AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈನ್​ ಲಿಂಕ್ ಮಾದರಿಯಲ್ಲಿ ವಂಚಿಸುತ್ತಿದ್ದ ಆರೋಪಿ ಸೆರೆ: ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಕೆ.ವಿ.ಜಾನಿ ಬಂಧನ

ಒಬ್ಬರನ್ನು ಸದ್ಯಸರನ್ನಾಗಿ ಮಾಡಿಸಿದರೆ 4400 ರೂಪಾಯಿ ಲಾಭ ಸಿಗುತ್ತದೆ ಎಂದು ಆಮಿಷ ಒಡ್ಡಿದ ಕೆ. ವಿ. ಜಾನಿ‌ ಅದೇ ರೀತಿ 1 ಲಕ್ಷ ಸದಸ್ಯರನ್ನಾಗಿ ಮಾಡಿದರೆ 356 ಕೋಟಿ ಹಣ ಗಳಿಸಬಹುದೆಂದು ಚೈನ್ ಲಿಂಕ್ ರೀತಿಯಲ್ಲಿ ಆನ್ ಲೈನ್ ಮುಖಾಂತರ ವಂಚನೆ ನಡೆಸುತ್ತಿದ್ದ.

ಚೈನ್​ ಲಿಂಕ್ ಮಾದರಿಯಲ್ಲಿ ವಂಚಿಸುತ್ತಿದ್ದ ಆರೋಪಿ ಸೆರೆ: ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಕೆ.ವಿ.ಜಾನಿ ಬಂಧನ
ಕೆ.ವಿ.ಜಾನಿ
TV9 Web
| Updated By: preethi shettigar|

Updated on:Jun 05, 2021 | 12:36 PM

Share

ಬೆಂಗಳೂರಿನ: ಅರ್ಧಗಂಟೆ ಜಾಹಿರಾತು ನೋಡಿದರೆ ದಿನಕ್ಕೆ 240 ರೂಪಾಯಿ ಹಣ ಬರುತ್ತೆ ಎಂದು ಆನ್​ಲೈನ್​ನಲ್ಲಿ ಹೂಡಿಕೆ ಮಾಡಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. Www.jalilifestyle.com ಎಂಬ ವೆಬ್​ಸೈಟ್ ಮುಖಾಂತರ ಮೋಸ ಮಾಡುತ್ತಿದ್ದ ಕೆ. ವಿ. ಜಾನಿ‌ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. 1109 ರೂಪಾಯಿ ನೀಡಿ ಸದಸ್ಯತ್ವ ಪಡೆದುಕೊಂಡರೆ ತಿಂಗಳಿಗೆ 7200 ರೂಪಾಯಿ ವರ್ಷಕ್ಕೆ 86,400 ರೂಪಾಯಿ ದುಡಿಯಬಹುದು ಎಂದು ಜಾನಿ‌ ಆಮಿಷ ಒಡ್ಡುತ್ತಿದ್ದು, ಅದೇ ರೀತಿ ಒಬ್ಬ ಸದ್ಯಸ್ಯ 10 ಜನರನ್ನ ಸದ್ಯಸ್ಯರನ್ನಾಗಿ ಸೇರಿಸಬೇಕು ಎಂದು ಮೋಸ ಮಾಡುತ್ತಿದ್ದ.

ಇನ್ನು ಒಬ್ಬರನ್ನು ಸದ್ಯಸರನ್ನಾಗಿ ಮಾಡಿಸಿದರೆ 4400 ರೂಪಾಯಿ ಲಾಭ ಸಿಗುತ್ತದೆ ಎಂದು ಆಮಿಷ ಒಡ್ಡಿದ ಕೆ. ವಿ. ಜಾನಿ‌ ಅದೇ ರೀತಿ 1 ಲಕ್ಷ ಸದಸ್ಯರನ್ನಾಗಿ ಮಾಡಿದರೆ 356 ಕೋಟಿ ಹಣ ಗಳಿಸಬಹುದೆಂದು ಚೈನ್ ಲಿಂಕ್ ರೀತಿಯಲ್ಲಿ ಆನ್ ಲೈನ್ ಮುಖಾಂತರ ವಂಚನೆ ನಡೆಸುತ್ತಿದ್ದ. ಇದೇ ರೀತಿ ನಾಲ್ಕು ಲಕ್ಷ ಜನರಿಂದ ಹಣವನ್ನು ಹೂಡಿಕೆ ಮಾಡಿಕೊಂಡು ಅಡ್ವೈಟೈಸ್ಮೆಂಟ್ ಪ್ರಾಜೆಕ್ಟ್ ಎಂದು ಹೇಳಿ ಜನರಿಗೆ ಮೋಸ ಮಾಡಿದ್ದ. ಸದ್ಯ ವಂಚನೆಗೆ ಒಳಗಾದವರಿಂದ ನಿರಂತರ ದೂರು ದಾಖಲಾದ ಹಿನ್ನಲೆ ಸಿಸಿಬಿ ಪೊಲೀಸರು ಆರೋಪಿ ಜಾನಿಯನ್ನು ಬಂಧಿಸಿದ್ದಾರೆ.

ಮ್ಯಾನ್‌ಹೋಲ್‌ಗೆ ಬಿದ್ದಿದ್ದ ಕಾರ್ಮಿಕರ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ ರಾಮನಗರದ ಐಜೂರು ಬಡಾವಣೆಯಲ್ಲಿ ಮ್ಯಾನ್ ಹೋಲ್​ಗೆ ಬಿದ್ದು ಉಸಿರುಗಟ್ಟಿ ಅಸ್ವಸ್ಥರಾಗಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನೆನ್ನೆ ಮ್ಯಾನ್ ಹೋಲ್ ಒಳಗೆ ಬಿದ್ದು ಬೆಂಗಳೂರಿನ ಕಮಲಾನಗರ ನಿವಾಸಿಗಳಾದ ಮಂಜುನಾಥ್, ರಾಜೇಶ್, ಮಂಜುನಾಥ್ ಎಂಬುವವರು ಸಾವನ್ನಪ್ಪಿದರು. ಈ ಸಂಬಂಧ ಗುತ್ತಿಗೆದಾರರಾದ ಹರೀಶ್ ಸೇರಿ ಚಂದ್ರಶೇಖರ್, ಮನೋಜ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:

ಬೆಳಗ್ಗೆ ಡಾನ್ಸ್ ಕ್ಲಾಸ್, ಸಂಜೆಯಾಗುತ್ತಿದ್ದಂತೆ ದರೋಡೆ; ಸಿಸಿಬಿ ಪೊಲೀಸರಿಂದ ಐವರ ಬಂಧನ

ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆ; ಬಿ.ಯು. ನಂಬರ್ ನಿಮಗೆ ನೀಡಿದ್ದರೆ ಸಿಸಿಬಿಯಿಂದ ನಿಮಗೂ ಕರೆ ಬರಲಿದೆ

Published On - 12:31 pm, Sat, 5 June 21