ಎಸ್ಎಸ್ಎಲ್​ಸಿ, ಪ್ರಥಮ ಪಿಯು ಅಂಕ ಪರಿಗಣಿಸಿ ದ್ವಿತೀಯ ಪಿಯುಸಿ ಫಲಿತಾಂಶ ನೀಡಿ: ಸಚಿವ ಎಸ್.ಸುರೇಶ್ ಕುಮಾರ್ ಸೂಚನೆ

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣಗೆ ವೃತ್ತಿಪರ ಕೋರ್ಸ್​ಗೆ ಸಿಇಟಿ ಅಂಕ ಮಾತ್ರ ಪರಿಗಣಿಸಿ ಎಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ಕೊರೊನಾ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿಲ್ಲ. ಹೀಗಾಗಿ ಈ ಬಾರಿ ಕೇವಲ ಗ್ರೇಡಿಂಗ್ ಮಾತ್ರ ನೀಡಲಾಗಿದೆ. ಇದರಿಂದ ದ್ವಿತೀಯ ಪಿಯು ಫಲಿತಾಂಶವನ್ನು ಪರಿಗಣಿಸಬೇಡಿ.

ಎಸ್ಎಸ್ಎಲ್​ಸಿ, ಪ್ರಥಮ ಪಿಯು ಅಂಕ ಪರಿಗಣಿಸಿ ದ್ವಿತೀಯ ಪಿಯುಸಿ ಫಲಿತಾಂಶ ನೀಡಿ: ಸಚಿವ ಎಸ್.ಸುರೇಶ್ ಕುಮಾರ್ ಸೂಚನೆ
ಸಚಿವ ಎಸ್. ಸುರೇಶ್ ಕುಮಾರ್
Follow us
TV9 Web
| Updated By: sandhya thejappa

Updated on: Jun 05, 2021 | 2:31 PM

ಬೆಂಗಳೂರು: ಇಂದಿನ ಸಂದರ್ಭದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವು ಇನ್ನಷ್ಟು ಸಮಗ್ರವಾಗಲು ಹಾಗೂ ಹೆಚ್ಚು ನ್ಯಾಯಯುತವಾಗಲು ವಿದ್ಯಾರ್ಥಿಗಳ ಎಸ್ಎಸ್ಎಲ್​ಸಿ ಫಲಿತಾಂಶವನ್ನು ಅವಲೋಕಿಸಿ, ಸೂಕ್ತ ಮೌಲ್ಯವನ್ನು ಕಲ್ಪಿಸುವ ಮೂಲಕ ಫಲಿತಾಂಶ ಘೋಷಣೆ ಮಾಡಬೇಕೆಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಸ್ಎಸ್ಎಲ್ಸಿ ಬೋರ್ಡ್​ನಿಂದ ಫಲಿತಾಂಶ ಪಡೆಯಬೇಕು. ಪ್ರಥಮ ಪಿಯು ಅಂಕಗಳೊಂದಿಗೆ ಸೇರಿಸಿ ಗ್ರೇಡಿಂಗ್ ನೀಡಿ. ಜೂನ್ ಅಂತ್ಯದೊಳಗೆ ಗ್ರೇಡಿಂಗ್ ನೀಡಲು ವ್ಯವಸ್ಥೆ ಮಾಡಿ ಎಂದು ಸಚಿವರು ತಿಳಿಸಿದ್ದಾರೆ.

ವೃತ್ತಿಪರ ಕೋರ್ಸ್​ಗೆ ಸಿಇಟಿ ಅಂಕ ಮಾತ್ರ ಪರಿಗಣಿಸಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣಗೆ ವೃತ್ತಿಪರ ಕೋರ್ಸ್​ಗೆ ಸಿಇಟಿ ಅಂಕ ಮಾತ್ರ ಪರಿಗಣಿಸಿ ಎಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ಕೊರೊನಾ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿಲ್ಲ. ಹೀಗಾಗಿ ಈ ಬಾರಿ ಕೇವಲ ಗ್ರೇಡಿಂಗ್ ಮಾತ್ರ ನೀಡಲಾಗಿದೆ. ಇದರಿಂದ ದ್ವಿತೀಯ ಪಿಯು ಫಲಿತಾಂಶವನ್ನು ಪರಿಗಣಿಸಬೇಡಿ. ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ. ಈಗ ಇರುವ ಸಿಇಟಿ ಪ್ರಕ್ರಿಯೆ ಕೈಬಿಡುವಂತೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

2 ದಿನದಲ್ಲಿ ದ್ವಿತೀಯ ಪಿಯುಸಿ ಗ್ರೇಡಿಂಗ್ ಪ್ರಕಟ ದ್ವಿತೀಯ ಪಿಯುಸಿ ಗ್ರೇಡಿಂಗ್​ನ 2 ದಿನದಲ್ಲಿ ಪ್ರಕಟಿಸುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್.ಸ್ನೇಹಲ್ ತಿಳಿಸಿದ್ದಾರೆ. ಎಸ್ಎಸ್ಎಲ್​ಸಿ ಮತ್ತು ಪ್ರಥಮ ಪಿಯು ಅಂಕವನ್ನು ಆಧರಿಸಿ ಗ್ರೇಡಿಂಗ್ ನೀಡುತ್ತೇವೆ. ಪ್ರತಿ ವರ್ಷ ಅಂಕಗಳ ಮೂಲಕ ಫಲಿತಾಂಶ ನೀಡಲಾಗುತ್ತಿತ್ತು. ಈ ಬಾರಿ A, B, C ಗ್ರೇಡಿಂಗ್ ನೀಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಪ್ರತಿ ವಿಷಯಕ್ಕೂ ಪ್ರತ್ಯೇಕವಾಗಿ ಗ್ರೇಡ್ ನೀಡಲಾಗುವುದು ಎಂದು ಹೇಳಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂಕ, ಗ್ರೇಡ್ ಜೊತೆ ಗ್ರೇಸ್ ಮಾರ್ಕ್ಸ್ ನೀಡಲು ಚಿಂತನೆ ಮಾಡಲಾಗಿದೆ. ಶೇಕಡಾ 5, 7, 10 ಗ್ರೇಸ್ ಮಾರ್ಕ್ಸ್ ನೀಡಲು ಚಿಂತನೆ ನಡೆಸಿದ್ದು, ಫಲಿತಾಂಶದ ಆಧಾರದ ಮೇಲೆ ಗ್ರೇಸ್ ಮಾರ್ಕ್ಸ್ ನೀಡುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್.ಸ್ನೇಹಲ್ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ: ಡಾ.ಅಶ್ವತ್ಥನಾರಾಯಣ ಏನೇ ಮಾಡಿದರು ವಿದ್ಯಾರ್ಥಿಗಳ ಹಿತಕ್ಕಾಗಿ, ಅವರ ಭವಿಷ್ಯದ ಹಿತದೃಷ್ಟಿಯಿಂದ ಎಸ್ಎಸ್ಎಲ್​ಸಿ ಪರೀಕ್ಷೆಯನ್ನು ಮಾಡಲಾಗುವುದು. ಪರೀಕ್ಷೆಯನ್ನು ಸರಳಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿ ಸರಳಗೊಳಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

2nd PUC Exam 2021: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಎಸ್ಎಸ್ಎಲ್​ಸಿಗೆ 2 ಪೇಪರ್​ ಪರೀಕ್ಷೆ- ಸಚಿವ ಸುರೇಶ್ ಕುಮಾರ್

ಎಸ್‌ಎಸ್‌ಎಲ್​​ಸಿಗೆ ಪರೀಕ್ಷೆ: ಇದು ರಾಜ್ಯ ಸರ್ಕಾರದ ಬುದ್ಧಿಭ್ರಮಣೆ ನಿರ್ಧಾರ, ಬೃಹಸ್ಪತಿ ಶಿಕ್ಷಣ ಸಚಿವರ ನಿರ್ಧಾರ ಎಂದ ಹೆಚ್‌.ಡಿ. ಕುಮಾರಸ್ವಾಮಿ

(Suresh Kumar suggested that Consider SSLC and First PU score and then give the results of second PUC)