಇಲ್ಲದೆ ಬಳಲುತ್ತಿದ್ದಾರೆ. ಬಡವರು, ನಿರ್ಗತಿಕರು, ಕಾರ್ಮಿಕರು ಸೇರಿದಂತೆ ನಿತ್ಯ ದುಡಿದು ಬಂದ ಹಣದಿಂದ ಜೀವನ ನಡೆಸುವ ಜನರ ಹಸಿವು ನೀಗಿಸುವ ಕೆಲಸಕ್ಕೆ ಶ್ರೀ ಮಠ ಮುಂದಾಗಿದೆ.

ಶ್ರೀ ಸಿದ್ಧರಾಮ ಸ್ವಾಮೀಜಿಗಳ ನೇತೃತ್ವದಲ್ಲಿ, ಶ್ರೀ ತೋಂಟದಾರ್ಯ ಸಿದ್ಧಲಿಂಗೇಶ್ವರ ಕೈಂಕರ್ಯ ದಾಸೋಹ ಸೇವಾ ಸಂಘ ಎಡೆಯೂರ, ವತಿಯಿಂದ ದಿನಸಿ ಸಾಮಾಗ್ರಿಗಳ ವಿತರಣಾ ಅಭಿಯಾನ ಶುರು ಮಾಡಲಾಗಿದೆ. ಸದ್ಯ ಒಂದು ಸಾವಿರ ಕಿಟ್ ತಯಾರಿಸಿದ್ದು, ಜಿಲ್ಲಾಡಳಿತ ಗುರುತಿಸಿದ ಬಡವರು, ನಿರ್ಗತಿಕರು, ಸೇರಿದಂತೆ ಸಂಕಷ್ಟಕ್ಕೆ ಸಿಲುಕಿದವರಿಗೆ ಶ್ರೀ ಮಠದಿಂದ ಅಗತ್ಯ ವಸ್ತುಗಳ ಕಿಟ್ ನೀಡಲಾಗುತ್ತದೆ. ಮುಂದೆ ಇನ್ನೂ ಹೆಚ್ಚಿನ ಕಿಟ್ ತಯಾರಿಸಿ, ನೀಡೋದಾಗಿ ಗದಗ ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ.

ಶ್ರೀಮಠದ ವಸತಿನಿಲಯಲ್ಲಿ ಇದ್ದು ಕಲಿಯುವಂತರಿಗೂ ಎಲ್ಲ ರೀತಿಯ ವ್ಯವಸ್ಥೆ ಮಾಡುವುದಾಗಿ ಶ್ರೀಗಳು ಹೇಳಿದ್ದಾರೆ. ಅಷ್ಟೇ ಅಲ್ಲ ಕೊವಿಡ್ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೂ ಶ್ರೀಮಠ ಸಾಥ್ ನೀಡಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮಠದ ಕಾಲೇಜನ್ನು ಕೊವಿಡ್ ಕೇರ್ ಸೆಂಟರ್ ಮಾಡಲು ಅನುಮತಿ ನೀಡಿದ್ದಾರೆ. ಇನ್ನೂ ತೋಂಟದಾರ್ಯ ಮಠದ ಸಂಸ್ಥಾನ ಮಠಗಳ ಕಾಲೇಜನ್ನು ಕೊವಿಡ್ ಸೆಂಟರ್ ಮಾಡಿಕೊಳ್ಳಲು ಆಯಾ ಜಿಲ್ಲಾಡಳಿತ ಮುಂದೆ ಬಂದರೆ ನೀಡುವುದಾಗಿ ಹೇಳಿದ್ದಾರೆ.

ಧಾರ್ಮಿಕ ಸೇವೆಯ ಜೊತೆ ಜೊತೆಗೆ ಕಷ್ಟದ ಕಾಲದಲ್ಲಿ ಜನರ ನೆರವಿಗೆ ನಿಂತ ಗದಗದ ತೋಂಟದಾರ್ಯ ಮಠಕ್ಕೆ ಸದ್ಯ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೇ ರೀತಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರ ನೆರವಿಗೆ ಈ ಮಠ ನಿಲ್ಲಲಿ ಎಂದು ಸಾರ್ವಜನಿಕರು ಶ್ಲಾಫಿಸಿದ್ದಾರೆ.

ಇದನ್ನೂ ಓದಿ:

ಗವಿಮಠದಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧಾರ; ಶ್ರೀಗಳಿಗೆ ಧನ್ಯವಾದ ತಿಳಿಸಿದ ಸಚಿವ ಬಿ.ಸಿ.ಪಾಟೀಲ್

ಪ್ರೌಢಶಾಲೆಯನ್ನೇ ಕೊವಿಡ್ ಕೇರ್ ಸೆಂಟರ್ ಮಾಡಿದ ಆದಿಚುಂಚನಗಿರಿ ಮಠ; ಕೊರೊನಾ ನಿರ್ವಹಣೆಗೆ ಕಾಲೇಜಿನ ಬಸ್ ಬಳಕೆ