AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ: ಜೆಡಿಎಸ್ ವ್ಯಂಗ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2025-26ರ ಬಜೆಟ್ ಕರ್ನಾಟಕದ ಸಾಲದ ಮಟ್ಟದ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜ್ಯದ ಸಾಲವು 7.6 ಲಕ್ಷ ಕೋಟಿ ರೂ. ತಲುಪುವ ಆತಂಕವಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಒದಗಿಸಲು ಸರ್ಕಾರ ಸಾಲದ ಮೊರೆ ಹೋಗುತ್ತಿದ್ದು, ಬಡ್ಡಿ ಪಾವತಿಗಾಗಿಯೇ ವರ್ಷಕ್ಕೆ 50,000 ಕೋಟಿ ರೂ. ಮೀಸಲಿಡಬೇಕಾಗಿದೆ. ವಿರೋಧ ಪಕ್ಷಗಳು ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿವೆ.

ಸಿಎಂ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ: ಜೆಡಿಎಸ್ ವ್ಯಂಗ್ಯ
ಸಾಂದರ್ಭಿಕ ಚಿತ್ರ
Sunil MH
| Edited By: |

Updated on: Mar 03, 2026 | 5:18 PM

Share

ಬೆಂಗಳೂರು, ಮಾ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2025-26ರ ಆಯವ್ಯಯದ ಮೇಲೆ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ರಾಜ್ಯದ ಸಾಲದ ಪ್ರಮಾಣವು ಅಪಾಯಕಾರಿ ಮಟ್ಟವನ್ನು ತಲುಪುತ್ತಿದ್ದು, ಮುಂದಿನ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲ 7,64,655 ಕೋಟಿ ರೂಪಾಯಿ ದಾಟಲಿದೆ ಎಂಬ ಅಂಕಿಅಂಶಗಳು ಆತಂಕ ಮೂಡಿಸಿವೆ. 2025-26ರ ಅಂತ್ಯಕ್ಕೆ ಈ ಸಾಲದ ಪರಿಣಾಮ ಜನರ ಮೇಲೆ ಬೀಳಲಿದೆ. ಪ್ರಸಕ್ತ ಆರ್ಥಿಕ ವರ್ಷವೊಂದರಲ್ಲೇ ಸರ್ಕಾರ ಸುಮಾರು 1.16 ಲಕ್ಷ ಕೋಟಿ ರೂ. ಸಾಲ ಪಡೆದಿದೆ ಎಂದು ಜೆಡಿಎಸ್​​​ ಎಕ್ಸ್​​​ನಲ್ಲಿ ಬರೆದುಕೊಂಡಿದೆ.

ವಾರ್ಷಿಕವಾಗಿ ಸುಮಾರು 50,000 ಕೋಟಿ ರೂ. ಹಣವನ್ನು ಕೇವಲ ಸಾಲದ ಬಡ್ಡಿ ಪಾವತಿಗಾಗಿಯೇ ಮೀಸಲಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆ ಉಂಟುಮಾಡಬಹುದು. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 50,000 ರಿಂದ 60,000 ಕೋಟಿ ರೂ. ಅಗತ್ಯವಿದ್ದು, ಇದನ್ನು ಸರಿದೂಗಿಸಲು ಸರ್ಕಾರ ಸಾಲದ ಮೊರೆ ಹೋಗುತ್ತಿದೆ ಎಂದು ಹೇಳಿದೆ.

JDS  ಹಂಚಿಕೊಂಡ ಪೋಸ್ಟ್​​ನಲ್ಲಿ ಏನಿದೆ ?

ಗ್ಯಾರಂಟಿಯಿಂದ ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞ @siddaramaiah, ಕರ್ನಾಟಕದ ಜನರ ತಲೆಯ ಮೇಲೆ ಮತ್ತೊಂದು ಸಾಲದ ಹೊರೆ ಹೊರಿಸುವ ಬಜೆಟ್‌ ಮಂಡಿಸಲು ರೆಡಿಯಾಗಿದ್ದಾರೆ. 2025-26 ರ ಅಂತ್ಯಕ್ಕೆ ಕರ್ನಾಟಕ ರಾಜ್ಯದ ಒಟ್ಟು ಸಾಲ 7,64,655 ಕೋಟಿ ರೂ. ದಾಟಲಿದೆ. ವಾರ್ಷಿಕ 50,000 ಕೋಟಿ ರೂ. ಗಳಷ್ಟು ಬಡ್ಡಿ ಪಾವತಿ ಒತ್ತಡ, ಆದಾಯ ಹಾಗೂ ಖರ್ಚಿನ ನಡುವಿನ ಅಂತರ @INCKarnataka ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.16 ಲಕ್ಷ ಕೋಟಿ ರೂ. ಸಾಲ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಕ್ಕಾ ಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ.

ಇದನ್ನೂ ಓದಿ: ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ಡಿಸಿಎಂ ನಡೆ

ಜೆಡಿಎಸ್​​​​ ಪೋಸ್ಟ್​​;

ತೆರಿಗೆ ಸಂಗ್ರಹದ ಗುರಿ ತಲುಪಿದರೂ, ಬದ್ಧ ವೆಚ್ಚಗಳು (ಸಂಬಳ, ಪಿಂಚಣಿ, ಬಡ್ಡಿ) ಮತ್ತು ಗ್ಯಾರಂಟಿ ವೆಚ್ಚಗಳ ನಡುವಿನ ಸಮತೋಲನ ಕಾಪಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.16 ಲಕ್ಷ ಕೋಟಿ ರೂ. ಎಂದು ಹೇಳಿದೆ. ಈ ಮೂಲಕ ಸಾಲ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಕ್ಕಾ ಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ರಾಜ್ಯದ ಸಾಲವು ಜಿಎಸ್‌ಡಿಪಿ (GSDP) ಮಿತಿಯೊಳಗೇ ಇದೆ. ಬಡವರ ಕೈಗೆ ಹಣ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಚಲಾವಣೆ ಹೆಚ್ಚುತ್ತಿದ್ದೇವೆ” ಎಂದು ಈ ಹಿಂದೆಯೇ ಸರ್ಕಾರ ಸಮರ್ಥಿಸಿಕೊಂಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹರಿಹರ ಪಂಚಮಸಾಲಿ ಮಠದಲ್ಲಿ 'ಲೆಕ್ಕ ಕೊಡಿ' ಅಭಿಯಾನ
ಹರಿಹರ ಪಂಚಮಸಾಲಿ ಮಠದಲ್ಲಿ 'ಲೆಕ್ಕ ಕೊಡಿ' ಅಭಿಯಾನ
ರಿಶಿ ಸುನಾಕ್ ಹೆಂಡತಿ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ?
ರಿಶಿ ಸುನಾಕ್ ಹೆಂಡತಿ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ?
ಚಿನ್ನದ ದರ ಇಳಿಕೆ ಬೆನ್ನಲ್ಲೇ ಜ್ಯುವೆಲ್ಲರಿಗಳಿಗೆ ಮುಗಿಬೀಳುತ್ತಿರುವ ಜನ!
ಚಿನ್ನದ ದರ ಇಳಿಕೆ ಬೆನ್ನಲ್ಲೇ ಜ್ಯುವೆಲ್ಲರಿಗಳಿಗೆ ಮುಗಿಬೀಳುತ್ತಿರುವ ಜನ!
ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ರಾಜಧಾನಿ ಜನರ ಕ್ಯೂ!
ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ರಾಜಧಾನಿ ಜನರ ಕ್ಯೂ!
ಟ್ರಕ್​ನಿಂದ ಹಾರಿ ಪ್ರಾಣ ಉಳಿಸಿಕೊಂಡು, 17 ಕಿ.ಮೀ ನಡೆದ ನಾಯಿಗಳು
ಟ್ರಕ್​ನಿಂದ ಹಾರಿ ಪ್ರಾಣ ಉಳಿಸಿಕೊಂಡು, 17 ಕಿ.ಮೀ ನಡೆದ ನಾಯಿಗಳು
ತೆಲುಗಿಗೆ ಹೊರಟ ಕಿರಣ್​ ರಾಜ್, ನಮ್ರತಾ, ಭವ್ಯಾ
ತೆಲುಗಿಗೆ ಹೊರಟ ಕಿರಣ್​ ರಾಜ್, ನಮ್ರತಾ, ಭವ್ಯಾ
ಲಿಯಾರಿಯ ಬೀದಿ ಬೀದಿಗಳಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳಿಗಾಗಿ ಹುಡುಕಾಟ?
ಲಿಯಾರಿಯ ಬೀದಿ ಬೀದಿಗಳಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳಿಗಾಗಿ ಹುಡುಕಾಟ?
'ಬಂದರೋ ಬಂದರೋ ಭಾವ ಬಂದರೋ' ಎಂದು ರಿಕ್ಕಿ ರೈ ಲಾಯರ್ ಕಾಲೆಳೆದ ಪೊಲೀಸರು!
'ಬಂದರೋ ಬಂದರೋ ಭಾವ ಬಂದರೋ' ಎಂದು ರಿಕ್ಕಿ ರೈ ಲಾಯರ್ ಕಾಲೆಳೆದ ಪೊಲೀಸರು!
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಡ್ರೈವರ್ ಟ್ಯಾಲೆಂಟ್ ಮೆಚ್ಚಬೇಕೆಂದ ಲಾಯರ್!
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಡ್ರೈವರ್ ಟ್ಯಾಲೆಂಟ್ ಮೆಚ್ಚಬೇಕೆಂದ ಲಾಯರ್!
ರಘು ಜಿಮ್ ಅಲ್ಲಿ ಫಿಟ್ನೆಸ್​ ಎಕ್ಸ್​​ಪರ್ಟ್ ಆದ ರಕ್ಷಿತಾ ಶೆಟ್ಟಿ
ರಘು ಜಿಮ್ ಅಲ್ಲಿ ಫಿಟ್ನೆಸ್​ ಎಕ್ಸ್​​ಪರ್ಟ್ ಆದ ರಕ್ಷಿತಾ ಶೆಟ್ಟಿ