ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆ; ಬಿ.ಯು. ನಂಬರ್ ನಿಮಗೆ ನೀಡಿದ್ದರೆ ಸಿಸಿಬಿಯಿಂದ ನಿಮಗೂ ಕರೆ ಬರಲಿದೆ
ಸಿಸಿಬಿ ತಂಡ ಬೆಡ್ ಬ್ಲಾಕ್ ಮಾಡಲು ಬಳಸಿದ BU ನಂಬರ್ಗಳ ಸಂಪರ್ಕ ಮಾಡುತ್ತಿದೆ. ವಾರ್ ರೂಂಗಳಲ್ಲಿ ಬೆಡ್ ಬ್ಲಾಕ್ ಆಗಿದ್ದ ಬಿಯು ನಂಬರ್ಗಳನ್ನ ಸಂಗ್ರಹಿಸಿ ಸಂಪರ್ಕಿಸಲಾಗುತ್ತಿದೆ. ಸಿಸಿಬಿ 4 ಸಾವಿರಕ್ಕೂ ಹೆಚ್ಚು ನಂಬರ್ಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದೆ.
ಬೆಂಗಳೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ ಬೆಂಗಳೂರಿನ ಕೋವಿಡ್ ಬೆಡ್ ಬ್ಲಾಕ್ ಹಗರಣ ಸಂಬಂಧ ತನಿಖೆ ವೇಳೆ ಮಹತ್ವದ ಮಾಹಿತಿಗಳು ಪತ್ತೆಯಾಗಿವೆ. ಬೆಡ್ ಬ್ಲಾಕಿಂಗ್ ಕೇವಲ ಬೊಮ್ಮನಹಳ್ಳಿ ಮತ್ತು ಬೆಂಗಳೂರು ಸೌತ್ ವಾರ್ ರೂಮ್ ನಲ್ಲಿ ಮಾತ್ರವಲ್ಲ. ಬಿಬಿಎಂಪಿಯ 8 ವಲಯಗಳಲ್ಲೂ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದ್ದು 2 ಮಾದರಿಯಲ್ಲಿ ಬೆಡ್ ಬ್ಲಾಕಿಂಗ್ ಪ್ರಕರಣವನ್ನು ವಿಂಗಡಿಸಿ ತನಿಖೆ ಮಾಡಲಾಗುತ್ತಿದೆ. ತನಿಖಾ ತಂಡ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ.
2 ಮಾದರಿಯಲ್ಲಿ ಬೆಡ್ ಬ್ಲಾಕಿಂಗ್ ಪ್ರಕರಣ ವಿಂಗಡನೆ 1. ಹಣ ಪಡೆದು ಬೆಡ್ ಬ್ಲಾಕ್ ಮಾಡುತ್ತಿದ್ದ ಪ್ರಕರಣಗಳು 2. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಸಮಾಜದ ಪ್ರಭಾವಿಗಳ ಮಾತಿನಂತೆ ಬೆಡ್ ಬ್ಲಾಕ್
ಮೊದಲ ಮಾದರಿಯಲ್ಲಿ ಬೆಡ್ ಬ್ಲಾಕ್ ಮಾಡಿರುವವರ ವಿರುದ್ಧ ಹೆಚ್ಚಿನ ಸಾಕ್ಷ್ಯಗಳ ಕಲೆ ಹಾಕಲಾಗುತ್ತಿದೆ. ಸಂಪೂರ್ಣ ಮಾಹಿತಿಯನ್ನು ಪರಿಶೀಲನೆ ಮಾಡಿದ ಬಳಿಕ ಬೆಡ್ ಬ್ಲಾಕ್ ಅಗಿರುವ ಸಂಖ್ಯೆ ಎಷ್ಟು ಎನ್ನುವುದು ಪತ್ತೆ ಮಾಡಲಾಗುತ್ತದೆ.
4 ಸಾವಿರಕ್ಕೂ ಹೆಚ್ಚು ನಂಬರ್ಗೆ ಸಿಸಿಬಿಯಿಂದ ಕರೆ
ಸಿಸಿಬಿ ತಂಡ ಬೆಡ್ ಬ್ಲಾಕ್ ಮಾಡಲು ಬಳಸಿದ BU ನಂಬರ್ಗಳ ಸಂಪರ್ಕ ಮಾಡುತ್ತಿದೆ. ವಾರ್ ರೂಂಗಳಲ್ಲಿ ಬೆಡ್ ಬ್ಲಾಕ್ ಆಗಿದ್ದ ಬಿಯು ನಂಬರ್ಗಳನ್ನ ಸಂಗ್ರಹಿಸಿ, ಆ ಸೋಂಕಿತರನ್ನ ಸಂಪರ್ಕಿಸಲಾಗುತ್ತಿದೆ. ಸಿಸಿಬಿ 4 ಸಾವಿರಕ್ಕೂ ಹೆಚ್ಚು ನಂಬರ್ಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದೆ. ಹೀಗೆ ಕರೆ ಮಾಡಿದ ಬಹುತೇಕ ಬಿಯು ನಂಬರ್ ಹೊಂದಿರುವವರು ನಮಗೆ ಮಾಹಿತಿಯೇ ಗೊತ್ತಿಲ್ಲ ಎನ್ನುತ್ತಿದ್ದಾರೆ. ಇನ್ನು ಸತ್ತಿರುವವರ ಹೆಸರಲ್ಲೂ ಬೆಡ್ ಬ್ಲಾಕ್ ಆಗಿರುವುದು ಸಿಸಿಬಿ ತನಿಖೆ ವೇಳೆ ಪತ್ತೆಯಾಗಿದೆ.
ಸಂಸದರು, ಶಾಸಕರ ವಿರುದ್ಧ FIR ಬೆಂಗಳೂರಿನಲ್ಲಿ ಕೊವಿಡ್ ಬೆಡ್ ಬ್ಲಾಕಿಂಗ್ ಪ್ರಕರಣ ಸಂಬಂಧ ವಾರ್ ರೂಂಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸಂಸದರು, ಶಾಸಕರ ವಿರುದ್ಧ FIR ದಾಖಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವಕೀಲ ಬಾಲನ್, ವರದರಾಜನ್ರಿಂದ ದೂರು ಸಲ್ಲಿಕೆಯಾಗಿದೆ. 2 ಸಮುದಾಯಗಳ ಮಧ್ಯೆ ಸೌಹಾರ್ದತೆ ಹಾಳುಗೆಡುವುದು, ವಾರ್ ರೂಂಗೆ ಅತಿಕ್ರಮ ಪ್ರವೇಶದ ಆರೋಪದಡಿ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಸ್ಪಷ್ಟನೆ; ‘ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರನ್ನು ಬೆಡ್ ಬ್ಲಾಕಿಂಗ್ ಹಗರಣದಲ್ಲಿ ತರಲಾಗಿದೆ’