ನೂರಕ್ಕೆ ನೂರು ಲಸಿಕೆ ಪಡೆದ ಬೀದರ್ ಜಿಲ್ಲೆಯ ಎರಡು ಗ್ರಾಮ; ಮೂಢನಂಬಿಕೆಯಿಂದ ಹೊರ ಬಂದು ಇತರರಿಗೆ ಮಾದರಿ
ಔರಾದ್ ತಾಲೂಕಿನ ಉಚ್ಚಾ ಗ್ರಾಮದಲ್ಲಿ 2470 ಜನ ಸಂಖ್ಯೆಯಿದ್ದು, 45 ಮೆಲ್ಪಟ್ಟ ಸುಮಾರು 1054 ಜನರಿಗೆ ಕೊರೊನಾ ವಾಕ್ಸಿನ್ ಹಾಕಿಸಿಕೊಂಡಿದ್ದು ಅನಾರೋಗ್ಯ ಸಮಸ್ಯೆಯಿರುವ 18 ಜನರು ಮಾತ್ರ ಕೊರೊನಾ ವಾಕ್ಸಿನ್ ಹಾಕಿಸಿಕೊಂಡಿಲ್ಲ.
ಬೀದರ್ : ಕೊರೊನಾ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಅದರಂತೆ ಎಲ್ಲಾ ಜಿಲ್ಲೆಗಳಲ್ಲೂ ಈಗ ಕೊರೊನಾ ಸೋಂಕು ಕಡಿಮೆಯಾಗುತ್ತಾ ಬಂದಿದೆ. ಬೀದರ್ ಜಿಲ್ಲೆಯಲ್ಲಿಯೂ ಕೂಡ ಕೊವಿಡ್ ನಿಧಾನಗತಿಯಲ್ಲಿ ದೂರವಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಲ್ಲಿ ಸ್ವಲ್ಪಮಟ್ಟಿಗೆ ನಿರಾಳಭಾವನೆ ಮೂಡಿದೆ. ಸದ್ಯ ಜಿಲ್ಲಾಡಳಿತಕ್ಕೆ ಖುಷಿ ತಂದ ವಿಚಾರವೇ ಬೇರೆ. ಅದೆನೆಂದರೆ ಬೀದರ್ ಜಿಲ್ಲೆಯ ಎರಡು ಗ್ರಾಮಗಳು ನೂರಕ್ಕೆ ನೂರರಷ್ಟು ಲಸಿಕೆ ಪಡೆದಿದ್ದು, ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದ ಮಂದಿಗೆ ಮಾದರಿಯಾಗಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳ ಮುಂದೆ ಬರದೆ ಜಿಲ್ಲಾಡಳಿತಕ್ಕೆ ಆತಂಕ ಶುರುವಾಗಿತ್ತು. ಆದರೆ ಈಗ ಜಿಲ್ಲೆಯ ಔರಾದ್ ತಾಲೂಕಿನ ಚಾದೋರಿ ಹಾಗೂ ಭಾಲ್ಕಿ ತಾಲೂಕಿನ ಉಚ್ಚಾಗ್ರಾಮ ನೂರಕ್ಕೆ ನೂರು ಲಸಿಕೆ ಹಾಕಿಸಿಕೊಂಡಿದ್ದು ಜಿಲ್ಲಾಡಳಿತಕ್ಕೆ ನೆಮ್ಮದಿ ತಂದಿದೆ. ಬೀದರ್ ಜಿಲ್ಲೆಯ ಈ ಎರಡು ಗ್ರಾಮಗಳು ರಾಜ್ಯದ ಗಡಿ ಹಂಚಿಕೊಂಡಿದ್ದು, ಬಹು ಭಾಷೆಯನ್ನಾಡುವ ಜನರಿದ್ದಾರೆ.
ಔರಾದ್ ತಾಲೂಕಿನ ಉಚ್ಚಾ ಗ್ರಾಮದಲ್ಲಿ 2470 ಜನ ಸಂಖ್ಯೆಯಿದ್ದು, 45 ಮೆಲ್ಪಟ್ಟ ಸುಮಾರು 1054 ಜನರಿಗೆ ಕೊರೊನಾ ವಾಕ್ಸಿನ್ ಹಾಕಿಸಿಕೊಂಡಿದ್ದು ಅನಾರೋಗ್ಯ ಸಮಸ್ಯೆಯಿರುವ 18 ಜನರು ಮಾತ್ರ ಕೊರೊನಾ ವಾಕ್ಸಿನ್ ಹಾಕಿಸಿಕೊಂಡಿಲ್ಲ. 18 ರಿಂದ 44 ವರ್ಷದೊಳಗಿನ ಎಲ್ಲರೂ ವಿಕಲಚೇತನರು, ಅಂಧರು ಸೇರಿದಂತೆ ಎಲ್ಲರು ಕೂಡಾ ವಾಕ್ಸಿನ್ ಹಾಕಿಸಿಕೊಂಡಿದ್ದು ಜಿಲ್ಲೆಗೆ ಮಾದರಿಯಾಗಿ ನಿಂತಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ದೀಪಕ್ ಪಾಟೀಲ್ ತಿಳಿಸಿದ್ದಾರೆ.
ಚಾಂದೋರಿ ಗ್ರಾಮದಲ್ಲಿ ನೂರಕ್ಕೆ ನೂರಷ್ಟು ವಾಕ್ಸಿನ್ ಹಾಕಿಸುದೆಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಇದು ಸಾಧ್ಯವಾಗಿದ್ದು, ಗ್ರಾಮ ಪಂಚಾಯತಿ ಸದಸ್ಯರ ಸಹಕಾರದಿಂದ. ಮೊದ ಮೊದಲು ಲಸಿಕೆಯನ್ನು ಪಡೆದುಕೊಳ್ಳುವಲ್ಲಿ ಇಲ್ಲಿನ ಜನರು ಹಿಂದೇಟು ಹಾಕಿದ್ದು, ಈ ಲಸಿಕೆಯಿಂದ ಎಲ್ಲಿ ಏನಾಗತ್ತೋ ಎಂದು ಭಯ ಇತ್ತು. ನಂತರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಲ್ಲಿನ ಸದಸ್ಯರುಗಳು ಜರಿಗೆ ಲಸಿಕೆ ಬಗ್ಗೆ ಮನವರಿಕೆ ಮಾಡಿ, ನಂತರ ಒಬ್ಬೊಬ್ಬರು ಬಂದು ಲಸಿಕೆಯನ್ನು ಪಡೆದು ತಮ್ಮ ಮನೆಯ ಅಕ್ಕ ಪಕ್ಕದ ಮನೆಯವರಿಗೆ ತಿಳಿಸಿದ್ದಾರೆ.
ಈಗ ಸುಮಾರು 45 ವರ್ಷ ಮೇಲ್ಪಟ್ಟವರಿಗೆ ಶೇ 98 ರಷ್ಟು ಜನರು ಕೊವಿಡ್ ಲಸಿಕೆ ಪಡೆದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಈ ಗ್ರಾಮದಂತೆ ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮವೂ ಕೂಡಾ ನೂರಕ್ಕೆ ನೂರರಷ್ಟು ಕೊವಿಡ್ ವಾಕ್ಸಿನ್ ಹಾಕಿಸಿಕೊಂಡಿದೆ. ಇಲ್ಲಿನ ಗ್ರಾಮ ಪಂಚಾಯತ್ ಸದಶ್ಯರು, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಗ್ರಾಮದ ಹಿರಿಯರು ಎಲ್ಲರ ಸಹಕಾರದಿಂದ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಚ್ಚಾಗ್ರಾಮದಲ್ಲಿ ಎಲ್ಲರೂ ಕೂಡಾ ವಾಕ್ಸಿನ್ ಹಾಕಿಸಿಕೊಂಡಿದ್ದು, ಇನ್ನೂಳಿದ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮದಲ್ಲಿಯೂ ವಾಕ್ಸಿನ್ ಹಾಕಿಸಿಕೊಳ್ಳುಲು ಪ್ರಯತ್ನ ಮುಂದೂವರೆಸಿರುವುದಾಗಿ ಪಿಡಿಓ ವಿಶ್ವದೀಪ್ ಹೇಳಿದ್ದಾರೆ.
ಒಟ್ಟಾರೆ ಹಳ್ಳಿ ಹಳ್ಳಿಗೂ ಕೊರೊನಾ ದಾಪುಗಾಲಿಡುತ್ತಿರುವ ಈ ವೇಳೆಗೆ ಗ್ರಾಮದ ಜನ ಮೂಡನಂಬಿಕೆಯಿಂದ ಹೊರಬಂದು ಲಸಿಕೆ ಪಡೆದಿರುವುದು ನಿಜಕ್ಕೂ ಶ್ಲಾಘನೀಯ. ಇಲ್ಲಿನ ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ಪರಿಶ್ರಮದಿಂದಾಗಿ ಸಂರ್ಪೂಣವಾಗಿ ಈ ಗ್ರಾಮದಲ್ಲಿ ಲಸಿಕೆಯನ್ನು ತೆಗೆದುಕೊಳ್ಳಲಾಗಿದೆ ಎನ್ನುವುದು ಕೂಡ ಅಷ್ಟೇ ನಿಜ.
ಇದನ್ನೂ ಓದಿ:
ಗದಗ: ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ರೇಷನ್ ಇಲ್ಲ; ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ
ಕೊರೊನಾ ಲಸಿಕೆ ಪಡೆದವರಿಗಷ್ಟೇ ಮದ್ಯ; ಸರ್ಟಿಫಿಕೇಟ್ ತೋರಿಸುವುದು ಕಡ್ಡಾಯ ಎಂದ ಬಾರ್ ಮಾಲೀಕರು!